Kiccha Sudeep : ಸುದೀಪ್‌ ಪ್ರಚಾರಕ್ಕಾಗಿ​ ಹಣ ತಗೊಂಡ್ರಾ? ಕಿಚ್ಚನ ಖಡಕ್‌ ಉತ್ತರ ಇದು..

Kiccha Sudeep press conference with CM Bommami : ಇಂದು ಸಿಎಂ ಬಸವರಾಜ ಬೊಮ್ಮಾಯಿ ಜತೆ ಸುದ್ದಿಗೋಷ್ಠಿ ನಡೆಸಿದ ನಟ ಸುದೀಪ್‌ ತಮ್ಮ ರಾಜಕೀಯ ನಿಲುವನ್ನು ತಿಳಿಸಿದರು. ಬಿಜೆಪಿ ಪರ ಸ್ಟಾರ್​ ಪ್ರಚಾರಕರಾಗಿರುವ ಕಿಚ್ಚ ಸುದೀಪ್‌, ಅನೇಕ ವಿಚಾರಗಳಿಗೆ ಸ್ಪಷ್ಟನೆ ನೀಡಿದರು.   

Written by - Chetana Devarmani | Last Updated : Apr 5, 2023, 04:29 PM IST
  • ಸಿಎಂ ಬೊಮ್ಮಾಯಿ ಜತೆ ಸುದೀಪ್‌ ಸುದ್ದಿಗೋಷ್ಠಿ
  • ಪ್ರಚಾರ ಮಾಡಲು​ ಹಣ ತಗೊಂಡ್ರಾ?
  • ಕಿಚ್ಚನಿಂದ ಬಂತು ಖಡಕ್‌ ಉತ್ತರ
Kiccha Sudeep : ಸುದೀಪ್‌ ಪ್ರಚಾರಕ್ಕಾಗಿ​ ಹಣ ತಗೊಂಡ್ರಾ? ಕಿಚ್ಚನ ಖಡಕ್‌ ಉತ್ತರ ಇದು.. title=
Kichcha Sudeep

ಬೆಂಗಳೂರು : ಚುನಾವಣೆ ಕಾವು ರಾಜ್ಯದಲ್ಲಿ ಹೆಚ್ಚಾಗಿದೆ. ಎಲೆಕ್ಷನ್‌ ಹತ್ತಿರವಾಗ್ತಿದ್ದಂತೆ ರಾಜಕೀಯ ಚಟುವಟಿಕೆಗಳು ರೆಕ್ಕೆ ಪಡೆದಿವೆ. ಹಲವು ದಿನಗಳಿಂದ ಸುದೀಪ್‌ ಪಾಲಿಟಿಕ್ಸ್‌ ಎಂಟ್ರಿ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಹಲವು ಪ್ರಮುಖ ರಾಜಕೀಯ ಮುಖಂಡರ ಜೊತೆ ಒಡನಾಟ ಹೊಂದಿರುವ ಸುದೀಪ್‌ ಯಾವ ಪಾರ್ಟಿಯನ್ನು ಬೆಂಬಲಿಸುತ್ತಾರೆ ಎಂಬ ಕುತೂಹಲ ಮೂಡಿತ್ತು. ಇದೀಗ ಈ ಬಗ್ಗೆ ಕಂಪ್ಲೀಟ್‌ ಸ್ಪಷ್ಟನೆ ದೊರೆತಾಗಿದೆ. ನಟ ಸುದೀಪ್ ಬಿಜೆಪಿ ಪರ ಸ್ಟಾರ್​ ಪ್ರಚಾರಕರಾಗಿದ್ದಾರೆ. 

ಖಾಸಗಿ ಹೋಟೆಲ್‌ನಲ್ಲಿ ಇಂದು ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್,​ ನಾನು ಬಸವರಾಜ ಬೊಮ್ಮಾಯಿ ಮಾಮ ಅವರನ್ನು ಬೆಂಬಲಿಸುತ್ತೇನೆ. ಅವರು ನನ್ನ ಕಷ್ಟದಲ್ಲಿ ಜೊತೆಗಿದ್ದವರು. ಹಾಗಾಗಿ ಇಂದು ಅವರ ಪರ ನಾನು ನಿಲ್ಲುತ್ತೇನೆ. ನನ್ನ ಬೆಂಬಲ ಪಕ್ಷಕ್ಕಲ್ಲ. ನನ್ನ ಕಷ್ಟದಲ್ಲಿ ಜೊತೆಯಾದ ವ್ಯಕ್ತಿಗೆ ಎಂದು ಹೇಳಿದ್ದಾರೆ. ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಸುದೀಪ್ ನನ್ನನ್ನು ಬೆಂಬಲಿಸಿದರೆ ಬಿಜೆಪಿಯನ್ನು ಬೆಂಬಲಿಸಿದಂತೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ : ಐಕಾನ್ ಸ್ಟಾರ್ ಅಲ್ಲು ಅರ್ಜುನ್-ಸುಕುಮಾರ್ ಕಾಂಬೋ ಇಸ್  ಬ್ಯಾಕ್!  ಧೂಳ್ ಎಬ್ಬಿಸಿದ ಪುಷ್ಪ-2 ಗ್ಲಿಂಪ್ಸ್

ಬೊಮ್ಮಾಯಿಗೆ ಸುದೀಪ್‌ ಬೆಂಬಲ ನೀಡಿದ್ದು, ಅವರು ಹೇಳಿದಲ್ಲಿ, ತಿಳಿಸಿದ ವ್ಯಕ್ತಿಯ ಪರ ಪ್ರಚಾರ ಮಾಡುವುದಾಗಿ ಸುದೀಪ್‌ ಹೇಳಿದ್ದಾರೆ. ಆದರೆ ಈ ಮಧ್ಯೆ ಬಿಜೆಪಿ ಪರ ಪ್ರಚಾರಕ್ಕೆ ಸುದೀಪ್‌ ಹಣ ತೆಗೆದುಕೊಂಡ್ರಾ ಎಂಬ ವದಂತಿ ಹಬ್ಬಲಾರಂಭಿಸಿದೆ. ಪ್ರಚಾರಕ್ಕಾಗಿ ಹಣ ತಗೊಂಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಸುದೀಪ್‌ ಖಡಕ್‌ ಉತ್ತರ ನೀಡಿದ್ದಾರೆ. 

 

 

ನಾನು ಹಣ ಮಾಡಲು ಇಲ್ಲಿಗೆ ಬರಬೇಕಾಗಿಲ್ಲ. ಬೊಮ್ಮಾಯಿಯವರಿಗೆ ಮಾತ್ರ ನನ್ನ ಬೆಂಬಲ. ಹಲವಾರು ವಷ್ಟ ಕಷ್ಟಪಟ್ಟು ಕೆಲಸ ಮಾಡಿ, ಪರಿಶ್ರಮದಿಂದ ಇಲ್ಲಿಗೆ ಬಂದಿದ್ದೇನೆ. ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನ ಸಂಪಾದಿಸಿರುವೆ. ನಾನು ರಾಜಕೀಯಕ್ಕೆ ಬರುತ್ತಿಲ್ಲ, ರಾಜಕೀಯದ ವೇದಿಕೆಗೆ ಬಂದಿದ್ಧೇನೆ. ನಾನು ಕೇವಲ ಸಿಎಂ ಬೊಮ್ಮಾಯಿ ಮಾಮನ ಪರ ಇಲ್ಲಿರೋದು ಎಂದು ಸುದೀಪ್ ಹೇಳಿದ್ದಾರೆ. 

ಇದನ್ನೂ ಓದಿ : Kichcha Sudeep : ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ - ನಟ ಸುದೀಪ್‌

ಇದೇ ಪ್ರಶ್ನೆಗೆ ಉತ್ತರಿಸಿರುವ ಸಿಎಂ ಬೊಮ್ಮಾಯಿ, ಮನುಷ್ಯತ್ವ ನೋಡಿ, ಕಮರ್ಷಿಯಲ್ ನೋಡಬೇಡಿ. ಮನುಷ್ಯತ್ವ ಇದೆ, ಸಂಬಂಧಗಳು ಇನ್ನೂ ಉಳಿದುಕೊಂಡಿವೆ. ಈ ವಿಚಾರವನ್ನು ಹೆಚ್ಚು ಕಮರ್ಷಿಯಲ್ ಆಗಿ ಮಾಡಬೇಡಿ ಎಂದು ತಿಳಿಸಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News