ರಣಬೀರ್-ಅಲಿಯಾ ಸಂಬಂಧದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕಂಗನಾ ರಾವತ್

ಇತ್ತೀಚಿಗೆ ಕಂಗನಾ ರಾವತ್ ಬಾಲಿವುಡ್ ನಲ್ಲಿ ವಿವಾದಾತ್ಮ ಹೇಳಿಕೆ ನೀಡುವುದರಲ್ಲೇ ಬ್ಯುಸಿಯಾಗಿದ್ದಾರೆ.ಅಂತಹ ವಿವಾದಕ್ಕೆ ಮತ್ತೊಂದು ಹೇಳಿಕೆ ಈಗ ಸೇರ್ಪಡೆಯಾಗಿದೆ. ಹೌದು,ಈಗ ಅವರು ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ವಿಚಾರವಾಗಿ ನೀಡಿರುವ ಹೇಳಿಕೆ ನಿಜಕ್ಕೂ ಹೊಸ ವಿವಾದಕ್ಕೆ ಕಾರಣವಾಗಿದೆ.

Updated: Mar 28, 2019 , 07:15 PM IST
ರಣಬೀರ್-ಅಲಿಯಾ ಸಂಬಂಧದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕಂಗನಾ ರಾವತ್

ನವದೆಹಲಿ: ಇತ್ತೀಚಿಗೆ ಕಂಗನಾ ರಾವತ್ ಬಾಲಿವುಡ್ ನಲ್ಲಿ ವಿವಾದಾತ್ಮ ಹೇಳಿಕೆ ನೀಡುವುದರಲ್ಲೇ ಬ್ಯುಸಿಯಾಗಿದ್ದಾರೆ.ಅಂತಹ ವಿವಾದಕ್ಕೆ ಮತ್ತೊಂದು ಹೇಳಿಕೆ ಈಗ ಸೇರ್ಪಡೆಯಾಗಿದೆ. ಹೌದು,ಈಗ ಅವರು ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ವಿಚಾರವಾಗಿ ನೀಡಿರುವ ಹೇಳಿಕೆ ನಿಜಕ್ಕೂ ಹೊಸ ವಿವಾದಕ್ಕೆ ಕಾರಣವಾಗಿದೆ.

ಖಾಸಗಿ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಕಂಗನಾ ರಾವತ್ ಈ ಬಾಲಿವುಡ್ ಜೋಡಿಗಳ ಬಗ್ಗೆ ಮಾತನಾಡುತ್ತಾ"  ರಣಬೀರ್ ಕಪೂರ್ ಅವರಿಗೆ 37 ವರ್ಷವಾಗಿದೆ,ಅಲಿಯಾ ಭಟ್ ಈಗ 27ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.ಅವರನ್ನು ಯಾವ ಆಧಾರದ ಮೇಲೆ ಯಂಗ್ ಎಂದು ಕರೆಯಬೇಕು.ನನ್ನ ತಾಯಿ 27 ವರ್ಷಕ್ಕೆ ಪಾದಾರ್ಪಣೆ ಮಾಡಿದಾಗ ಮೂರು ಮಕ್ಕಳ ತಾಯಿಯಾಗಿದ್ದಳು.ಆದ್ದರಿಂದ ಈ ಜೋಡಿಗಳನ್ನು ಯುವ ಜೋಡಿ ಎಂದು ಕರೆಯುವುದು ಸರಿಯಲ್ಲ" ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಮುಂದುವರೆದು ನಿಮ್ಮ ಸೆಕ್ಸ್ ಜೀವನದ ಬಗ್ಗೆ ಮಾತನಾಡುವುದಾದರೆ ಅದಕ್ಕೆ ಓಕೆ, ಅದೇ ರೀತಿ ದೇಶದ ಬಗ್ಗೆ ಮಾತನಾಡದಿರುವವರ ಬಗ್ಗೆ ಕಂಗನಾ ರಾವತ್ ಕಿಡಿ ಕಾರಿದರು.