Ram Gopal Varma : ವೋಡ್ಕಾ ಗ್ಲಾಸ್.. ಕೈಯಲ್ಲಿ ಮಲ್ಲಿಗೆ, ಪಕ್ಕದಲ್ಲಿ ಹುಡುಗಿ.. ರೊಮ್ಯಾಂಟಿಕ್‌ ಮೂಡ್‌ನಲ್ಲಿ RGV!!

Ram Gopal Varma : ರಾಮ್ ಗೋಪಾಲ್ ವರ್ಮಾ ಅವರ ಮಾತು, ನಡೆ, ಟ್ವೀಟ್ ಎಲ್ಲರಿಗೂ ಗೊತ್ತು. ಅವರು ಪ್ರಣಯದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಪುರುಷ ಜನಾಂಗವನ್ನು ದ್ವೇಷಿಸುತ್ತೇನೆ ಮತ್ತು ಹೆಣ್ಣು ಜನಾಂಗವನ್ನು ತುಂಬಾ ಪ್ರೀತಿಸುತ್ತೇನೆ ಎಂಬ ವರ್ಮಾ ಅವರ ಮಾತುಗಳು ಜನರನ್ನು ಅದರಲ್ಲೂ ಯುವಕರನ್ನು ಆಕರ್ಷಿಸುತ್ತವೆ. 

Written by - Chetana Devarmani | Last Updated : Mar 11, 2023, 07:47 AM IST
  • ವೋಡ್ಕಾ ಗ್ಲಾಸ್.. ಕೈಯಲ್ಲಿ ಮಲ್ಲಿಗೆ, ಪಕ್ಕದಲ್ಲಿ ಹುಡುಗಿ
  • ರೊಮ್ಯಾಂಟಿಕ್‌ ಮೂಡ್‌ನಲ್ಲಿ ರಾಮ್ ಗೋಪಾಲ್ ವರ್ಮಾ
  • ಸೋಶಿಯಲ್‌ ಮೀಡಿಯಾದಲ್ಲಿ RGV ಫೋಟೋ ವೈರಲ್‌
Ram Gopal Varma : ವೋಡ್ಕಾ ಗ್ಲಾಸ್.. ಕೈಯಲ್ಲಿ ಮಲ್ಲಿಗೆ, ಪಕ್ಕದಲ್ಲಿ ಹುಡುಗಿ.. ರೊಮ್ಯಾಂಟಿಕ್‌ ಮೂಡ್‌ನಲ್ಲಿ RGV!!  title=
Ram Gopal Varma

Ram Gopal Varma : ರಾಮ್ ಗೋಪಾಲ್ ವರ್ಮಾ ಅವರ ಮಾತು, ನಡೆ, ಟ್ವೀಟ್ ಎಲ್ಲರಿಗೂ ಗೊತ್ತು. ಅವರು ಪ್ರಣಯದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಅವರು ಮಹಿಳೆಯರ ಸೌಂದರ್ಯವನ್ನು ಹೊಗಳುತ್ತಾರೆ. ಪುರುಷ ಜನಾಂಗವನ್ನು ದ್ವೇಷಿಸುತ್ತೇನೆ ಮತ್ತು ಹೆಣ್ಣು ಜನಾಂಗವನ್ನು ತುಂಬಾ ಪ್ರೀತಿಸುತ್ತೇನೆ ಎಂಬ ವರ್ಮಾ ಅವರ ಮಾತುಗಳು ಜನರನ್ನು ಅದರಲ್ಲೂ ಯುವಕರನ್ನು ಆಕರ್ಷಿಸುತ್ತವೆ. ವರ್ಮಾ ಶೇರ್ ಮಾಡಿರುವ ಲೇಟೆಸ್ಟ್ ಫೋಟೋ ಎಲ್ಲೆಡೆ ವೈರಲ್‌ ಆಗ್ತಿದೆ.

ಆಶು ರೆಡ್ಡಿ ಜೊತೆ ವರ್ಮಾ ಅವರ ಸಂದರ್ಶನ ಚೆಂದವಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆಶು ರೆಡ್ಡಿಯ ಸಂದರ್ಶನ ಮಾತ್ರವಲ್ಲ, ಆಕೆಯ ಕಾಲಿಗೆ ಆರ್‌ಜಿವಿ ಫೂಟ್‌ ಮಸಾಜ್‌ ಮಾಡಿದ ವಿಚಾರದಿಂದ ಎಷ್ಟು ಅನಾಹುತ ಸಂಭವಿಸಿದೆ ಎಂಬುದನ್ನು ಮರೆಯುವುದು ಸುಲಭವಲ್ಲ. ಇಡೀ ಸಾಮಾಜಿಕ ಮಾಧ್ಯಮದಿಂದ ಆಶು ಮತ್ತು ಆರ್‌ಜಿವಿ ಇಬ್ಬರನ್ನೂ ಕ್ರೂರವಾಗಿ ಅವಮಾನಿಸಲಾಗಿದೆ. ಆದರೆ, ಆರ್ ಜಿವಿ ಬದಲಾಗುವುದಿಲ್ಲ ಎಂಬುದು ಗೊತ್ತೇ ಇದೆ.

ಇದನ್ನೂ ಓದಿ: ಮಗು ಜೊತೆ ಮಗುವಾಗಿ ಆಟವಾಡಿದ ಬ್ಯೂಟಿ..! ಎಷ್ಟು ಕ್ಯೂಟ್‌ ಅಲ್ವಾ ರಶ್ಮಿಕಾ

ಇತ್ತೀಚೆಗಷ್ಟೇ RGV ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿನ ವಸ್ತುಗಳನ್ನು ನೋಡಿದರೆ ಅವರೆಂತಹ ರಸಿಕ ಎಂಬುದು ಗೊತ್ತಾಗುತ್ತದೆ. ಪಕ್ಕದಲ್ಲಿ ವೋಡ್ಕಾ ಗ್ಲಾಸ್.. ಕೈಯಲ್ಲಿ ಮಲ್ಲಿಗೆ ಹೂಗಳ ಮಾಲೆ.. ಮತ್ತು ಹುಡುಗಿಯ ಕೈಯನ್ನು RGV ಹಿಡಿದಿರುವ ರೀತಿ ನೋಡಿದರೆ ಜನರಿಗೆ ಆಶ್ಚರ್ಯವಾಗುತ್ತದೆ.

 

 

ಒಟ್ಟಿನಲ್ಲಿ ವರ್ಮಾ ಫುಲ್ ಎಂಜಾಯ್ ಮಾಡುತ್ತಿದ್ದಾರೆ ಎಂಬ ಕಾಮೆಂಟ್ ಗಳು ಬರುತ್ತಿವೆ. ಇತ್ತೀಚೆಗಷ್ಟೇ ಅಂಬರ್ ಪೇಟ್ ನಾಯಿಗಳ ದಾಳಿ ಘಟನೆಯ ಬಗ್ಗೆ ಪ್ರತಿಕ್ರಿಯಿಸುವ ಮೂಲಕ ವರ್ಮಾ ಮಾಧ್ಯಮಗಳಲ್ಲಿ ಹೈಲೈಟ್ ಆಗಿದ್ದಾರೆ. ವರ್ಮಾ ಅವರು ಮೇಯರ್ ಅವರನ್ನು ಗುರಿಯಾಗಿಸಿಕೊಂಡು ಮಾಡಿದ ಕಾಮೆಂಟ್‌ಗಳು ಮತ್ತು ಅವರು ಬಿಟ್ಟ ವೀಡಿಯೊಗಳು ಜನರನ್ನು ಆಕರ್ಷಿಸಿವೆ.

ಆ ಫೋಟೋದಲ್ಲಿ ಯಾರಿದ್ದಾರೆ? ನೈನಾ ಗಂಗೂಲಿ? ಅಪ್ಸರಾ ರಾಣಿ? ಅಥವಾ ಇನ್ನೊಬ್ಬ ಹೊಸ ನಟಿ? ಹೀಗೆ ಜನರು ಆರ್‌ಜಿವಿಯ ಈ ಹೊಸ ಫೋಟೋ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಇದುವರೆಗೂ ವರ್ಮಾ ಹುಡುಗಿಯ ವಿವರಗಳನ್ನು ಬಹಿರಂಗಪಡಿಸಿಲ್ಲ. 

ಇದನ್ನೂ ಓದಿ: ದುಬೈನಲ್ಲಿ ನರೇಶ್ ಪವಿತ್ರ ಹನಿಮೂನ್..! ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಟ್ಟ ಜೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News