ನವದೆಹಲಿ:ಇತ್ತೀಚೆಗಷ್ಟೇ ಕೊರೊನಾ ವೈರಸ್ ಸೋಂಕಿಗೆ ಗುರಿಯಾಗಿರುವ ಕನಿಕಾ ಕಪೂರ್ ಅವರನ್ನು ಲಂಡನ್ ನಿಂದ ಮರಳಿದ ಬಳಿಕ ಐಸೋಲೆಶನ್ ನಲ್ಲಿರಲು ಸೂಚಿಸಲಾಗಿತ್ತು, ಆದರೆ, ಎಲ್ಲ ಕಟ್ಟಪ್ಪಣೆಗಳನ್ನೂ ಕಡೆಗಣಿಸಿದ್ದ ಕನಿಕಾ ಲಖನೌನಲ್ಲಿ ತನ್ನ ಸಂಬಂಧಿಗಳು ಹಾಗೂ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದಾರೆ. ಕನಿಕಾಳ ಈ ಬೇಜವಾಬ್ದಾರಿ ನಡತೆಯ ಬಗ್ಗೆ ನೆಟ್ಟಿಗರು ತುಂಬಾ ಕಟಾಕ್ಷ ಮಾಡುತ್ತಿದ್ದಾರೆ. ಆದರೆ, ಸಾಮಾಜಿಕ ಮಾಧ್ಯಮಗಳ ಮೇಲೆ ನೆಟ್ಟಿಗರ ಒಂದು ಗುಂಪು ಕನಿಕಾಳಿಗೆ ಬೆಂಬಲ ನೀಡುತ್ತಿರುವುದು ಗಮನಕ್ಕೆ ಬರುತ್ತಿದೆ.
ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿರುವ ಕನಿಕಾ ಬಾಲಿವುಡ್ ನಲ್ಲಿ ಖ್ಯಾತ ಗಾಯಕಿಯರಲ್ಲಿ ಒಬ್ಬರಾಗಿದ್ದಾರೆ. ಲಖನೌನಲ್ಲಿ ಅವರು ಹುಟ್ಟಿ ಬೆಳೆದಿದ್ದಾರೆ. ತನ್ನ ವಯಸ್ಸಿನ 18 ವಯಸ್ಸಿನಲ್ಲಿ ಕನಿಕಾ ವಿವಾಹ ಬಂಧನಕ್ಕೆ ಒಳಗಾಗಿದ್ದಳು. 1997ರಲ್ಲಿ ಕನಿಕಾ ತನ್ನ ಪತಿ ರಾಜ್ ಚಾಂದೊಕ್ ಜೊತೆ ವಾಸಿಸಲು ಲಂಡನ್ ಗೆ ತೆರಳಿದ್ದಳು. ಕನಿಕಾ ತಮ್ಮ ಸಹೋದರನ ವಿವಾಹದ ವೇಳೆ ರಾಜ್ ಜೊತೆ ಭೇಟಿಯಾಗಿದ್ದಳು. ಈ ಉಭಾಯರಿಗೆ ಮೂವರು ಮಕ್ಕಳೂ ಕೂಡ ಇದ್ದಾರೆ. ಮೂವರು ಮಕ್ಕಳ ಬಳಿಕ ವಿವಾಹ ವಿಚ್ಛೇದನೆ ಪಡೆದು ಕನಿಕಾ ಭಾರತಕ್ಕೆ ಮರಲಿದ್ದಳು.
2012ರಲ್ಲಿ 'ಜುಂಗಣಿ ಜೀ' ಹಾಡಿನ ಮೂಲಕ ತನ್ನ ವೃತ್ತಿ ಜೀವನ ಆರಂಭಿಸಿದ್ದಳು. ಪಾಕ್ ಹಾಡುಗಾರ ಅಲೀಫ್ ಅಲ್ಲಾಹ್ ಅವರ ಹಾಡಿನ ರಿಮಿಕ್ಸ್ ವರ್ಜನ್ ಇದಾಗಿತ್ತು. 2014ರಲ್ಲಿ ತೆರೆಕಂಡಿದ್ದ ಸನ್ನಿ ಲಿಯೋನ್ ಅಭಿನಯದ 'ರಾಗಿಣಿ MMS2' ಚಿತ್ರದ ಹಾಡಾಗಿರುವ 'ಬೇಬಿ ಡಾಲ್ ಮೈ ಸೋನೆದಿ' ಮೂಲಕ ಕನಿಕಾ ಪ್ರಸಿದ್ಧಿಯ ಉತ್ತುಂಗಕ್ಕೆ ಏರಿದ್ದಾಳೆ. ಬಳಿಕ 'ಚಿಟ್ಟಿಯಾ ಕಲಾಯಿಯಾ' ಹಾಗೂ 'ಲವ್ಲಿ' ಗಳಂತಹ ಚಾರ್ಟ್ ಬಸ್ಟರ್ಡ್ ಹಾಡುಗಳನ್ನು ಕೂಡ ನೀಡಿದ್ದಾರೆ.
ಈ ಹಿಂದೆ IANSಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕನಿಕಾ, "ನಾನು ಯಾವಾಗಲು ಕಂಪ್ಲೇಂಟ್ ಮಾಡುವುದಿಲ್ಲ, ಸಂಗತಿಗಳನ್ನು ಪರಿಹರಿಸಲು ಮಾರ್ಗ ಕಂಡು ಹಿಡಿಯಲು ಪ್ರಯತ್ನಿಸುತ್ತೇನೆ. ಆದರೆ, ಕೊನೆಯಲ್ಲಿ ನನಗೆ ಸೋಲು ಅನುಭವಿಸುವ ಪರಿಸ್ಥಿತಿ ಎದುರಾದಾಗ ದೇವರು ನನಗೆ 'ಬೇಬಿ ಡಾಲ್' ಅವಸರ ನೀಡಿದ. ಆಗ ನನ್ನ ಬಳಿ ಸೋಲು ಒಪ್ಪಿಕೊಳ್ಳುವ ಯಾವುದೇ ಕಾರಣ ಇರಲಿಲ್ಲ " ಎಂದಿದ್ದಳು.
ತನ್ನ ಜೀವನಕ್ಕೆ ಅಂತ್ಯ ಹಾಡಲು ಸಹ ಕನಿಕಾ ಯೋಚಿಸಿದ್ದಳಂತೆ. ಹೌದು, ಈ ಕುರಿತು ಹೇಳಿಕೆ ನೀಡಿದ್ದ ಕನಿಕಾ, "ನಿಮ್ಮ ಬಳಿ ಹಣ ಇಲ್ಲದ ಸಂದರ್ಭದಲ್ಲಿ ಈ ರೀತಿ ಯೋಚನೆ ಬರುತ್ತದೆ. ಒಂದು ಕೆಟ್ಟ ವಿಚ್ಛೇದನೆಯ ಬಳಿಕ ವಕೀಲರು ನಿಮ್ಮ ಪ್ರಾಣ ಹಿಂಡಲು ಮುಂದಾದಾಗ ಇಂತಹ ಪರಿಸ್ಥಿತಿ ಎದುರಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಮೂವರು ಮಕ್ಕಳನ್ನು ಫೀಸ್ ಕಟ್ಟದೆ ಇದ್ದ ಕಾರಣ ಶಾಲೆಯಿಂದ ಹೊರಹಾಕಲಾಗುತ್ತದೆ. ನಂತರ ಒಂದು ಕೆಟ್ಟ ಕಾಯಿಲೆ ನಿಮ್ಮನ್ನು ಆವರಿಸಿ ನಿಮ್ಮ ಬಳಿ ಸದ್ಯ ಏನೂ ಇಲ್ಲ ಎಂಬ ಭಾವನೆ ಮೂಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ತಾಯಿ, ಸಹೋದರ ಹಾಗೂ ಕೆಲ ಸ್ನೇಹಿತರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ " ಎಂಬ ಕಹಿನೆನಪುಗಳನ್ನು ಕನಿಕಾ ಸ್ಮರಿಸಿಕೊಂಡಿದ್ದರು