Kichcha Sudeep: ಅಂದು ಸುದೀಪ್ ಕೊಟ್ಟ 50 ರೂ. ಬದುಕನ್ನೇ ಬದಲಿಸಿತು! ಪ್ರೊಡ್ಯೂಸರ್ ಆದ ಫ್ಯಾನ್‌ ಯಾರು ಗೊತ್ತಾ?

Kichcha Sudeep: 17 ವರ್ಷಗಳ ಹಿಂದೆ ಸುದೀಪ್ ಕೊಟ್ಟ 50 ರೂಪಾಯಿಯ ನೋಟು ಅವರ ಅಭಿಮಾನಿಯ ಜೀವನವನ್ನೇ ಬದಲಿಸಿತು. ಅಂದು ಕಿಚ್ಚನ ಫ್ಯಾನ್‌ ಆಗಿದ್ದ ಅವರು ಇಂದು ಪ್ರೊಡ್ಯೂಸರ್‌ ಆಗಿದ್ದಾರೆ. ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಅವರು ಯಾರು ಗೊತ್ತೇ?   

Written by - Chetana Devarmani | Last Updated : Jun 11, 2023, 10:29 AM IST
  • 17 ವರ್ಷಗಳ ಹಿಂದೆ ಸುದೀಪ್ ಕೊಟ್ಟ 50 ರೂಪಾಯಿ
  • ಅಂದು ಸುದೀಪ್ ಕೊಟ್ಟ 50 ರೂ. ಬದುಕನ್ನೇ ಬದಲಿಸಿತು
  • ಪ್ರೊಡ್ಯೂಸರ್ ಆದ ಕಿಚ್ಚನ ಫ್ಯಾನ್‌ ಯಾರು ಗೊತ್ತಾ?
Kichcha Sudeep: ಅಂದು ಸುದೀಪ್ ಕೊಟ್ಟ 50 ರೂ. ಬದುಕನ್ನೇ ಬದಲಿಸಿತು! ಪ್ರೊಡ್ಯೂಸರ್ ಆದ ಫ್ಯಾನ್‌ ಯಾರು ಗೊತ್ತಾ? title=
Kichcha Sudeep

Kichcha Sudeep: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೇವಲ ನಟನೆ ಮಾತ್ರವಲ್ಲ, ಅವರ ವ್ಯಕ್ತಿತ್ವದಿಂದಲೂ ಜನರ ಮನಗೆದ್ದಿದ್ದಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. 17 ವರ್ಷಗಳ ಹಿಂದೆ ಇವರು ಮಾಡಿದ ಆ ಒಂದು ಕಾರ್ಯ ಅಭಿಮಾನಿಯೊಬ್ಬರ ಬದುಕನ್ನೇ ಬದಲಿಸಿತು. ಸುದೀಪ್ ಅವರು ತಮ್ಮ ಎಲ್ಲಾ ಚಿತ್ರಗಳನ್ನು ಮೊದಲ ದಿನ, ಮೊದಲ ಪ್ರದರ್ಶನದಲ್ಲಿ ವೀಕ್ಷಿಸುತ್ತಾರೆ ಎಂದು ಹೇಳಲಾಗುತ್ತದೆ. 17 ವರ್ಷಗಳ ಹಿಂದೆ ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸಂತೋಷ್ ಥಿಯೇಟರ್‌ನಲ್ಲಿ ಸುದೀಪ್‌ ಅಭಿನಯದ ಮೈ ಆಟೋಗ್ರಾಫ್ ಸಿನಿಮಾ ಬಿಡುಗಡೆಯಾದಾಗ ಕೂಡ ಸುದೀಪ್‌ ಮೊದಲ ಶೋನಲ್ಲೇ ಸಿನಿಮಾ ವೀಕ್ಷಿಸಿದರು.

ಆ ದಿನ ಕಿಚ್ಚ ಸುದೀಪ್ ತಿಂಡಿ ತಿಂದಿರಲಿಲ್ಲ. ಅವರ ಪಕ್ಕದಲ್ಲಿ ಜಗ್ಗಿ ಎಂಬ ಕಟ್ಟಾ ಅಭಿಮಾನಿ ಒಬ್ಬರು ನಿಂತಿದ್ದರು. ಜಗ್ಗಿ ಅವರಿಗೆ ಸ್ವಲ್ಪ ಹಣ ನೀಡಿ, ತಿಂಡಿ ತರುವಂತೆ ಸುದೀಪ್ ತಿಳಿಸಿದರಂತೆ. ಜಗ್ಗಿ ರಸ್ತೆ ಬದಿಯ ಹೋಟೆಲ್‌ನಿಂದ ಇಡ್ಲಿ ಮತ್ತು ಚಟ್ನಿ ತಂದುಕೊಟ್ಟರಂತೆ. ಆಗ ಸುದೀಪ್ ಅವರು ನೀವೂ  ಸ್ವಲ್ಪ ತಿಂಡಿ ತಿನ್ನಿ ಎಂದರು. ಅದಕ್ಕೆ ಜಗ್ಗಿ "ಇಲ್ಲ ಅಣ್ಣ" ಎಂದು ಉತ್ತರಿಸಿದರಂತೆ. ನಂತರ ಸುದೀಪ್ ಜಗಿಗೆ 50 ರೂಪಾಯಿ ನೋಟು ನೀಡಿ ಏನಾದರೂ ತಿನ್ನುವಂತೆ ಹೇಳಿದರಂತೆ. 

ಇದನ್ನೂ ಓದಿ: Kangana Ranaut: ರಣಬೀರ್ ಕಪೂರ್ ಗೆ ವುಮನೈಸಿಂಗ್, ಡ್ರಗ್ ಅಡಿಕ್ಟ್ ಟ್ಯಾಗ್ ಕೊಟ್ಟ ಕಂಗನಾ ರಣಾವತ್!

ಆಗ ಜಗ್ಗಿ ಇಕ್ಕಟ್ಟಿಗೆ ಸಿಲುಕಿದರಂತೆ. ತನ್ನ ಆರಾಧ್ಯ ದೈವ ನೀಡಿದ ಹಣವನ್ನು ಖರ್ಚು ಮಾಡಬೇಕೇ ಅಥವಾ ಹಾಗೇ ಇಟ್ಟುಕೊಳ್ಳಬೇಕೇ? ಎಂದು ಜಗ್ಗಿ ಯೋಚಿಸಿದರಂತೆ. ಕೊನೆಗೆ ಉಪಾಹಾರ ಸೇವಿಸಲು ನಿರ್ಧರಿಸಿ, ಸ್ವಂತ ಹಣವನ್ನು ಕೊಟ್ಟರಂತೆ. ಕಿಚ್ಚ ಸುದೀಪ್‌ಕೊಟ್ಟ 50 ರೂಪಾಯಿಯನ್ನು ತನ್ನ ವಾಲೆಟ್ ನಲ್ಲಿ ಸುರಕ್ಷಿತವಾಗಿಟ್ಟುಕೊಂಡರಂತೆ. ಇಂದಿಗೂ ಅದನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾರಂತೆ ಜಗ್ಗಿ.

ಇದೇ ಕಿಚ್ಚನ ಅಭಿಮಾನಿ ಜಗ್ಗಿ ನಂತರದ ದಿನಗಳಲ್ಲಿ ಸಿನಿಮಾ ನಿರ್ಮಾಪಕರಾದರು. ಇತ್ತೀಚೆಗೆ ಮರ್ದಿನಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಪ್ರಚಾರದ ವೇಳೆ ಈ ಘಟನೆಯನ್ನು ಜಗ್ಗಿ ನೆನಪಿಸಿಕೊಂಡರು. ಅಂದು ಕಿಚ್ಚ ಸುದೀಪ್‌ ಕೊಟ್ಟ ಆ 50 ರೂಪಾಯಿ ನೋಟು ತನಗೆ ಅದೃಷ್ಟ ತಂದುಕೊಟ್ಟಿತು ಎಂದು ಜಗ್ಗಿ ಹೇಳಿದ್ದಾರೆ. 

ಇದನ್ನೂ ಓದಿ: Heroines Remunerations: ಒಂದು ಕೋಟಿ ಸಂಭಾವನೆ ಪಡೆದ ಮೊದಲ ನಟಿ ಯಾರು ಗೊತ್ತಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News