ಆಸ್ಕರ್ ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿ. ಈ ವರ್ಷ ಈ ಪ್ರಶಸ್ತಿಗಳನ್ನು ಲಾಸ್ ಏಂಜಲೀಸ್ನಲ್ಲಿ ಆಸ್ಕರ್ 2023 ಈವೆಂಟ್ ನಡೆಯುತ್ತಿದೆ ಮತ್ತು ಪ್ರಶಸ್ತಿಗಳ ಘೋಷಣೆಗಳು ನಡೆಯುತ್ತಿವೆ. ಆರ್ಆರ್ಆರ್ ಚಿತ್ರದ 'ನಾಟು ನಾಟು' ಹಾಡನ್ನು ಅತ್ಯುತ್ತಮ ಹಾಡು ಎಂದು ಘೋಷಿಸಲಾಯಿತು.ಆರ್ಆರ್ಆರ್ನ 'ನಾಟು ನಾಟು' ಹಾಡು ಇತ್ತೀಚಿನ ದಿನಗಳಲ್ಲಿ ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪ್ರಶಸ್ತಿಗಳನ್ನು ತಂದಿದೆ.
ಇದನ್ನೂ ಓದಿ-Oscars 2023 ಕ್ಕೂ ಕರ್ನಾಟಕಕ್ಕೂ ವಿಶೇಷ ನಂಟು.. ಕನ್ನಡಿಗರು ಹೆಮ್ಮೆ ಪಡುವ ಸಂಗತಿ!
Congrats team #RRR .. @ssrajamouli sir and #keeravani sir.
🤗 https://t.co/g8RxO5p9Fh— Kichcha Sudeepa (@KicchaSudeep) March 13, 2023
ಈ ಎಲ್ಲಾ ಪ್ರಶಸ್ತಿಗಳ ಜೊತೆಗೆ, ಈ ಹಾಡು ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿಯಾದ ಆಸ್ಕರ್ ಗೆಲ್ಲಬೇಕೆಂದು ಎಲ್ಲರೂ ಬಯಸಿದ್ದರು. 'ನಾಟು ನಾಟು' ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪಡೆದಿದ್ದು, ಎಲ್ಲರ ಬಯಕೆ ಈಡೇರಿದೆ. ಅಲ್ಲದೇ RRR ಚಿತ್ರತಂಡವನ್ನು ಸಾಕಷ್ಟು ಕಲಾವಿದರು ಹಾಡಿ ಹೊಗಳಿದ್ದಾರೆ. ಕೇವಲ ಚಿತ್ರತಂಡವಷ್ಟೇ ಕುಷಿ ಪಟ್ಟಿಲ್ಲ ಅಭಿಮಾನಿಗಳು, ಕಲಾಬಳಗ ಎಲ್ಲರೂ ಕುಷಿಪಟ್ಟಿದ್ದಾರೆ. ಕಿಚ್ಚ ಸುದೀಪ್ ತಮ್ಮ ಟ್ವೀಟರ್ ಪೇಜ್ ನ ಮೂಲಕ RRR ಚಿತ್ರತಂಡವನ್ನು ಅಭಿನಂದಿಸುವುದರ ಜೊತೆಗೆ ರಾಜಮೌಳಿ ಹಾಗೂ ಕಿರವಾಣಿಯವರನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ-Oscars 2023: ಆಸ್ಕರ್ ಪ್ರಶಸ್ತಿ ವೇಳೆ ಎನ್ಟಿಆರ್ ಉಡುಪಿನಲ್ಲಿದ್ದ ಹುಲಿ ಚಿಹ್ನೆಯ ರಹಸ್ಯವೇನು ಗೊತ್ತೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.