Oscars 2023: ಆಸ್ಕರ್‌ ಪ್ರಶಸ್ತಿ ವೇಳೆ ಎನ್‌ಟಿಆರ್ ಉಡುಪಿನಲ್ಲಿದ್ದ ಹುಲಿ ಚಿಹ್ನೆಯ ರಹಸ್ಯವೇನು ಗೊತ್ತೇ?

Jr NTR : ಆಸ್ಕರ್‌ನಲ್ಲಿ ಆರ್‌ಆರ್‌ಆರ್‌ನ ಗೆಲುವು ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿ ಭಾರತದ ಇತಿಹಾಸದಲ್ಲಿ ನಾವು ಅತ್ಯಂತ ಹೆಮ್ಮೆಪಡುವ ಪ್ರಮುಖ ಕ್ಷಣಕ್ಕೆ  ಸಾಕ್ಷಿಯಾಗಿದ್ದು ಗೊತ್ತೆ ಇದೆ. ಅದರ ನಡುವೆಯೂ  ಜೂನಿಯರ್ ಎನ್‌ಟಿಆರ್ ಧರಿಸಿದ್ದ ಬಟ್ಟೆಯ ಮೇಲೆ ಹುಲಿ ಚಿಹ್ನೆಯೊಂದು ಛಾಯಾಗ್ರಾಹಕರ ಹಾಗೂ ಅಭಿಮಾನಿಗಳಲ್ಲಿ ಬಾರಿ ಕೂತುಹಲ ಮೂಡಿಸಿದೆ.

Written by - Zee Kannada News Desk | Last Updated : Mar 14, 2023, 12:31 PM IST
  • ಆಸ್ಕರ್‌ನಲ್ಲಿ ಆರ್‌ಆರ್‌ಆರ್‌ನ ಗೆಲುವು ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ
  • ಜೂನಿಯರ್ ಎನ್‌ಟಿಆರ್ ಧರಿಸಿದ್ದ ಬಟ್ಟೆಯ ಮೇಲೆ ಹುಲಿ ಚಿಹ್ನೆಯೊಂದು ಛಾಯಾಗ್ರಾಹಕರ ಹಾಗೂ ಅಭಿಮಾನಿಗಳಲ್ಲಿ ಬಾರಿ ಕೂತುಹಲ ಮೂಡಿಸಿತ್ತು.
  • ಆರ್‌ಆರ್‌ಆರ್‌ ಸಿನಿಮಾದಲ್ಲಿ ಹುಲಿ ಎರಗುವ ಣ್ಣ ವಿಡಿಯೋ ತುಣುಕಿನ ಬಗ್ಗೆ ವಿವರಣೆ ನೀಡಿದ ಎನ್‌ಟಿಆರ್
Oscars 2023: ಆಸ್ಕರ್‌ ಪ್ರಶಸ್ತಿ ವೇಳೆ ಎನ್‌ಟಿಆರ್ ಉಡುಪಿನಲ್ಲಿದ್ದ ಹುಲಿ ಚಿಹ್ನೆಯ ರಹಸ್ಯವೇನು ಗೊತ್ತೇ? title=

Jr NTR : ಆಸ್ಕರ್‌ನಲ್ಲಿ ಆರ್‌ಆರ್‌ಆರ್‌ನ ಗೆಲುವು ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿ ಭಾರತದ ಇತಿಹಾಸದಲ್ಲಿ ನಾವು ಅತ್ಯಂತ ಹೆಮ್ಮೆಪಡುವ ಪ್ರಮುಖ ಕ್ಷಣಕ್ಕೆ  ಸಾಕ್ಷಿಯಾಗಿದ್ದು ಗೊತ್ತೆ ಇದೆ. ಅದರ ನಡುವೆಯೂ  ಜೂನಿಯರ್ ಎನ್‌ಟಿಆರ್ ಧರಿಸಿದ್ದ ಬಟ್ಟೆಯ ಮೇಲೆ ಹುಲಿ ಚಿಹ್ನೆಯೊಂದು ಛಾಯಾಗ್ರಾಹಕರ ಹಾಗೂ ಅಭಿಮಾನಿಗಳಲ್ಲಿ ಬಾರಿ ಕೂತುಹಲ ಮೂಡಿಸಿದೆ. ಹಾಗಿದ್ದರೆ ಬಟ್ಟೆ ಮೇಲಿನ ಹುಲಿ ಚಿಹ್ನೆಯ ರಹಸ್ಯವೇನು ನೋಡೋಣ... 

ಸಮಾರಂಭದ ವೇಳೆ ಪತ್ರಕರ್ತೆ ಒಬ್ಬರು ಎನ್‌ಟಿಆರ್ ಬಟ್ಟೆ ಮೇಲಿನ ಹುಲಿ ಚಿಹ್ನೆ ಬಗ್ಗೆ ಕೇಳಿದಾಗ,  ಅವರು ವಿವರಿಸಿದರು, “ಅಂದರೆ, ನೀವು   RRR  ಸಿನಿಮಾ ನೋಡಿಲ್ಲವೇ ? ಎಂದು ಪತ್ರಕರ್ತರಿಗೆ ಮರು ಪ್ರಶ್ನಿಸಿ ಆ ಸಿನಿಮಾದಲ್ಲಿ ಹುಲಿಯೊಂದು ನನ್ನ ಮೇಲೆ ಎರಗುವ  ಣ್ಣ ವಿಡಿಯೋ ತುಣುಕಾಗಿದೆ. ಎಂದರು.  ಎನ್‌ಟಿಆರ್ ಉಡುಗೆ ಬಗ್ಗೆ  , ಅದ್ಭುತ ವಿನ್ಯಾಸಕರಾದ ನನ್ನ ಉತ್ತಮ ಸ್ನೇಹಿತನಾದ ಗೌರವ್ ಗುಪ್ತಾ  ತಯಾರಿಸಿದ ಉಡುಪಾಗಿದೆ  ಪ್ರತಿ ಕಾರ್ಯಕ್ರಮದ  ಉಡುಪಿನ ಬಗ್ಗೆ ಅವರೇ ಹೆಚ್ಚಾಗಿ ಚರ್ಚಿಸುತ್ತಾರೆ. ಅಷ್ಟೇ ಅಲ್ಲದೇ ನಮ್ಮ ದೇಶ ಭಾರತ ಹಾಗಾಗಿ ನಾನು ನನ್ನ ಭಾರತೀಯ ಉಡುಪಿನಲ್ಲಿದ್ದೇನೆ ಹುಲಿ ಭಾರತದ ರಾಷ್ಟ್ರೀಯ ಪ್ರಾಣಿ ಎಂದು ದೇಶ ಬಗ್ಗೆ  ಕೊಂಡಾಡಿದ್ದಾರೆ. 

ಇದನ್ನೂ ಓದಿ: Vaathi Film: ಅಭಿಮಾನಿಗಳಿಗೆ  ಸಿಹಿ ಸುದ್ದಿ ನೀಡಿದ ತಮಿಳು ನಟ  ಧನುಷ್..

ಹಾಗೂ ಹುಲಿ ಮೋಟಿಫ್ ಹಿಂದಿನ ನಿಜವಾದ ಕಾರಣವನ್ನು ಇನ್ನಷ್ಟು  ವಿವರಿಸುತ್ತಾ, “ಈಗ  ಜಾಗತಿಕ ಭಾರತೀಯನಾಗಿ ಪ್ರತಿನಿಧಿಸುವಾಗ ಎನ್‌ಟಿಆರ್  ವ್ಯಕ್ತಿತ್ವದ ಅಂಶವನ್ನು ಹೊಂದಿರುವುದು ನನಗೆ ಮುಖ್ಯವಾಗಿತ್ತು.  ಇದು ಕಪ್ಪು ವೆಲ್ವೆಟ್ ಬಂಧಗಾಲಾ ಮೇಲೆ ಪುರಾತನ ಹುಲಿ ಕಸೂತಿಯೊಂದಿಗೆ ಸುಂದರವಾಗಿ ಒಟ್ಟಿಗೆ ಹೊಂದಿಕೊಳ್ಳುತ್ತದೆ. ಹುಲಿಯು ಭಾರತಕ್ಕೆ ಗೌರವವಾಗಿದೆ ಏಕೆಂದರೆ ಇದು ನಮ್ಮ ರಾಷ್ಟ್ರೀಯ ಪ್ರಾಣಿಯಾಗಿದ್ದು, ಜೊತೆಗೆ 'ಯಂಗ್ ಟೈಗರ್' ಎಂದು ಜನಪ್ರಿಯವಾಗಿರುವ ಎನ್‌ಟಿಆರ್ ಜೂನಿಯರ್ ಪ್ರಾತಿನಿಧ್ಯ ಮತ್ತು ಸಹಜವಾಗಿ ಆರ್‌ಆರ್‌ಆರ್ ಎಂದಿದ್ದಾರೆ.

 
 
 
 

 
 
 
 
 
 
 
 
 
 
 

A post shared by Instant Bollywood (@instantbollywood)

 

 

 

 

 

ಇದನ್ನೂ ಓದಿ: Kichcha Sudeep: ಪ್ರಕೃತಿ ಕಂದಮ್ಮಗಳ ದಾಹ ನೀಗಿಸಲು ಹೊರಡಿದೆ ‘ಕಿಚ್ಚನ ಅಭಿಮಾನ’ದ ಮೆರವಣಿಗೆ..!

RRR ನ 'ನಾಟು ನಾಟು' 95 ನೇ ಅಕಾಡೆಮಿ ಪ್ರಶಸ್ತಿಯಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ನಾಟು ನಾಟುವನ್ನು ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಹಾಡಿದ್ದಾರೆ, ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ ಮತ್ತು ಚಂದ್ರಬೋಸ್ ಸಾಹಿತ್ಯವನ್ನು ಬರೆದಿದ್ದಾರೆ. ಇದಲ್ಲದೆ, ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ಗುನೀತ್ ಮೊಂಗಾ ಅವರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News