'ಮೆಜೆಸ್ಟಿಕ್' ಮುಹೂರ್ತದಲ್ಲೇ 'ಕರಿಯ' ಡೀಲ್‌ ಕುದುರಿಸಿದ್ದ ಜೋಗಿ ಪ್ರೇಮ್..!

ಕನ್ನಡಿಗರು ಮರೆಯಲಾಗದ ಮೂವಿಗಳ ಲಿಸ್ಟ್‌ನಲ್ಲಿ ಪ್ರೇಮ್‌ ನಿರ್ದೇಶನದ ಕರಿಯ ಕೂಡ ಇದ್ದೇ ಇರುತ್ತದೆ. ನಿರ್ದೇಶಕರಾಗಿ ಚೊಚ್ಚಲ ಸಿನಿಮಾದಲ್ಲೇ ಪ್ರೇಮ್‌ ಗೆದ್ದು ಬೀಗಿದ್ದರು.ಹಾಡು, ಕಥೆ, ಅಭಿನಯ ಎಲ್ಲದರಲ್ಲೂ ಕರಿಯ ಸಿನಿಮಾ ಸಿಕ್ಸರ್‌ ಭಾರಿಸಿತ್ತು. ಆದರೆ 'ಕರಿಯ' ಸಿನಿಮಾ ಬಗ್ಗೆ ಈವರೆಗೂ ಬಿಟ್ಟುಕೊಡದ ಗುಟ್ಟೊಂದನ್ನು ಜೋಗಿ ಪ್ರೇಮ್‌ (Jogi Prem) ಈಗ ರಿವೀಲ್‌ ಮಾಡಿದ್ದಾರೆ. 

Written by - Malathesha M | Last Updated : Feb 23, 2022, 08:01 PM IST
  • ಕನ್ನಡಿಗರು ಮರೆಯಲಾಗದ ಮೂವಿಗಳ ಲಿಸ್ಟ್‌ನಲ್ಲಿ ಪ್ರೇಮ್‌ ನಿರ್ದೇಶನದ ಕರಿಯ ಕೂಡ ಇದ್ದೇ ಇರುತ್ತದೆ. ನಿರ್ದೇಶಕರಾಗಿ ಚೊಚ್ಚಲ ಸಿನಿಮಾದಲ್ಲೇ ಪ್ರೇಮ್‌ ಗೆದ್ದು ಬೀಗಿದ್ದರು.ಹಾಡು, ಕಥೆ, ಅಭಿನಯ ಎಲ್ಲದರಲ್ಲೂ ಕರಿಯ ಸಿನಿಮಾ ಸಿಕ್ಸರ್‌ ಭಾರಿಸಿತ್ತು.
  • ಆದರೆ 'ಕರಿಯ' ಸಿನಿಮಾ ಬಗ್ಗೆ ಈವರೆಗೂ ಬಿಟ್ಟುಕೊಡದ ಗುಟ್ಟೊಂದನ್ನು ಜೋಗಿ ಪ್ರೇಮ್‌ (Jogi Prem) ಈಗ ರಿವೀಲ್‌ ಮಾಡಿದ್ದಾರೆ.
'ಮೆಜೆಸ್ಟಿಕ್' ಮುಹೂರ್ತದಲ್ಲೇ 'ಕರಿಯ' ಡೀಲ್‌ ಕುದುರಿಸಿದ್ದ ಜೋಗಿ ಪ್ರೇಮ್..! title=

ಬೆಂಗಳೂರು: ಕನ್ನಡಿಗರು ಮರೆಯಲಾಗದ ಮೂವಿಗಳ ಲಿಸ್ಟ್‌ನಲ್ಲಿ ಪ್ರೇಮ್‌ ನಿರ್ದೇಶನದ ಕರಿಯ ಕೂಡ ಇದ್ದೇ ಇರುತ್ತದೆ. ನಿರ್ದೇಶಕರಾಗಿ ಚೊಚ್ಚಲ ಸಿನಿಮಾದಲ್ಲೇ ಪ್ರೇಮ್‌ ಗೆದ್ದು ಬೀಗಿದ್ದರು.ಹಾಡು, ಕಥೆ, ಅಭಿನಯ ಎಲ್ಲದರಲ್ಲೂ ಕರಿಯ ಸಿನಿಮಾ ಸಿಕ್ಸರ್‌ ಭಾರಿಸಿತ್ತು. ಆದರೆ 'ಕರಿಯ' ಸಿನಿಮಾ ಬಗ್ಗೆ ಈವರೆಗೂ ಬಿಟ್ಟುಕೊಡದ ಗುಟ್ಟೊಂದನ್ನು ಜೋಗಿ ಪ್ರೇಮ್‌ (Jogi Prem) ಈಗ ರಿವೀಲ್‌ ಮಾಡಿದ್ದಾರೆ. 

ಇದನ್ನೂ ಓದಿ: 'ಎಲ್ಲಾ ಮಾದರಿಯ ಕ್ರಿಕೆಟ್ ತಂಡಕ್ಕೆ ನಾಯಕನಾಗಿರುವುದು ಗೌರವದ ಸಂಗತಿ'

‌ಅಷ್ಟಕ್ಕೂ 'ಮೆಜೆಸ್ಟಿಕ್' ಸಿನಿಮಾ ನಂತರ 'ಕರಿಯ' ಚಿತ್ರದಲ್ಲಿ ದರ್ಶನ್‌ ಮಿಂಚಿದ್ದರು. ದರ್ಶನ್‌ ಅಭಿನಯದ ಚೊಚ್ಚಲ ಚಿತ್ರ 'ಮೆಜೆಸ್ಟಿಕ್' ಭರ್ಜರಿ ಯಶಸ್ಸು ಕಂಡಿತ್ತು.ಇನ್ನು ಇದನ್ನೆಲ್ಲಾ ಮೀರಿಸಿ ಅಬ್ಬರಿಸಿದ್ದು 'ಕರಿಯ' ಸಿನಿಮಾ. ಆದರೆ ಈ ಚಿತ್ರದ ಕುರಿತು ಮಹತ್ವದ ಮಾಹಿತಿಯೊಂದನ್ನ ನಿರ್ದೇಶಕ ಪ್ರೇಮ್‌ ಈಗ ಹಂಚಿಕೊಂಡಿದ್ದಾರೆ.

'ಮೆಜೆಸ್ಟಿಕ್' ಸೆಟ್ಟಲ್ಲೇ ಡೀಲ್…!‌

ಮೊದಲೇ ಹೇಳಿದಂತೆ 'ಮೆಜೆಸ್ಟಿಕ್' ಹಿಟ್‌ ಆದ ನಂತರ 'ಕರಿಯ' ಸಿನಿಮಾ ಕೂಡ ಬ್ಲಾಕ್‌ ಬಸ್ಟರ್‌ ಲಿಸ್ಟ್‌ಗೆ ಸೇರಿತ್ತು. ಆದರೆ 'ಮೆಜೆಸ್ಟಿಕ್' ಸಂದರ್ಭದಲ್ಲಿ ದರ್ಶನ್‌ ಗಾಂಧಿನಗರದ ಮಂದಿಗೆ ಪರಿಚಿತರಾಗಿರಲಿಲ್ಲ.ಈ ಸಂದರ್ಭದಲ್ಲೇ ಪ್ರೇಮ್‌ ತಮ್ಮ 'ಕರಿಯ' ಸಿನಿಮಾಗಾಗಿ ಡೀಲ್‌ ಕುದುರಿಸಿದ್ದರಂತೆ. ದರ್ಶನ್‌ರ ಮೊದಲ ಸಿನಿಮಾ 'ಮೆಜೆಸ್ಟಿಕ್' (Majestic) ಚಿತ್ರೀಕರಣ ಆರಂಭವಾಗುವ ಹೊತ್ತಲ್ಲೇ ಪ್ರೇಮ್‌ ಅಡ್ವಾನ್ಸ್ ಕೊಟ್ಟಿದ್ದರಂತೆ.

ಇದನ್ನೂ ಓದಿ: "ಅಪ್ಪು ಹೋದಮೇಲೆ ಈ ಹಾಡು ಹಾಡಲು ನನಗೆ ಭಯವಾಗುತ್ತಿದೆ".. ಭಾವುಕರಾದ ಗಾಯಕ ವಿಜಯ್‌ ಪ್ರಕಾಶ್

ಈ ಮೂಲಕ 'ಮೆಜೆಸ್ಟಿಕ್' ಮುಹೂರ್ತದಲ್ಲೇ 'ಕರಿಯ' ಡೀಲ್‌ ಕುದುರಿಸಿದ್ದ ಬಗ್ಗೆ ಜೋಗಿ ಪ್ರೇಮ್‌ ಬಾಯಿಬಿಟ್ಟಿದ್ದಾರೆ.ಈ ಮೂಲಕ ಇಷ್ಟು ವರ್ಷಗಳ ಕಾಲ ಗುಟ್ಟಾಗಿಯೇ ಇದ್ದ ವಿಚಾರ ರಟ್ಟಾಗಿದೆ.ಇನ್ನೇನು ಕೆಲವೇ ತಿಂಗಳಲ್ಲಿ 'ಕರಿಯ' ಸಿನಿಮಾ ಕೂಡ 20 ವರ್ಷ ಪೂರೈಸಲಿದ್ದು, ದರ್ಶನ್‌ ಅಭಿಮಾನಿ ಬಳಗಕ್ಕೆ ಇದು ಡಬಲ್‌ ಸರ್ಪ್ರೈಸ್ ಎನ್ನಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

 

Trending News