Filmfare Awards South 2022: ಫಿಲ್ಮ್‌ ಫೇರ್ ಅವಾರ್ಡ್ಸ್‌ಗೆ ನಾಮಿನೇಟ್‌ ಆದ ಕನ್ನಡ ಸಿನಿಮಾಗಳಿವು..

Filmfare Awards South 2022 : 67 ನೇ ಪಾರ್ಲೆ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2022 ಅನ್ನು ಅಕ್ಟೋಬರ್ 9, 2022 ರಂದು ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದೆ. 

Written by - Chetana Devarmani | Last Updated : Oct 8, 2022, 03:52 PM IST
  • 67 ನೇ ಪಾರ್ಲೆ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2022
  • ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆಯಲಿದೆ ಈ ಕಾರ್ಯಕ್ರಮ
  • ಕನ್ನಡ ಕೆಟಗಿರಿಯ ನಾಮನಿರ್ದೇಶನಗಳು
Filmfare Awards South 2022: ಫಿಲ್ಮ್‌ ಫೇರ್ ಅವಾರ್ಡ್ಸ್‌ಗೆ ನಾಮಿನೇಟ್‌ ಆದ ಕನ್ನಡ ಸಿನಿಮಾಗಳಿವು.. title=
ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2022

Filmfare Awards South 2022 : ಕಳೆದ ವರ್ಷದಲ್ಲಿ ದಕ್ಷಿಣ ಚಲನಚಿತ್ರೋದ್ಯಮದಿಂದ ನಮ್ಮನ್ನು ರಂಜಿಸಿದ ಕೆಲವು ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸುವ ಸಮಯ ಇದೀಗ ಬಂದಿದೆ. ಅಕ್ಟೋಬರ್ 9 ರಂದು 67 ನೇ ಫಿಲ್ಮ್‌ ಫೇರ್ ಅವಾರ್ಡ್ಸ್ ಸೌತ್ 2022 ನಡೆಯಲಿದೆ. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರೋದ್ಯಮದಿಂದ ಭಾರತೀಯ ಚಿತ್ರರಂಗದ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡುತ್ತದೆ. ಫಿಲ್ಮ್‌ ಫೇರ್ ಅವಾರ್ಡ್ಸ್ ಸೌತ್ 2022 – ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಾದ್ಯಂತ ಕಲಾತ್ಮಕ ಮತ್ತು ತಾಂತ್ರಿಕ ಶ್ರೇಷ್ಠತೆಯನ್ನು ಗುರುತಿಸಲು ಅತಿರಂಜಿತ ಪ್ರಶಸ್ತಿಗಳ ರಾತ್ರಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆಯಲಿದೆ. 

ಇದನ್ನೂ ಓದಿ : Kantara : ‘ಕಾಂತಾರ’ ನೋಡಿ ರಿಷಬ್‌ಗೆ ಸುದೀರ್ಘ ಪತ್ರ ಬರೆದ ಸುದೀಪ್‌

67 ನೇ ಪಾರ್ಲೆ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2022 ಅನ್ನು ಅಕ್ಟೋಬರ್ 9, 2022 ರಂದು ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದೆ. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಲನಚಿತ್ರೋದ್ಯಮದ ವಿವಿಧ ಪ್ರತಿಭೆಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು. ಕನ್ನಡ ಕೆಟಗಿರಿಯ ನಾಮಿನಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.. 

ಕನ್ನಡ ಕೆಟಗಿರಿಯ ನಾಮನಿರ್ದೇಶನಗಳು : 

ಅತ್ಯುತ್ತಮ ಚಿತ್ರ : 

  • ಆಕ್ಟ್‌ 1978
  • ದಿಯಾ
  • ಗರುಡ ಗಮನ ವೃಷಭ ವಾಹನ
  • ಶಿವಾಜಿ ಸುರತ್ಕಲ್
  • ಬಡವ ರಾಸ್ಕಲ್
  • ಸಲಗ

ಅತ್ಯುತ್ತಮ ನಿರ್ದೇಶಕ : 

  • ಮನ್ಸೋರೆ (ಆಕ್ಟ್ 1978)
  • ಆಕಾಶ್ ಶ್ರೀವತ್ಸ (ಶಿವಾಜಿ ಸುರತ್ಕಲ್)
  • ದುನಿಯಾ ವಿಜಯ್ (ಸಲಗ)
  • ಡಾರ್ಲಿಂಗ್‌ ಕೃಷ್ಣ (ಲವ್‌ ಮಾಕ್ಟೇಲ್)
  • ಶಂಕರ ಗುರು (ಬಡವ ರಾಸ್ಕಲ್)
  • ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
  • ಜಡೇಶ್ ಕುಮಾರ್ ಹಂಪಿ (ಜೆಂಟಲ್‌ ಮ್ಯಾನ್)‌

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ 

  • ಧನಂಜಯ್ (ಬಡವ ರಾಸ್ಕಲ್)
  • ರಮೇಶ್ ಅರವಿಂದ್ (ಶಿವಾಜಿ ಸುರತ್ಕಲ್)
  • ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
  • ರಿಷಭ್ ಶೆಟ್ಟಿ (ಗರುಡ ಗಮನ ವೃಷಭ ವಾಹನ)
  • ಡಾರ್ಲಿಂಗ್‌ ಕೃಷ್ಣ (ಲವ್ ಮಾಕ್ಟೇಲ್)
  • ಪ್ರಜ್ವಲ್ ದೇವರಾಜ್ (ಜೆಂಟಲ್‌ ಮ್ಯಾನ್)
  • ದರ್ಶನ್ (ರಾಬರ್ಟ್)‌

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ 

  • ಯಜ್ಞ ಶೆಟ್ಟಿ (ಆಕ್ಟ್ 1978)
  • ಮಿಲನಾ ನಾಗರಾಜ್ (ಲವ್ ಮಾಕ್ಟೇಲ್)
  • ಕುಶೀ ರವಿ (ದಿಯಾ)
  • ಅಮೃತ ಅಯ್ಯಂಗಾರ್ (ಬಡವ ರಾಸ್ಕಲ್)
  • ಆಶಾ ಭಟ್ (ರಾಬರ್ಟ್)
  • ರೆಬಾ ಮೋನಿಕಾ ಜಾನ್ (ರತ್ನನ್ ಪ್ರಪಂಚ)
  • ಆರೋಹಿ ನಾರಾಯಣ (ಭೀಮಸೇನ ನಳಮಹಾರಾಜ)

ಇದನ್ನೂ ಓದಿ : Sushmita Sen : ತೃತೀಯಲಿಂಗಿಯಾಗಿ ನಟಿ ಸುಶ್ಮಿತಾ ಸೇನ್! ಲುಕ್‌ ಕಂಡು ವಾವ್‌ ಎಂದ ಫ್ಯಾನ್ಸ್‌

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ 

  • ನಾಗಭೂಷಣ (ಬಡವ ರಾಸ್ಕಲ್)
  • ಪ್ರಮೋದ್ ಪಂಜು (ರತ್ನನ್ ಪ್ರಪಂಚ)
  • ಸಂಚಾರಿ ವಿಜಯ್ (ಜೆಂಟಲ್‌ ಮ್ಯಾನ್)
  • ಬಿ.ಸುರೇಶ (ಆಕ್ಟ್ 1978)
  • ಧನಂಜಯ (ಸಲಗ)
  • ಬಾಲಾಜಿ ಮನೋಹರ್ (ಅಮೃತ್ ಅಪಾರ್ಟ್‌ಮೆಂಟ್ಸ್‌)
  • ಅಚ್ಯುತ್ ಕುಮಾರ್ (ಭೀಮಸೇನ ನಳಮಹಾರಾಜ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ

  • ಅಮೃತ ಅಯ್ಯಂಗಾರ್ (ಲವ್ ಮಾಕ್ಟೇಲ್)
  • ಆರೋಹಿ ನಾರಾಯಣ (ಶಿವಾಜಿ ಸುರತ್ಕಲ್)
  • ಉಮಾಶ್ರೀ (ರತ್ನನ್ ಪ್ರಪಂಚ)
  • ಮೇಘಶ್ರೀ (ಮುಗಿಲಪೇಟೆ)
  • ಉಷಾ ರವಿಶಂಕರ್ (ಸಲಗ)
  • ಸ್ಪರ್ಶ ರೇಖಾ (ಪಾಪ್‌ಕಾರ್ನ್ ಮಂಕಿ ಟೈಗರ್)‌

ಅತ್ಯುತ್ತಮ ಮ್ಯುಸಿಕ್ ಆಲ್ಬಮ್

  • ಚರಣ್ ರಾಜ್ (ಸಲಗ)
  • ‌ಅಜನೀಶ್ ಲೋಕನಾಥ್ (ಜೆಂಟಲ್‌ ಮ್ಯಾನ್)
  • ಶ್ರೀಧರ್ ವಿ ಸಂಭ್ರಮ (ಮುಗಿಲಪೇಟೆ)
  • ಅರ್ಜುನ್ ಜನ್ಯ ಮತ್ತು ವಿ ಹರಿಕೃಷ್ಣ (ರಾಬರ್ಟ್)
  • ವಾಸುಕಿ ವೈಭವ್ (ಬಡವ ರಾಸ್ಕಲ್)
  • ರಘು ದೀಕ್ಷಿತ್ (ಲವ್ ಮಾಕ್ಟೇಲ್)

ಅತ್ಯುತ್ತಮ ಸಾಹಿತ್ಯ 

  • ಕವಿರಾಜ್- ಮೆಲ್ಲನೆ (ರೈಡರ್)
  • ವಿ ನಾಗೇಂದ್ರ ಪ್ರಸಾದ್ - ಧೀರ ಸಮ್ಮೋಹಗಾರ (ಬಿಚ್ಚುಗತ್ತಿ)
  • ಜಯಂತ್ ಕಾಯ್ಕಿಣಿ - ತೇಲಾಡು ಮುಗಿಲೆ (ಆಕ್ಟ್ 1978)
  • ನಾಗಾರ್ಜುನ್ ಶರ್ಮಾ - ಮಳೆಯೇ ಮಳೆಯೇ (ಸಲಗ)
  • ಧನಂಜಯ - ಉಡುಪಿ ಹೊಟೇಲು (ಬಡವ ರಾಸ್ಕಲ್)
  • ಪ್ರಮೋದ್ ಮರವಂತೆ - ದೂರ ಹೋಗೋ ಮುನ್ನಾ (ಮುಗಿಲಪೇಟೆ)

ಅತ್ಯುತ್ತಮ ಹಿನ್ನೆಲೆ ಗಾಯಕ 

  • ರಘು ದೀಕ್ಷಿತ್ - ಮಳೆ ಮಳೆ (ನಿನ್ನ ಸನಿಹಕೆ)
  • ನಕುಲ್ ಅಭ್ಯಂಕರ್ - ತಾರೀಫು ಮಾಡಲು (ಮುಗಿಲಪೇಟೆ)
  • ಕಡಬಗೆರೆ ಮುನಿರಾಜು - ತೇಲಾಡು ಮುಗಿಲು (ಆಕ್ಟ್ 1978)
  • ಸಂಜಿತ್ ಹೆಗ್ಡೆ- ಮೆಲ್ಲನೆ (ರೈಡರ್)
  • ವಿಜಯ್ ಪ್ರಕಾಶ್ - ಉಡುಪಿ ಹೊಟೇಲು (ಬಡವ ರಾಸ್ಕಲ್)
  • ಸಿದ್ ಶ್ರೀರಾಮ್-ಹಾಯಾಗಿಡೆ (ಟಾಮ್ ಅಂಡ್ ಜೆರ್ರಿ)

ಇದನ್ನೂ ಓದಿ : Filmfare Award 2022 : ನಾಳೆ ಬೆಂಗಳೂರಿನಲ್ಲಿ ʻಫಿಲ್ಮ್​ ಫೇರ್​’ ಅವಾರ್ಡ್​ ಕಾರ್ಯಕ್ರಮ, ನೀವೂ ಹೋಗಬೇಕೇ? ಹೀಗೆ ಮಾಡಿ!

ಅತ್ಯುತ್ತಮ ಹಿನ್ನೆಲೆ ಗಾಯಕಿ 

  • ಶ್ವೇತಾ ದೇವನಹಳ್ಳಿ- ತಾರೀಫು ಮಾಡಲು (ಮುಗಿಲಪೇಟೆ)
  • ಅನುರಾಧಾ ಭಟ್- ಧೀರ ಸಮ್ಮೋಹಗಾರ (ಬಿಚ್ಚುಗತ್ತಿ)
  • ಚಿನ್ಮಯಿ ಶ್ರೀಪಾದ - ಹಾಯಾದ ಹಾಯಾದ (ದಿಯಾ)
  • ಶ್ರುತಿ VS - ಲವ್ ಯೂ ಚಿನ್ನಾ (ಲವ್ ಮಾಕ್ಟೇಲ್)
  • ಐಶ್ವರ್ಯ ರಂಗರಾಜನ್ - ಮಳೆಯೇ ಮಳೆಯೇ (ಸಲಗ)
  • ಶ್ರೇಯಾ ಘೋಷಾಲ್ - ಕಣ್ಣು ಹೊಡಿಯಾಕ (ರಾಬರ್ಟ್)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News