ಚೆನ್ನೈ: ರಾಷ್ಟ್ರಪ್ರಶಸ್ತಿ ವಿಜೇತ ತಮಿಳು ನಿರ್ದೇಶಕ ವೆಟ್ರಿಮಾರನ್ ಅವರು ರಾಜ ರಾಜ ಚೋಳನ್ ಹಿಂದೂ ರಾಜನಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದು, ಸದ್ಯ ವೆಟ್ರಿಮಾರನ್ ಹೇಳಿಕೆಯನ್ನು ನಟ ಕಮಲ್ ಹಾಸನ್ ಸಮರ್ಥಿಸಿಕೊಂಡಿದ್ದಾರೆ.
ಇದೀಗ, ರಾಜನ ಗುರುತಿನ ಬಗ್ಗೆ ವಿವಾದಾತ್ಮಕ ಚರ್ಚೆಗಳಿಗೆ ತೆರೆ ಎಳೆದ ನಿರ್ದೇಶಕರ ಹೇಳಿಕೆಯನ್ನು ಕಮಲ್ ಹಾಸನ್ ಬೆಂಬಲಿಸಿದ್ದಾರೆ. ಇದು ಪ್ರಾರಂಭವಾದದ್ದು ವೆಟ್ರಿಮಾರನ್ ಅವರು ಭಾಗವಹಿಸಿದ್ದ ಸಮಾರಂಭದಲ್ಲಿ, ʼರಾಜ ರಾಜ ಚೋಳನ್ ಹಿಂದೂ ಅಲ್ಲ ಆದರೆ ಅವರು (ಬಿಜೆಪಿ) ನಮ್ಮ ಗುರುತನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ, ಅವರು ಈಗಾಗಲೇ ತಿರುವಳ್ಳುವರ್ ಅವರನ್ನು ಕೇಸರಿ ಮಾಡಲು ಪ್ರಯತ್ನಿಸಿದ್ದಾರೆ, ನಾವು ಎಂದಿಗೂ ಅವಕಾಶ ನೀಡಬಾರದು ಎಂಬ ಹೇಳಿಕೆಯನ್ನು ನೀಡುವ ಮೂಲಕ ಕೆಲವರ ಹುಬ್ಬೇರಿಸುವಂತೆ ಮಾಡಿದ್ದರು.
ಇದನ್ನೂ ಓದಿ: ಎಮ್ಮೆಗಳಿಗೆ ಡಿಕ್ಕಿ ಹೊಡೆದ ವಂದೇ ಭಾರತ್ ರೈಲು : ಇಂಜಿನ್ಗೆ ಭಾರಿ ಹಾನಿ
ಸಧ್ಯ ವಟ್ರಿಮಾರನ್ ಹೇಳಿಕೆಗೆ ಧ್ವನಿಗೂಡಿಸಿರುವ ಕಮಲ್ ಹಾಸನ್, ರಾಜ ರಾಜ ಚೋಳನ ಕಾಲದಲ್ಲಿ `ಹಿಂದೂ ಧರ್ಮ' ಎಂಬ ಹೆಸರಿರಲಿಲ್ಲ. ವೈನವಂ, ಶಿವಂ ಮತ್ತು ಸಮಾನಂ ಇತ್ತು ಮತ್ತು ಬ್ರಿಟಿಷರು ಹಿಂದೂ ಎಂಬ ಪದವನ್ನು ಸೃಷ್ಟಿಸಿದರು. `ಇದನ್ನು ಹೇಗೆ ಸಾಮೂಹಿಕವಾಗಿ ಉಲ್ಲೇಖಿಸಬೇಕು ಎಂದು ತಿಳಿದಿಲ್ಲ. ಅವರು ತುತೂಕುಡಿಯನ್ನು ಟುಟಿಕೋರಿನ್ ಆಗಿ ಹೇಗೆ ಬದಲಾಯಿಸಿದರು ಎಂಬುದರಂತೆಯೇ ಇದೆ.
ರಾಜ ರಾಜ ಚೋಳನ್‌ನಿಂದ ಪ್ರೇರಿತವಾದ ಕಾಲ್ಪನಿಕ ಕಾದಂಬರಿಯನ್ನು ಆಧರಿಸಿದ ʼಪೊನ್ನಿಯಿನ್ ಸೆಲ್ವನ್: 1` ಚಿತ್ರ ಬಿಡುಗಡೆಯಾದ ಕೇವಲ ಒಂದು ದಿನದ ನಂತರ ವೇಟ್ರಿಮಾರನ್ ಅವರ ಹೇಳಿಕೆಗಳು ಬಂದವು. ವೇಟ್ರಿಮಾರನ್‌ಗೆ ಹಾಸನ್ ಬೆಂಬಲ ಸಿಕ್ಕದೆ. ಕಾರಣ ರಾಜ ರಾಜ ಚೋಳ ನಿಜವಾಗಿಯೂ ಹಿಂದೂ ರಾಜನಾಗಿದ್ದ ಎಂದು ಬಿಜೆಪಿ ಮುಖಂಡ ಹೆಚ್ ರಾಜಾ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಯಾಗಿ ಇಬ್ಬರು ಸ್ಟಾರ್‌ಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.