ತೆಲುಗಿಗೆ ರೀಮೇಕಾಗಲಿರುವ ಕನ್ನಡದ 'ಚಮಕ್'

     

Last Updated : Jan 7, 2018, 01:21 PM IST
ತೆಲುಗಿಗೆ ರೀಮೇಕಾಗಲಿರುವ ಕನ್ನಡದ 'ಚಮಕ್'  title=

ಬೆಂಗಳೂರು : 2017 ರ ಕೊನೆಯಲ್ಲಿ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಶ್ಮಿಕ ಮಂದಣ್ಣ ಅಭಿನಯದ 'ಚಮಕ್' ಸ್ಯಾಂಡಲ್ವುಡ್ ನಲ್ಲಿ ಭರ್ಜರಿಯಾಗಿ ಓಡುತ್ತಿದ್ದು. ಇದರ ಸಕ್ಸಸ್ಸಿನ ನಾಗಾಲೋಟ ಕಂಡು ಈ ಚಿತ್ರವನ್ನು ಈ ತೆಲುಗುದಲ್ಲಿ ನಿರ್ಮಾಣ ಮಾಡಲು ಚಿತ್ರದ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಸಜ್ಜಾಗಿದ್ದಾರೆ.

ಇದಕ್ಕೆ ಪ್ರತಿಕ್ರಯಿಸಿರುವ ಅವರು ಚಮಕ್ ಚಿತ್ರವು ಸಾರ್ವತ್ರಿಕ ಕಥಾ ಹಂದರವನ್ನು ಒಳಗೊಂಡಿದ್ದು ಆದ್ದರಿಂದ ಇದು ಎಲ್ಲರಿಗೂ ಕೂಡಾ ಇಷ್ಟವಾಗುತ್ತದೆ. ಚಿತ್ರದಲ್ಲಿರುವ ಯುವ ಸ್ಪೂರ್ತಿಯು ಪ್ರಮುಖವಾಗಿ ಚಿತ್ರ ಯಶಸ್ವಿಯಾಗಲು ಕಾರಣ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಆದ್ದರಿಂದ ಸ್ವತಃ ತಾವೇ ಈ ಚಿತ್ರವನ್ನು ತೆಲುಗಿನಲ್ಲಿ ನಿರ್ಮಿಸಲಿದ್ದಾರೆ ಅಲ್ಲಿ  ಗಣೇಶರ ಪಾತ್ರವನ್ನು ನಾಣಿ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ವಾರಂತ್ಯದಲ್ಲಿ ಈ ಚಿತ್ರವನ್ನು  ಅಮೇರಿಕಾ ಮತ್ತು ಕೆನಡಾಗಳಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ ಎಂದು ಹೇಳಿದ್ದಾರೆ.

Trending News