ದೃಶ್ಯಕ್ಕಾಗಿ ಆಮಿರ್ ಖಾನ್‌ ಜೊತೆ 47 ಬಾರಿ ಲಿಪ್ ಕಿಸ್ ಮಾಡಿದ್ದ ಕರಿಷ್ಮಾ ಕಪೂರ್..ಏನದು ಸನ್ನಿವೇಶ?

Karisma Kapoor Lip Kiss Scene : ಬಾಲಿವುಡ್‌ನಲ್ಲಿ ಅತೀ ಹೆಚ್ಚು ಸಕ್ಸಸ್ ಕಂಡಿದ್ದ ನಟಿ ಕರಿಷ್ಮಾ ಕಪೂರ್. ಇದೀಗ ನಟಿ 1996ರಲ್ಲಿ ತೆರೆಕಂಡ 'ರಾಜಾ ಹಿಂದೂಸ್ತಾನಿ' ಸಿನಿಮಾದ ಒಂದು ಚುಂಬನದ ದೃಶ್ಯದ ಬಗ್ಗೆ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

Written by - Savita M B | Last Updated : Jul 23, 2023, 01:19 PM IST
  • ಒಂದು ಕಾಲದಲ್ಲಿ ಲೇಡಿ ಸೂಪರ್‌ ಸ್ಟಾರ್‌ ಆಗಿದ್ದ ಕರಿಷ್ಮಾ ಕಪೂರ್
  • ಕರಿಷ್ಮಾ ಕಪೂರ್ ಹಾಗೂ ಆಮಿರ್ ಖಾನ್ ಜೋಡಿ ಸೂಪರ್‌ ಹಿಟ್ ಸಿನಿಮಾ 'ರಾಜಾ ಹಿಂದೂಸ್ತಾನಿ'
  • ಚುಂಬಿಸುವ ದೃಶ್ಯಕ್ಕೆ ಸುಮಾರು 47 ಟೇಕ್ ತೆಗೆದುಕೊಂಡಿದ್ದಾಗಿ ಕರಿಷ್ಮಾ ಕಪೂರ್ ಸಂದರ್ಶನದಲ್ಲಿ ಹೇಳಿದ್ದರು.
ದೃಶ್ಯಕ್ಕಾಗಿ ಆಮಿರ್ ಖಾನ್‌ ಜೊತೆ 47 ಬಾರಿ ಲಿಪ್ ಕಿಸ್ ಮಾಡಿದ್ದ ಕರಿಷ್ಮಾ ಕಪೂರ್..ಏನದು ಸನ್ನಿವೇಶ?  title=

Karisma Kapoor : ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ಅಷ್ಟೇ ಬೇಗ ಸಕ್ಸಸ್‌ ಪಡೆದುಕೊಂಡ ಕಪೂರ್ ಕುಟುಂಬದ ಕುಡಿ ಕರಿಷ್ಮಾ ಕಪೂರ್. 90ರ ದಶಕದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ನಟಿ, ಒಂದಾದ ಮೇಲೊಂದರಂತೆ ಹಿಟ್‌ ಸಿನಿಮಾಗಳನ್ನು ನೀಡಿ ನಟಿಯರಿಗೆ ಪೈಪೋಟಿ ನೀಡಿದ್ದರು. 

ಒಂದು ಕಾಲದಲ್ಲಿ ಲೇಡಿ ಸೂಪರ್‌ ಸ್ಟಾರ್‌ ಆಗಿದ್ದ ಕರಿಷ್ಮಾ ಕಪೂರ್ 'ಕೂಲಿ ನಂಬರ್ ಒನ್', 'ದಿಲ್ ತೋ ಪಾಗಲ್ ಹೈ', ' ರಾಜಾ ಹಿಂದೂಸ್ತಾನಿ' ಯಂತಹ ಮೆಗಾ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 

ಇನ್ನು ಇದರಲ್ಲಿ ಕರಿಷ್ಮಾ ಕಪೂರ್ ಹಾಗೂ ಆಮಿರ್ ಖಾನ್ ಜೋಡಿ ಸೂಪರ್‌ ಹಿಟ್ ಸಿನಿಮಾ 'ರಾಜಾ ಹಿಂದೂಸ್ತಾನಿ'. ಈ ಚಿತ್ರದ ಚಿತ್ರೀಕರಣದ ವೇಳೆ ನಡೆದ ಒಂದು ದೃಶ್ಯದ ಬಗ್ಗೆ ನಟಿ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದರು.  

ಇದನ್ನೂ ಓದಿ-ದಿಲ್‌ ʼಧಡಕ್‌ʼ ಎನ್ನವಂತಿದೆ ಜಾನ್ವಿ ಕಪೂರ್‌ ಸೌಂದರ್ಯ..! ಫೋಟೋಸ್‌ ನೋಡಿ

"ಆಮಿರ್ ಖಾನ್ ಜೊತೆ ಚುಂಬನದ ದೃಶ್ಯದಲ್ಲಿ ನಟಿಸುವಾಗ 47 ಟೇಕ್ ತೆಗೆದುಕೊಂಡಿದ್ದೇವು ಎಂದು ಆ ದೃಶ್ಯದ ಬಗ್ಗೆ ವಿವರಿದ್ದರು. ಅಷ್ಟೊಂದು ಟೇಕ್ ಯಾಕೆ ತೆಗೆದುಕೊಂಡರು? ಅನ್ನೋದೆ ಕೂತುಹಲಕಾರಿಯಾದ ವಿಷಯ. ಹೌದು ನಟಿ  ಕರಿಷ್ಮಾ ಕಪೂರ್ 'ರಾಜಾ ಹಿಂದೂಸ್ತಾನಿ' ಸಿನಿಮಾದಲ್ಲಿ ಕರಿಷ್ಮಾ ಕಪೂರ್ ಹಾಗೂ ಆಮಿರ್ ಖಾನ್ ಇಬ್ಬರೂ ಚುಂಬಿಸುವ ದೃಶ್ಯಕ್ಕೆ ಸುಮಾರು 47 ಟೇಕ್ ತೆಗೆದುಕೊಂಡಿದ್ದಾಗಿ ಕರಿಷ್ಮಾ ಕಪೂರ್ ಸಂದರ್ಶನದಲ್ಲಿ ಹೇಳಿದ್ದರು.  

"ಚಿತ್ರದ ಚುಂಬನದ ದೃಶ್ಯವನ್ನು ಊಟಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು, ಆ ವೇಳೆ ಚಳಿಗಾಲವಿತ್ತು. ಆದ್ದರಿಂದ ಚುಂಬನದ ದೃಶ್ಯಗಳು ಸರಿಯಾಗಿ ಬರುತ್ತಿರಲಿಲ್ಲ, ಈ ಕಾರಣದಿಂದಲೇ ಬರೋಬ್ಬರಿ 47 ಟೇಕ್‌ಗಳನ್ನು ತೆಗೆದುಕೊಳ್ಳಬೇಕಾಯ್ತು. ಆ ಸೀನ್‌ಗಳನ್ನು ಮಾಡುವಾಗ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇನೆ" ಎಂದು ಕರಿಷ್ಮಾ ಕಪೂರ್‌ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ-ಸಮುದ್ರದಲ್ಲಿ ಮಿಂದೆದ್ದ ಕಣ್ಸನ್ನೆ ಬೆಡಗಿ ಪ್ರಿಯಾ..! ಹಾಟ್‌ ಫೋಟೋಸ್‌ ವೈರಲ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News