Salman Khan : ಹೊಸ ನಟರಿಗೆ ಬಹಿರಂಗ ಸವಾಲು ಹಾಕಿದ ಸಲ್ಮಾನ್ ಖಾನ್!

Salman Khan challenged new actors : ಚಲನಚಿತ್ರಗಳಿಗೆ ಪಡೆಯುವ ಸಂಭಾವನೆ ಬಗ್ಗೆ ಮಾತನಾಡುತ್ತಾ ಹೊಸ ನಟರಿಗೆ ಬಹಿರಂಗ ಸವಾಲು ಹಾಕಿದ ಸಲ್ಮಾನ್ ಖಾನ್. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಲ್ಮಾನ್ ಖಾನ್ ಭಾಗಿಯಾಗಿದ್ದರು.   

Written by - Chetana Devarmani | Last Updated : Apr 6, 2023, 01:36 PM IST
  • 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಸುದ್ದಿಗೋಷ್ಠಿ
  • ಬಾಲಿವುಡ್‌ ಹೊಸ ನಟರಿಗೆ ಸವಾಲು
  • ಬಹಿರಂಗ ಸವಾಲೆಸೆದ ಸಲ್ಮಾನ್ ಖಾನ್!
Salman Khan : ಹೊಸ ನಟರಿಗೆ ಬಹಿರಂಗ ಸವಾಲು ಹಾಕಿದ ಸಲ್ಮಾನ್ ಖಾನ್!  title=
Salman Khan

Salman Khan Movies: ಸಲ್ಮಾನ್ ಖಾನ್ ತಮ್ಮ ಸಖತ್ ನಟನೆ ಹಾಗೂ ಸ್ಟೈಲ್‌ನಿಂದ ಜನರ ಹೃದಯದಲ್ಲಿ ನೆಲೆಯೂರಿರುವ ಬಾಲಿವುಡ್ ಸ್ಟಾರ್. ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರತಂಡದ ಜೊತೆಗೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಸಲ್ಮಾನ್ ಖಾನ್ ಪ್ರಶಸ್ತಿಗಳು, OTT, ನೃತ್ಯ ಸೇರಿದಂತೆ ಹಲವು ಪ್ರಶ್ನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ : ಪಾರ್ವತಮ್ಮ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತ ನಟಿಯರು ಇವರೇ

ಸಲ್ಮಾನ್ ಖಾನ್ ಇತ್ತೀಚೆಗಷ್ಟೇ ಫಿಲ್ಮ್‌ಫೇರ್ ಅವಾರ್ಡ್‌ಗೂ ಮುನ್ನ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಫಿಲ್ಮ್‌ಫೇರ್‌ನ ಪತ್ರಿಕಾಗೋಷ್ಠಿಯಲ್ಲಿ, ಸಲ್ಮಾನ್ ಹೊಸ ತಾರೆಯರ ಸ್ಪರ್ಧೆಯ ಬಗ್ಗೆ ಮಾತನಾಡುವ ಮೂಲಕ ತಮ್ಮ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇವರೆಲ್ಲರೂ ತುಂಬಾ ಶ್ರಮಶೀಲರು ಮತ್ತು ಪ್ರತಿಭಾವಂತರು, ಆದರೆ ನಾವು ಐವರೂ ಅದನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಶಾರುಖ್, ಅಮೀರ್, ನಾನು, ಅಕ್ಕಿ ಮತ್ತು ಅಜಯ್ ಬಿಟ್ಟು ಕೊಡುವವರಲ್ಲ. ಅವರ ಹಣಕ್ಕೆ ಬಾಜಿ ಕಟ್ಟಿ ಓಡಿ ಸುಸ್ತಾಗುವಂತೆ ಮಾಡುತ್ತೇವೆ ಎಂದಿದ್ದಾರೆ.

ಸಲ್ಮಾನ್ ಖಾನ್ ಹೊಸ ತಾರೆಯರ ಸಂಭಾವನೆ ಹೆಚ್ಚಳದ ಕುರಿತು ಮಾತನಾಡಿದ್ದಾರೆ. ನಮ್ಮ ಚಿತ್ರಗಳು ಓಡುತ್ತವೆ, ಅದಕ್ಕಾಗಿಯೇ ನಾವು ಸಂಭಾವನೆ ಹೆಚ್ಚಿಸುತ್ತೇವೆ ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಪತ್ರಿಕಾಗೋಷ್ಠಿಯಲ್ಲಿ OTT ಸೆನ್ಸಾರ್‌ಶಿಪ್ ಪರವಾಗಿ ಅನೇಕ ವಿಷಯಗಳನ್ನು ಹೇಳಿದ್ದಾರೆ. ಸಲ್ಮಾನ್ ಖಾನ್ ಶೀಘ್ರದಲ್ಲೇ ಅವರ ಹೊಸ ಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ. ಗಮನಾರ್ಹವೆಂದರೆ ಸಲ್ಮಾನ್ ಅವರ ಹೊಸ ಚಿತ್ರ ಈದ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ : ಬಿಜೆಪಿ ಬೆಂಬಲಿಸುತ್ತೇನೆಂಬ ಕಿಚ್ಚನ ಹೇಳಿಕೆಯಿಂದ ಬೇಸರಗೊಂಡ ಪ್ರಕಾಶ್‌ ರಾಜ್‌ ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News