ಗೆಳೆಯನ ಜೊತೆ ಮಹಾಕಾಳೇಶ್ವರಕ್ಕೆ ದೇಗುಲಕ್ಕೆ ಜಾನ್ವಿ ಭೇಟಿ..! ಗುಡ್‌ ನ್ಯೂಸ್‌ ಕೊಡ್ತಾರಾ ಶ್ರೀದೇವಿ ಪುತ್ರಿ..?

Janhvi kapoor Shikhar pahariya : ಜಾನ್ವಿ ಎಲ್ಲಿಗೆ ಹೋದರೂ ಶಿಕರ್ ಪಹಾರಿಯಾ ಅವಳೊಂದಿಗೆ ಇರುತ್ತಾರೆ. ಈಗಾಗಲೇ ಇಬ್ಬರೂ ಸಾಕಷ್ಟು ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸಧ್ಯ ಇಬ್ಬರು ಗುಡ್‌ ನ್ಯೂಸ್‌ ಕೊಡ್ತಾರಾ..? ಅಂತ ಫ್ಯಾನ್ಸ್‌ ಕಾಯುತ್ತಿದ್ದಾರೆ.

Written by - Krishna N K | Last Updated : Dec 6, 2023, 05:41 PM IST
  • ಜಾನ್ವಿ ಎಲ್ಲಿಗೆ ಹೋದರೂ ಶಿಕರ್ ಪಹಾರಿಯಾ ಅವಳೊಂದಿಗೆ ಇರುತ್ತಾರೆ.
  • ಇಬ್ಬರೂ ಸಾಕಷ್ಟು ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದರು.
  • ತ್ತೀಚೆಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಗೆಳೆಯನ ಜೊತೆ ಮಹಾಕಾಳೇಶ್ವರಕ್ಕೆ ದೇಗುಲಕ್ಕೆ ಜಾನ್ವಿ ಭೇಟಿ..! ಗುಡ್‌ ನ್ಯೂಸ್‌ ಕೊಡ್ತಾರಾ ಶ್ರೀದೇವಿ ಪುತ್ರಿ..? title=

Janhvi kapoor visited mahakal temple : ಅತಿಲೋಕ ಸುಂದರಿ ನಟಿ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ ಕಳೆದ ಕೆಲವು ದಿನಗಳಿಂದ ಶಿಖರ್ ಪಹರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಈ ಜೋಡಿ ಆದಷ್ಟು ಬೇಗ ಮದುವೆ ಆಗ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬಂದಿದೆ. ಇದೀಗ ಇಬ್ಬರು ಸೇರಿ ಉಜ್ಜಯಿಸಿ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದು, ಇದಕ್ಕೆ ಸಾಕ್ಷಿ ಎಂಬಂತಾಗಿದೆ.

ಹೌದು.. ನಟ ನಟಿಯರು, ಸೆಲೆಬ್ರೆಟಿಗಳು ಎಲ್ಲಾದರೂ ಒಂದು ಕಡೆ ಕಂಡರೆ ಸಾಕು ಅವರಿಬ್ಬರೂ ಸಂಬಂಧದಲ್ಲಿ ಅಂತ ನೆಟ್ಟಿಗರು ಹೊಸ ಕಥೆಯನ್ನು ಸೃಷ್ಟಿ ಮಾಡ್ತಾರೆ. ಅದರಂತೆ ನಟಿ ಜಾನ್ವಿ ಕಪೂರ್‌ ಮತ್ತು ಶಿಖರ್ ಪಹರಿಯಾ ಲವ್‌ನಲ್ಲಿದ್ದಾರೆ ಎಂಬ ಸುದ್ದಿ ಬಹಳಷ್ಟು ಸಮಯದಿಂದ ಕೇಳಿ ಬರುತ್ತಿದೆ. ಅಲ್ಲದೆ, ಆಗಾಗ ಇಬ್ಬರು ಹೊರಗಡೆ ಕಾಣಿಸಿಕೊಳ್ಳುವುದು ಇದಕ್ಕೆ ತುಪ್ಪ ಸುರಿದಂತಾಗುತ್ತದೆ.

ಇದನ್ನೂ ಓದಿ: 38 ರಿಂದ 18ರ ವಯಸ್ಸಿಗೆ ಕಾಲಿಟ್ರಾ ಜ್ಯೋತಿ..! ಅಬ್ಬಬ್ಬಾ.. ಫೋಟೋಸ್‌ ನೋಡಿ ಗೊತ್ತಾಗುತ್ತೆ..

ಒಂದು ರೀತಿ ನೆಟ್ಟಿಗರ ಹೇಳಿಕೆ ಸರಿಯನ್ನಿಸುತ್ತದೆ. ಏಕೆಂದರೆ, ಜಾನ್ವಿ ಎಲ್ಲಿಗೆ ಹೋದರೂ ಶಿಕರ್ ಪಹಾರಿಯಾ ಅವಳೊಂದಿಗೆ ಇರುತ್ತಾರೆ. ಈಗಾಗಲೇ ಇಬ್ಬರೂ ಸಾಕಷ್ಟು ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇವರ ಜೊತೆಗೆ ಒಬ್ಬ ತಮಿಳು ನಿರ್ದೇಶಕ ಕೂಡ ಇದ್ದದ್ದು, ಅಚ್ಚರಿ ಮೂಡಿಸಿದ್ದಾರೆ.

ಜಾನ್ವಿ ಕಪೂರ್ ಹೆಚ್ಚಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಅನೇಕ ಬಾರಿ ತಿರುಪತಿಗೆ ಹೋಗಿ ಬಂದಿದ್ದಾರೆ. ಇತ್ತೀಚೆಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋಗಿದ್ದರು. ಆದರೆ ಒಬ್ಬಳೇ ಅಲ್ಲ ತನ್ನ ಗೆಳೆಯ ಶಿಕರ್ ಪಹಾರಿಯಾನನ್ನೂ ಸಹ ಕರೆದುಕೊಂಡು ಹೋಗಿದ್ದಳು. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 

ಇದನ್ನೂ ಓದಿ: ಹನಿಮೂನ್‌ಗೆ ಹೋಗುವುದನ್ನು ಬಿಟ್ಟು ಪತಿ ಜೊತೆ ʻಕವಿಶೈಲʼಕ್ಕೆ ತೆರೆಳಿದ ಪೂಜಾ ಗಾಂಧಿ!

ಅಚ್ಚರಿ ಅಂದ್ರೆ ಇವರ ಜೊತೆಗೆ ತಮಿಳು ನಿರ್ದೇಶಕ ಅಟ್ಲಿ ಕೂಡ ಇದ್ದದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅಟ್ಲಿ ಇತ್ತೀಚೆಗೆ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಜೊತೆ 'ಜವಾನ್' ಎಂಬ ಬ್ಲಾಕ್‌ಬಸ್ಟರ್ ಚಿತ್ರ ಮಾಡಿದರು. ಆದರೆ ಜಾನ್ವಿ ಮತ್ತು ಅಟ್ಲಿ ಜೊತೆಯಾಗಿ ಯಾವುದೇ ಸಿನಿಮಾ ಮಾಡಿಲ್ಲ. ಇದೀಗ ಇವರಿಬ್ಬರು ಒಟ್ಟಿಗೆ ದೇವಸ್ಥಾನಕ್ಕೆ ಏಕೆ ಹೋದರು ಎಂಬ ಚರ್ಚೆ ನೆಟ್‌ನಲ್ಲಿ ಶುರುವಾಗಿದೆ.

ಇನ್ನು ಅಟ್ಲಿ ಜೊತೆ ಜಾನ್ವಿ ದೇವಸ್ಥಾನದಲ್ಲಿ ಕಾಣಿಸಿಕೊಂಡಾಗಿನಿಂದ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ. ಅಟ್ಲಿ ನಿರ್ದೇಶಿಸುತ್ತಿರುವ ಮುಂದಿನ ಚಿತ್ರದಲ್ಲಿ ಜಾನ್ವಿ ನಾಯಕಿಯಾಗಿ ನಟಿಸುತ್ತಾರಾ ಎಂಬ ಅನುಮಾನಗಳು ಶುರುವಾಗಿವೆ. ಇದೇ ನಿಜವಾದರೆ ಜಾನ್ವಿ ತಮಿಳು ಸಿನಿರಂಗಕ್ಕೆ ಪಾದಾರ್ಪಣೆ ಮಾಡೋದು ಪಕ್ಕಾ ಎನ್ನಲಾಗುತ್ತಿದೆ.  

ಇದನ್ನೂ ಓದಿ: ಬಿಗ್ ಬಾಸ್ ನಲ್ಲಿ ಅದಲು ಬದಲಾದ ಗಂಧರ್ವ ರಾಕ್ಷಸರು

ಜಾನ್ವಿ ಕಪೂರ್ ಕೊನೆಯದಾಗಿ ವರುಣ್ ಧವನ್ ಜೊತೆ 'ಬಾವಲ್' ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ರಾಜ್‌ಕುಮಾರ್ ರಾವ್ ಜೊತೆ 'ಮಿಸ್ಟರ್ ಅಂಡ್ ಮಿಸಸ್ ಮಹಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ಅವರು ಎನ್ಟಿಆರ್ ಜೊತೆಗಿನ 'ದೇವರ' ಚಿತ್ರದ ಮೂಲಕ ತೆಲುಗು ಚೊಚ್ಚಲ ಪ್ರವೇಶಕ್ಕೆ ಸಜ್ಜಾಗುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News