ನವದೆಹಲಿ: ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪುತ್ (Sushant Singh Rajaput) ಅವರ ನಿಧನದ ಬಳಿಕ ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ತಮ್ಮ ಹೇಳಿಕೆಗಳ ಮೂಲಕ ಮಾಧ್ಯಮಗಳಲ್ಲಿ ಹೆಡ್ಲೈನ್ ಸೃಷ್ಟಿಸುತ್ತಲೇ ಇದ್ದಾರೆ. ಅವರು ಸುಶಾಂತ್ ಬಗ್ಗೆ ಅನೇಕ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಇದರೊಂದಿಗೆ, ಅವರು ಸ್ವಜನಪಕ್ಷಪಾತಕ್ಕೆ ಸಂಬಂಧಿಸಿದಂತೆ ಕೆಲವು ಬಾಲಿವುಡ್ ನ ಖ್ಯಾತನಾಮರನ್ನು ತೀವ್ರವಾಗಿ ಗುರಿಯಾಗಿಸಿದ್ದಾರೆ. ಅವರ ಸೋಷಿಯಲ್ ಮೀಡಿಯಾ ತಂಡವು ಸುಶಾಂತ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಬೆಳವಣಿಗೆಗಳ ಮೇಲೆ ನಿಗಾವಹಿಸಿದೆ.
ಇತ್ತೀಚೆಗಷ್ಟೇ ಈ ಕುರಿತು ಹೇಳಿಕೆ ನೀಡಿದ್ದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, ಸುಶಾಂತ್ ಅವರ ತಂದೆ ತಮ್ಮ ಆರಂಭಿಕ ಹೇಳಿಕೆಯ ವೇಳೆ ಚಿತ್ರೋದ್ಯಮದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕಾರಣ ಸುಶಾಂತ್ ಅಸ್ವಸ್ಥರಾಗಿದ್ದರು ಎಂದಿದ್ದರು. ಸುಶಾಂತ್ ಕುಟುಂಬಸ್ಥರು ಕೇವಲ ಹಣಕಾಸಿನ ವಿಷಯಗಳ ಮೇಲೆ ಮಾತ್ರ ತನ್ನ ಗಮನ ಕೇಂದ್ರೀಕರಿಸಿದ್ದು, ಬಾಲಿವುಡ್ ನಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತದ ಮೇಲೆ ಅಲ್ಲ ಎಂದು ಬಳಕೆದಾರರು ಭಾವಿಸುತ್ತಾರೆ. ಆದರೆ, ಮತ್ತೊಬ್ಬರ ಮನಸ್ಸನ್ನು ಮುರಿಯುವುದು ಯಾವುದೇ ಕ್ರಿಮಿನಲ್ ಅಪರಾಧವಲ್ಲ ಎಂದು ಹೇಳಿದ್ದರು.
ಈ ಬಗ್ಗೆ ಕಂಗನಾ ರಣಾವತ್ ತಂಡ ಕೂಡ ಸಾಮಾಜಿಕ ಮಾಧ್ಯಮಗಳ ಮೇಲೆ ತನ್ನ ಹೇಳಿಕೆಯನ್ನು ದಾಖಲಿಸಿದ್ದು, ಇದಕ್ಕೆ ಉತ್ತರಿಸಿದ್ದ ತಂಡ, ಸುಶಾಂತ್ ಅವರ ವಕೀಲರು ಕೂಡ ಸರಿಯಾಗಿದ್ದಾರೆ, ಸ್ವಜನಪಕ್ಷಪಾತ್, ಬ್ಲೈಂಡ್ ಐಟಂ, ಸ್ಮಿಯರ್ ಅಭಿಯಾನಗಳು ಹಾಗೂ ಯಾವುದೇ ಓರ್ವ ವ್ಯಕ್ತಿಯ ಮನಸ್ಸನ್ನು ಮುರಿಯುವುದು ಕ್ರಿಮಿನಲ್ ಅಪರಾಧವಲ್ಲ. ಹೀಗಾಗಿ ಅವರು ಇದನ್ನು ಪುರಸ್ಕರಿಸಲು ಬಯಸುವುದಿಲ್ಲ. ಕೇವಲ ಹಣಕಾಸಿನ ವಿಷಯದಿಂದಲೇ ಇದನ್ನು ಒಂದು ಕ್ರಿಮಿನಲ್ ಪ್ರಕರಣವನ್ನಾಗಿಸಬಹುದು ಎಂದಿದೆ.