Jeh Ali Khans first photo : ಹೀಗಿದೆ ನೋಡಿ ಕರಿನಾ ಕಪೂರ್ ಖಾನ್ ಎರಡನೇ ಮಗು

Jeh Ali Khans first photo : ಕರೀನಾ ಕಪೂರ್ ಖಾನ್ ಎರಡನೆ ಮಗನ ಫೋಟೋ ಮತ್ತು ಮಗನ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ಕರೀನಾ ಎರಡನೇ ಪುತ್ರ ಜೆಹ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.   

Written by - Ranjitha R K | Last Updated : Jul 15, 2021, 04:42 PM IST
  • ಹೊರ ಬಿತ್ತು ಕರೀನಾ ಕಪೂರ್ ಖಾನ್ ಎರಡನೇ ಪುತ್ರನ ಫೋಟೊ
  • ವೈರಲ್ ಆಗುತ್ತಿದೆ ಜೆಹ್ ಆಲಿ ಖಾನ್ ಫೋಟೋ
  • 'ಜೆಹ್' ಎಂದರೆ ಆಗಮನ ಎಂದರ್ಥ.
Jeh Ali Khans first photo : ಹೀಗಿದೆ ನೋಡಿ ಕರಿನಾ ಕಪೂರ್ ಖಾನ್ ಎರಡನೇ ಮಗು  title=
ಹೊರ ಬಿತ್ತು ಕರೀನಾ ಕಪೂರ್ ಖಾನ್ ಎರಡನೇ ಪುತ್ರನ ಫೋಟೊ (photo instagram)

ನವದೆಹಲಿ : 4 ತಿಂಗಳ ನಂತರ ಇದೀಗ ಕರೀನಾ ಕಪೂರ್ ಖಾನ್ ಎರಡನೇ ಪುತ್ರನ ಫೋಟೊ (Kareena Kapoor Khan’s second baby Jeh’s first photo) ಹೊರ ಬಂದಿದೆ. ಕರೀನಾ  ತನ್ನ ಮಗನ ಹಣೆಗೆ ಮುತ್ತಿಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಲಾಗಿದೆ. ಇದೀಗ ಈ ಫೋಟೋ ಭಾರೀ ವೈರಲ್ ಆಗುತ್ತಿದೆ. 

ಹೊರ ಬಂತು ಜೆಹ್ ಮೊದಲ ಫೋಟೋ : 
ಕರೀನಾ ಕಪೂರ್ ಖಾನ್ (Kareena Kapoor khan) ಎರಡನೆ ಮಗನ ಫೋಟೋ ಮತ್ತು ಮಗನ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ಕರೀನಾ ಎರಡನೇ ಪುತ್ರ ಜೆಹ್ (Jeh Ali Khan) ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಫೋಟೋ ವೀಕ್ಷಿಸಿದ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಈ ಫೋಟೋಗೆ ಸಾಕಷ್ಟು ಜನ ಲೈಕ್ ಕೂಡಾ ಮಾಡುತ್ತಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Manav Manglani (@manav.manglani)

 

ಇದನ್ನೂ ಓದಿ :  ಮೈಸೂರಿನಲ್ಲಿ ಸಪ್ಲೈಯರ್ ಮೇಲೆ ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಹಲ್ಲೆ: ಇಂದ್ರಜಿತ್ ಲಂಕೇಶ್ ದೂರು

ಜೆಹ್ ಫೋಟೋ ವೀಕ್ಷಿಸಿದ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಫೋಟೋ ಇನ್ನಷ್ಟು ಸ್ಪಷ್ಟವಾಗಿರಬೇಕಿತ್ತು ಎಂದರೆ, ಇನ್ನು ಕೆಲವರು, ಜೆಹ್ ಕೂಡಾ,   ತೈಮೂರ್‌ನಂತೆ (Taimur Ali khan) ಕಾಣುತ್ತಿದ್ದಾರೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. 

ಪುಸ್ತಕದಲ್ಲೂ ಕಾಣಿಸಲಿದೆ ಫೋಟೋ :
ಸೋಷಿಯಲ್ ಮೀಡಿಯಾದಲ್ಲಿ (Social media) ವೈರಲ್ ಆಗುತ್ತಿರುವ ಈ ಫೋಟೋಗಳನ್ನು  ಕರೀನಾ ಅವರ ಮುಂದಿನ ಪುಸ್ತಕದಲ್ಲಿ ಕಾಣಬಹುದು ಎನ್ನಲಾಗಿದೆ. ಈ ಫೋಟೋಗಳನ್ನು ವೀಕ್ಷಿಸಿದ ಜನರು, ಕರೀನಾ ಪುಸ್ತಕವನ್ನು ಪ್ರಿ ಬುಕ್ ಮಾಡುವ ಬಗ್ಗೆಯೂ ಮಾತನಾಡುತ್ತಿದ್ದಾರೆ.  ಕರೀನಾ ಕಪೂರ್ ಖಾನ್ ಅವರ ಪುಸ್ತಕ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಜೆಹ್  ಹೆಸರಿನ ಅರ್ಥವೇನು?
ಜ್ಯೋತಿಷ್ಯ ಶಾಸ್ತ್ರ ಬಲ್ಲವರ ಪ್ರಾಕಾರ 'ಜೆಹ್' ಎಂದರೆ ಆಗಮನ ಎಂದರ್ಥ. ಈ ಹೆಸರು ಸಕಾರಾತ್ಮಕತೆಯನ್ನು ಸೂಚಿಸುತ್ತದೆ ಎನ್ನಲಾಗಿದೆ. ಜೆಹ್ ಎನ್ನುವುದು ಪಾರ್ಸಿ ಪದವಾಗಿದ್ದು, ಸೈಫ್ (Saif Ali Khan) ಮತ್ತು ಕರೀನಾ ಮಗನ ಹೆಸರಿಗಾಗಿ ಆಯ್ಕೆ ಮಾಡಿದ್ದಾರೆ. ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅವರ ಮೊದಲ ಮಗನ ಹೆಸರು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ  ಹಿನ್ನೆಲೆಯಲ್ಲಿ  ಈ ಬಾರಿ ಸೈಫ್ ಮತ್ತು ಕರೀನಾ ತಮ್ಮ ಮಗನ ಹೆಸರನ್ನು ಬಹಿರಂಗಪಡಿಸಲು ಸಾಕಷ್ಟು ಸಮಯ ತೆಗೆದುಕೊಂದಿದ್ದಾರೆ. 

ಇದನ್ನೂ ಓದಿ :  Rocking Star: ತಮ್ಮ ಸ್ಟಾರ್‌ಡಮ್ ಸೀಕ್ರೆಟ್ ಬಿಚ್ಚಿಟ್ಟ ರಾಕಿ ಬಾಯ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News