ಜೀ ಕನ್ನಡ ಯುಗಾದಿ ಸ್ಪೆಷಲ್‌ : ನಿಮ್ಮ ಮನೆಗೆ ಅತಿಥಿಯಾಗಲಿ ಬರಲಿದ್ದಾನೆ DBoss ʼಕಾಟೇರʼ

Kaatera on Zee Kannada : ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಕಾಟೇರ ಸಿನಿಮಾ ರಿಲೀಸ್ ಆಗಿ 4 ತಿಂಗಳು ಕಳೆದರು ಕ್ರೇಜ್ ಕಮ್ಮಿಯಾಗಿಲ್ಲ. ಇದೀಗ ಈ ಚಿತ್ರವನ್ನು ಥಿಯೇಟರ್‌ನಿಂದ ಹೋಂ ಥಿಯೇಟರ್‌ಗೆ ತರುವ ಕೆಲಸವನ್ನ ಜೀ ಕನ್ನಡ ವಾಹಿತಿ ಮಾಡುತ್ತಿದೆ..

Written by - Krishna N K | Last Updated : Apr 6, 2024, 12:37 PM IST
    • ಕಾಟೇರ ಸಿನಿಮಾ ರಿಲೀಸ್ ಆಗಿ 4 ತಿಂಗಳು ಕಳೆದರು ಕ್ರೇಜ್ ಕಮ್ಮಿಯಾಗಿಲ್ಲ.
    • ಕಾಟೇರ ನೋಡಲು ಕಾದಿರುವ ಕನ್ನಡಿಗರಿಗೆ, ಈ ಯುಗಾದಿ ಹಬ್ಬ ಸಖತ್ ಸ್ಪೆಷಲ್
    • ಕಾಟೇರ ಸಿನಿಮಾ ಥಿಯೇಟರ್‌ನಿಂದ ಹೋಂ ಥಿಯೇಟರ್‌ಗೆ
ಜೀ ಕನ್ನಡ ಯುಗಾದಿ ಸ್ಪೆಷಲ್‌ : ನಿಮ್ಮ ಮನೆಗೆ ಅತಿಥಿಯಾಗಲಿ ಬರಲಿದ್ದಾನೆ DBoss ʼಕಾಟೇರʼ title=

Kaatera world television premiere : ಅಭಿಮಾನಿಗಳು ಮೆಚ್ಚಿದ ಕನ್ನಡ ಸಿನಿಮಾಗಳನ್ನ ಕಿರುತೆರೆಯಲ್ಲಿನೆ ನೋಡುವ ಅವಕಾಶ ಮಾಡಿಕೊಡುವ ಕೆಲಸವನ್ನು ಜೀ ಕನ್ನಡ ವಾಹಿನಿ, ಹಲವು ವರ್ಷಗಳಿಂದ ಮಾಡುತ್ತಲೆ ಬಂದಿದೆ. ಅದೇ ಸಂಪ್ರದಾಯವನ್ನ ಈಗಲೂ ಮುಂದುವರಿಸಲು ಹೊರಟಿರುವ ಜೀ ಕನ್ನಡ, ಈ ಬಾರಿ 2023ರ ಸೂಪರ್‌ ಹಿಟ್‌ಸಿನಿಮಾ ʼಕಾಟೇರ್ ʼ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಮಾಡಲು ಸಿದ್ದತೆ ನಡೆಸಿದೆ.

ಹೌದು.. ಮಾಸ್ ಸಿನಿಮಾ ಮಾಡಿದ್ರು. ಕ್ಲಾಸ್ ಆಡಿಯನ್ಸ್‌ಗಳನ್ನ ಮನೋರಂಜಿಸುವುದನ್ನು ಮರೆಯದ ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬೆಳ್ಳಿತೆರೆಯ ಎನಾರ್ 'ಮಾಸ್' ಹಿಟ್ ಸಿನಿಮಾ ಎಂದೇ ಖ್ಯಾತಿ ಪಡೆದ ಕಾಟೇರ ನೋಡಲು ಕಾದಿರುವ ಕನ್ನಡಿಗರಿಗೆ, ಈ ಯುಗಾದಿ ಹಬ್ಬ ಸಖತ್ ಸ್ಪೆಷಲ್ ಆಗಲಿದೆ. ಭಾರತದ ನೆಲದಲ್ಲಿ ಹಾಸು ಹೊಕ್ಕಾಗಿ ಹೋಗಿದ್ದ ಜಾತಿ ಪದ್ದತಿ, ಮೇಲು ಕೀಳು ಎಂಬ ತಾರತಮ್ಯ ಮನುಷ್ಯನ್ನನ್ನು ಮನುಷ್ಯರೇ ಹೇಗೆ ನಡೆಸಿಕೊಳ್ಳುತ್ತಿದ್ದರು ಎಂದು ತೋರಿಸುವುದರ ಜೊತೆಗೆ, ಉಳುವವನೆ ಭೂಮಿಯ ಒಡೆಯ ಎಂಬ ಕಾಯ್ದೆ ಭಾರತದಲ್ಲಿ ಬಂದಾಗ, ಅಂದಿನ ಜನ ಅನುಭವಿಸಿದ ನೋವು ಯಾತನೆಗಳನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಹೆಣೆದಿರುವ ಕಾಟೇರ ಸಿನಿಮಾ, ಜನರ ಮನಸ್ಸನ ಗೆಲ್ಲುವ ಮೂಲಕ ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಆಯಿತು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆರಾಧನ ಅವರ ಜೋಡಿಯನ್ನ ಮೆಚ್ಚಿಕೊಂಡಿರುವ ಅಭಿಮಾನಿಗಳು, ಸಿನಿಮಾದ ಹಾಡಿನಿಂದ ಹಿಡಿದು ಡೈಲಾಗ್ ವರೆಗೆ ಎಲ್ಲವನ್ನು ಟ್ರೆಂಡಿಂಗ್ ಮಾಡುವ ಮೂಲಕ ತಮ್ಮ ಪ್ರೀತಿಯನ್ ತೋರಿಸಿದ್ದು ಈಗ ಇತಿಹಾಸ, ಸಿನಿಮಾ ರಿಲೀಸ್ ಆಗಿ 4 ತಿಂಗಳು ಕಳೆದರು ಕ್ರೇಜ್ ಕಮ್ಮಿಯಾಗದ ಕಾಟೇರ ಸಿನಿಮಾವನ್ನು ಥಿಯೇಟರ್‌ನಿಂದ ಹೋಂ ಥಿಯೇಟರ್‌ಗೆ ತರುವ ಕೆಲಸವನ್ನ ಇದೇ ಎಪ್ರಿಲ್ 7 ನೇ ತಾರೀಖು ಭಾನುವಾರ ಸಂಜೆ 7.00ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡ ಮಾಡುತ್ತಿದೆ.

ಈ ಯುಗಾದಿ ಹಬ್ಬದಂದು ಮನೋರಂಜನೆಯ ಮತ್ತೊಂದು ಪರ್ವ ಶುರುಮಾಡಲಿರುವ ಜೀ ಕನ್ನಡ, ಅಭಿಮಾನಿಗಳ ಮನೆಮನಗಳಿಗೆ ಹೊಸತನದ ಜೊತೆ ಮನರಂಜನೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News