Kiccha Sudeep : "ಬೇಗ ಕನ್ನಡ ಕಲಿಯಿರಿ" ಹಿಂದಿವಾಲಾಗಳಿಗೆ ಕಿಚ್ಚನ ಪಂಚ್.!

Kiccha Sudeep : ಕಿಚ್ಚ ಸುದೀಪ್‌ ಕನ್ನಡ ಅಭಿಮಾನದ ಬಗ್ಗೆ ಎಲ್ಲರಿಗೂ ತಿಳಿದೆ ಇದೆ. ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಗುಡುಗುತ್ತಿರುತ್ತಾರೆ. ಕೆಲವು ಸಂದರ್ಶನಗಳಲ್ಲೂ ಸುದೀಪ್‌ ಕನ್ನಡ ಪ್ರೇಮವನ್ನು ಕಾಣಬಹುದು. ಇದೀಗ ಮತ್ತೊಮ್ಮೆ ಮುಂಬೈನಲ್ಲಿ ಸುದೀಪ್‌ ಕನ್ನಡ ಪ್ರೇಮ ಮೆರೆದಿದ್ದಾರೆ. 

Written by - Chetana Devarmani | Last Updated : Mar 11, 2023, 08:19 AM IST
  • "ಬೇಗ ಕನ್ನಡ ಕಲಿಯಿರಿ"
  • ಹಿಂದಿವಾಲಾಗಳಿಗೆ ಕಿಚ್ಚನ ಪಂಚ್
  • ಎಲ್ಲೆಡೆ ವೈರಲ್‌ ಆಯ್ತು ಸುದೀಪ್‌ ಮಾತು
Kiccha Sudeep : "ಬೇಗ ಕನ್ನಡ ಕಲಿಯಿರಿ" ಹಿಂದಿವಾಲಾಗಳಿಗೆ ಕಿಚ್ಚನ ಪಂಚ್.!  title=
Kiccha Sudeep

Kiccha Sudeep : ಕಿಚ್ಚ ಸುದೀಪ್‌ ಕನ್ನಡ ಅಭಿಮಾನದ ಬಗ್ಗೆ ಎಲ್ಲರಿಗೂ ತಿಳಿದೆ ಇದೆ. ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಗುಡುಗುತ್ತಿರುತ್ತಾರೆ. ಕೆಲವು ಸಂದರ್ಶನಗಳಲ್ಲೂ ಸುದೀಪ್‌ ಕನ್ನಡ ಪ್ರೇಮವನ್ನು ಕಾಣಬಹುದು. ಕೇವಲ ಸಿನಿಮಾಕ್ಕೆ ಮಾತ್ರ ಸೀಮಿತಗೊಳ್ಳದೆ, ಅವಕಾಶ ಸಿಕ್ಕಾಗೆಲ್ಲ ಹೊರ ರಾಜ್ಯಗಳಲ್ಲಿ ಸಹ ಕನ್ನಡದ ಮಹತ್ವದ ಸಾರುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಮುಂಬೈನಲ್ಲಿ ಸುದೀಪ್‌ ಕನ್ನಡ ಪ್ರೇಮ ಮೆರೆದಿದ್ದಾರೆ. 

ಮುಂಬೈನಲ್ಲಿ ವೇದಿಕೆ ಮೇಲೆ ನಿಂತು ಎದುರಿಗಿದ್ದ ಹಿಂದಿ ವಾಲಾಗಳಿಗೆ ಕನ್ನಡ ಕಲಿಯಿರಿ ಎಂದಿದ್ದಾರೆ ಕಿಚ್ಚ. ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ನಿರತವಾಗಿದೆ. ಸಿನಿಮಾದ ಪ್ರಚಾರಕ್ಕೆ ಚಿತ್ರತಂಡ ಮುಂಬೈಗೆ ತೆರಳಿತ್ತು. ಅಲ್ಲಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಚಿತ್ರತಂಡ ಸಿನಿಮಾದ ಬಗ್ಗೆ ಮಾತನಾಡಿದೆ. 

ಇದನ್ನೂ ಓದಿ: ವೋಡ್ಕಾ ಗ್ಲಾಸ್.. ಕೈಯಲ್ಲಿ ಮಲ್ಲಿಗೆ, ಪಕ್ಕದಲ್ಲಿ ಹುಡುಗಿ.. ರೊಮ್ಯಾಂಟಿಕ್‌ ಮೂಡ್‌ನಲ್ಲಿ RGV!!

ಆರ್.ಚಂದ್ರು ಸಿನಿಮಾ ಬಗ್ಗೆ ಕನ್ನಡದಲ್ಲಿಯೇ ಮಾತನಾಡಲು ಆರಂಭಿಸಿದರು. "ನಾನು ಸುದೀಪ್, ಉಪೇಂದ್ರ, ಶಿವಣ್ಣ ಅವರ ಫ್ಯಾನ್‌. ಅವರೊಟ್ಟಿಗೆ ಒಂದು ಫೋಟೊ ಸಿಕ್ಕರೆ ಸಾಕು ಎಂದುಕೊಂಡಿದ್ದೆ. ಆದರೆ ಅವರು ಕೊಟ್ಟಂತಹ ಪ್ರೀತಿ, ನನ್ನ ಮೇಲಿಟ್ಟ ವಿಶ್ವಾಸ ಈಗ ಕಬ್ಜ ಸಿನಿಮಾ ಆಗಿದೆ. ಕಬ್ಜ ಸಿನಿಮಾ ನಾನು ಮಾಡಿದ್ದಲ್ಲ. ಯಾವುದೋ ಒಂದು ಶಕ್ತಿ ನನ್ನಿಂದ ಮಾಡಿಸಿದೆ. ಇಷ್ಟು ದೊಡ್ಡ ಸ್ಟಾರ್‌ ನಟರು ಬೆಂಬಲಿಸುತ್ತಿರುವುದು ನನ್ನ ಪುಣ್ಯ. ಮಾರ್ಚ್‌ 17 ರಂದು ಸಿನಿಮಾ ಬಿಡುಗಡೆ ಆಗಲಿದೆ. ಕಬ್ಜ ನಾನೊಬ್ಬನೆ ಮಾಡಿದ್ದಲ್ಲ, ಟೀಂ ವರ್ಕ್ ಇದರಲ್ಲಿದೆ"  ಎಂದು ಹೇಳಿದರು. 

 

 

ಡೈರೆಕ್ಟರ್‌ ಆರ್‌ ಚಂದ್ರು ಮಾತು ಮುಗಿಸಿದ ಕೂಡಲೇ ಇವರ ಮಾತನ್ನು ನಾನು ಟ್ರಾನ್ಸ್‌ಲೇಟ್‌ ಮಾಡ್ತೇನೆ ಎಂದ ಕಿಚ್ಚ ಸುದೀಪ್‌, "ಇವರು ಬಹಳ ವಿಶಾಲ ಅರ್ಥದಲ್ಲಿ ಏನು ಹೇಳಿದ್ರು ಅಂದ್ರೆ ಆದಷ್ಟು ಬೇಗ ಕನ್ನಡ ಕಲಿಯಿರಿ" ಎಂದು ಹೇಳಿದರು. ಸುದೀಪ್ ಅವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಕೊಡ್ತಿದ್ದಂತೆ ಫುಲ್ ಖುಷ್ ಆದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News