ಜವಾನ್‌ ಸಿನಿಮಾ ರಿಲೀಸ್‌ಗೂ ಮೊದಲೇ ಹೊಸ ದಾಖಲೆ

Jawan Movie Updates: ಭಾರೀ ನಿರೀಕ್ಷೆಗಳ ನಡುವೆ ಜವಾನ್ ಚಿತ್ರ ಇದೇ ತಿಂಗಳು 7 ರಂದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದೆ. ಪೋಸ್ಟರ್ ಹಾಗೂ ಟ್ರೇಲರ್ ಮೂಲಕ ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

Written by - Chetana Devarmani | Last Updated : Sep 4, 2023, 08:25 PM IST
  • ಶಾರುಖ್‌ ಖಾನ್‌ ಅಭಿನಯದ ಜವಾನ್‌
  • ಜವಾನ್ ಮುಂಗಡ ಟಿಕೆಟ್‌ ಬುಕಿಂಗ್
  • ಮುಂಗಡ ಟಿಕೆಟ್‌ ಬುಕಿಂಗ್‌ನಲ್ಲಿ ದಾಖಲೆ
ಜವಾನ್‌ ಸಿನಿಮಾ ರಿಲೀಸ್‌ಗೂ ಮೊದಲೇ ಹೊಸ ದಾಖಲೆ   title=
Jawan Movie

Jawan Advance Bookings: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್-ಅಟ್ಲಿ ಕಾಂಬಿನೇಷನ್ ನಲ್ಲಿ ತಯಾರಾದ ಚಿತ್ರ ಜವಾನ್. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್‌ನಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್ ಸೇತುಪತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಚಿತ್ರವು ಸೆಪ್ಟೆಂಬರ್ 7 ರಂದು ರಿಲೀಸ್‌ ಆಗಲಿದೆ. ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲೂ ಬಿಡುಗಡೆಯಾಗಲಿದೆ. 

ಈಗಾಗಲೇ ದೇಶಾದ್ಯಂತ ಬುಕ್ಕಿಂಗ್ ಆರಂಭವಾಗಿದೆ. ಅಭಿಮಾನಿಗಳು ಟಿಕೆಟ್‌ಗಾಗಿ ಮುಂಗಡ ಬುಕ್ಕಿಂಗ್ ಮಾಡುತ್ತಿದ್ದಾರೆ. ಮುಂಗಡ ಬುಕ್ಕಿಂಗ್ ಮೂಲಕ ಈ ಸಿನಿಮಾ ದಾಖಲೆ ಸೃಷ್ಟಿಸುತ್ತಿದೆ. ಟ್ರೇಲರ್ ಜೊತೆಗೆ ಚಿತ್ರದ ಕೆಲವು ವಿಡಿಯೋಗಳು ಈಗಾಗಲೇ ಲೀಕ್ ಆಗಿದ್ದು, ಭಾರೀ ಹವಾ ಸೃಷ್ಟಿಸಿದೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಅಡಿಯಲ್ಲಿ ಗೌರಿ ಖಾನ್ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್‌‌ ಪ್ರೋಮೋದಲ್ಲಿ ಕಾಣದ ಕಿಚ್ಚ ಸುದೀಪ್.. ಹಾಗಾದ್ರೆ ಈ ಬಾರಿ ಶೋ ನಡೆಸೋರು ಯಾರು? 

'ಜವಾನ್' ಚಿತ್ರದ ಮುಂಗಡ ಬುಕ್ಕಿಂಗ್‌ನೊಂದಿಗೆ ಎಲ್ಲಾ ಥಿಯೇಟರ್‌ಗಳು ಹೌಸ್‌ಫುಲ್ ಆಗುತ್ತಿವೆ. ಉತ್ತರ ಭಾರತ ಮಾತ್ರವಲ್ಲದೆ ದಕ್ಷಿಣದಲ್ಲೂ ಸಿನಿಮಾ ಮಂದಿರಗಳು ಭರ್ತಿಯಾಗುತ್ತಿವೆ. 

ಪಠಾಣ್ ಚಿತ್ರದ ಮೂಲಕ ಸೂಪರ್ ಹಿಟ್ ಪಡೆದ ಶಾರುಖ್ ಜವಾನ್ ಸಿನಿಮಾ ಮೂಲಕ ಮತ್ತೊಮ್ಮೆ ಜನರ ಮನಗೆಲ್ಲಲು ಬರುತ್ತಿದ್ದಾರೆ. ವಿಭಿನ್ನ ಶೇಡ್ ಇರುವ ಪಾತ್ರಗಳನ್ನು ಈ ಸಿನಿಮಾದಲ್ಲಿ ಮಾಡಿದ್ದಾರೆಯಂತೆ. ಶೇವ್ ಲುಕ್ ಅನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಖಂಡಿತಾ ಬಾಕ್ಸ್ ಆಫೀಸ್ ದಾಖಲೆ ಮುರಿಯಲಿದೆ ಎಂದು ಚಿತ್ರ ಪ್ರೇಮಿಗಳು ಭವಿಷ್ಯ ನುಡಿದಿದ್ದಾರೆ. ಬಿಡುಗಡೆಗಾಗಿ ಕಾಯುತ್ತಿದ್ದೇವೆ ಎಂಬ ಅಭಿಮಾನಿಗಳ ಪೋಸ್ಟ್ ಗಳು ವೈರಲ್ ಆಗುತ್ತಿವೆ.

ಇದನ್ನೂ ಓದಿ: Jawan: 300 ಕೋಟಿಯ ಜವಾನ್ ಚಿತ್ರಕ್ಕೆ ಅತಿ ಹೆಚ್ಚು ಸಂಭಾವನೆ ಪಡೆದವರು ಇವರೇ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News