Bhavani Singh: ಮದುವೆಯಾದ ಐದು ವರ್ಷಗಳ ಬಳಿಕ ಮೊದಲ ಮಗುನಿನ ನಿರೀಕ್ಷೆಯಲ್ಲಿ ʻರಕ್ಷಾ ಬಂಧನ‌ʼ ನಟ!!

Bhavani Singh Baby: ಕನ್ನಡ ಕಿರುತೆರೆ ಜೋಡಿಯಾದ ನಟ ಭವಾನಿ ಸಿಂಗ್‌  ಹಾಗೂ ನಟಿ ಪಂಕಜ ಶಿವಣ್ಣ ಮದುವೆಯಾದ ಐದು ವರ್ಷಗಳ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : May 16, 2024, 02:19 PM IST
  • ಕಳೆದ ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿರುವ ಈ ಜೋಡಿ ಅಭಿಮಾನಿಗಳ ಜೊತೆಗೆ ಗುಡ್‌ ನ್ಯೂಸ್‌ ಹಂಚಿಕೊಂಡಿದ್ದಾರೆ.
  • ಬಹಳ ಸಂಭ್ರಮದಿಂದ ಈ ಜೋಡಿ ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಹಂಚಿಕೊಂಡಿದ್ದು, ಇದಕ್ಕೆ ಭವಾನಿ ಸಿಂಗ್ ಫ್ಯಾನ್‌ ಫಾಲೋವರ್ಸ್ ಶುಭ ಹಾರೈಸಿದ್ದಾರೆ.
  • ಈ ಜೋಡಿ ತುಂಬಾ ದಿನಗಳ ಕಾಲ ತಮ್ಮ ಪ್ರೀತಿಯ ವಿಚಾರವನ್ನು ಗೌಪ್ಯವಾಗಿಟ್ಟು, ಬಳಿಕ ಎಂಗೇಜ್ಮೆಂಟ್ ಮೂಲಕ ತಮ್ಮ ರಿಲೇಶನ್‌ಶಿಪ್ ಬಗ್ಗೆ ರಿವೀಲ್‌ ಮಾಡಿದರು.
Bhavani Singh: ಮದುವೆಯಾದ ಐದು ವರ್ಷಗಳ ಬಳಿಕ ಮೊದಲ ಮಗುನಿನ ನಿರೀಕ್ಷೆಯಲ್ಲಿ ʻರಕ್ಷಾ ಬಂಧನ‌ʼ ನಟ!! title=

Kannada Actor Bhavani Singh Expecting First Baby: ಕನ್ನಡ ಕಿರುತೆರೆಯ ನಟ ಭವಾನಿ ಸಿಂಗ್‌ ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸೀರಿಯಲ್‌ ನಟ ಭವಾನಿ ಸಿಂಗ್ ಹಾಗೂ ನಟಿ ಪಂಕಜ ಶಿವಣ್ಣ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷಿಯಲ್ಲಿ ಇದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿರುವ ಈ ಜೋಡಿ ಅಭಿಮಾನಿಗಳ ಜೊತೆಗೆ ಗುಡ್‌ ನ್ಯೂಸ್‌ ಹಂಚಿಕೊಂಡಿದ್ದಾರೆ.

ಭವಾನಿ ಸಿಂಗ್ ಹಾಗೂ  ಪಂಕಜ ಇಬ್ಬರು ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ಕ್ಯಾಪ್ಶನ್‌ನಲ್ಲಿ "ನಮ್ಮ ಸಂಸಾರ ದೊಡ್ಡದಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ. ಬಹಳ ಸಂಭ್ರಮದಿಂದ ಈ ಜೋಡಿ ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಹಂಚಿಕೊಂಡಿದ್ದು, ಇದಕ್ಕೆ ಭವಾನಿ ಸಿಂಗ್ ಫ್ಯಾನ್‌ ಫಾಲೋವರ್ಸ್ ಶುಭ ಹಾರೈಸಿದ್ದಾರೆ.

 
 
 
 

 
 
 
 
 
 
 
 
 
 
 

A post shared by Bhavani Singh (@bhavanisingh.official)

ಇದನ್ನೂ ಓದಿ: Amruthadhaare Serial: ಹನಿಮೂನ್‌ ನೆಪದಲ್ಲಿ ಚಿಕ್ಕಮಗಳೂರಿಗೆ ಹೋದ ಗೌತಮ್‌-ಭೂಮಿಕಾ: ಜಮೀನು ಯಾರ ಪಾಲಾಗಬಹುದು??

ನಟ ಭವಾನಿ ಸಿಂಗ್ ಮತ್ತು ಪಂಕಜ ಶಿವಣ್ಣ ಇಬ್ಬರು ʻಸುಬ್ಬಲಕ್ಷ್ಮಿ ಸಂಸಾರʼ ಧಾರವಾಹಿಯ ಮೂಲಕ ಪರಿಚಯವಾದವರು, ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ ಬದಲಾಗಿತು. ತದನಂತರ ಇವರಿಬ್ಬರು 2019 ರಲ್ಲಿ ವೈವಾಹಿಕ ಜೀವನಕ್ಕೆ ಹೆಜ್ಜೆ ಹಾಕಿದರು. ಈ ಜೋಡಿ ತುಂಬಾ ದಿನಗಳ ಕಾಲ ತಮ್ಮ ಪ್ರೀತಿಯ ವಿಚಾರವನ್ನು ಗೌಪ್ಯವಾಗಿಟ್ಟು, ಬಳಿಕ ಎಂಗೇಜ್ಮೆಂಟ್ ಮೂಲಕ ತಮ್ಮ ರಿಲೇಶನ್‌ಶಿಪ್ ಬಗ್ಗೆ ರಿವೀಲ್‌ ಮಾಡಿದರು.

ಕಿರುತೆರೆ ನಟ ಭವಾನಿ ಸಿಂಗ್ ಚರಣದಾಸಿ ಸೀರಿಯಲ್‌ ಮೂಲಕ ಅಭಿನಯಕ್ಕೆ ಕಾಲಿಟ್ಟು, ನಂತರ 'ಸುಬ್ಬಲಕ್ಷ್ಮಿ ಸಂಸಾರ','ರಕ್ಷಾ ಬಂಧನ' ಧಾರವಾಹಿಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಜನಮನ ಗೆದ್ದರು. ಇನ್ನೂ ಈ ನಟನ ಪತ್ನಿ ಪಂಕಜ ಶಿವಣ್ಣ ಕೂಡ ಕಿರುತೆರೆ ನಟಿಯಾಗಿದ್ದು, ಲಕ್ಷ್ಮಿ ಬಾರಮ್ಮ, ಮಂಗ್ಳೂರ್‌ ಹುಡುಗಿ ಹುಬ್ಬಳ್ಳಿ ಹುಡುಗ, ಸುಬ್ಬಲಕ್ಷ್ಮಿ ಸಂಸಾರ ಅಂತಹ ಹಲವಾರು ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚಿ ಜನಪ್ರಿಯತೆ ಪಡೆದುಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News