Prashanth Neel Birthday: ಸಿನಿಮಾ ಸೆಟ್‌ನಲ್ಲಿ ಪ್ರಶಾಂತ್​ ನೀಲ್​ ಹೀಗಿರ್ತಾರೆ ನೋಡಿ.. ‘ಸಲಾರ್​’ ಚಿತ್ರತಂಡದಿಂದ ಸ್ಪೆಷಲ್‌ ವಿಡಿಯೋ

Prashanth Neel Birthday:  'ಕೆಜಿಎಫ್: ಅಧ್ಯಾಯ 1' ಮತ್ತು 'ಕೆಜಿಎಫ್: ಅಧ್ಯಾಯ 2' ಮೂಲಕ ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ಗೆ ಹುಟ್ಟು ಹಬ್ಬದ ಸಂಭ್ರಮ. ಈ ಸ್ಪೆಷಲ್‌ ದಿನದಂದು ಸಲಾರ್‌ ಸಿನಿತಂಡ ಅವರ ಸ್ಪೆಷಲ್‌ ವಿಡಿಯೋವನ್ನು ಶೇರ್‌ ಮಾಡಿದೆ.   

Written by - Chetana Devarmani | Last Updated : Jun 4, 2023, 04:46 PM IST
  • ಇಂದು ಪ್ರಶಾಂತ್‌ ನೀಲ್‌ಗೆ ಹುಟ್ಟು ಹಬ್ಬದ ಸಂಭ್ರಮ
  • ಸಿನಿಮಾ ಸೆಟ್‌ನಲ್ಲಿ ಪ್ರಶಾಂತ್​ ನೀಲ್​ ಹೀಗಿರ್ತಾರೆ ನೋಡಿ
  • ಸಲಾರ್​ ಚಿತ್ರತಂಡದಿಂದ ಸ್ಪೆಷಲ್‌ ವಿಡಿಯೋ
Prashanth Neel Birthday: ಸಿನಿಮಾ ಸೆಟ್‌ನಲ್ಲಿ ಪ್ರಶಾಂತ್​ ನೀಲ್​ ಹೀಗಿರ್ತಾರೆ ನೋಡಿ.. ‘ಸಲಾರ್​’ ಚಿತ್ರತಂಡದಿಂದ ಸ್ಪೆಷಲ್‌ ವಿಡಿಯೋ  title=

Prashanth Neel Birthday: ಕನ್ನಡದ ಖ್ಯಾತ ಡೈರೆಕ್ಟರ್‌ ಪ್ರಶಾಂತ್ ನೀಲ್ ತಮ್ಮ ಎರಡು ಮೆಗಾ ಹಿಟ್‌ಗಳಾದ 'ಕೆಜಿಎಫ್: ಅಧ್ಯಾಯ 1' ಮತ್ತು 'ಕೆಜಿಎಫ್: ಅಧ್ಯಾಯ 2' ಮೂಲಕ ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರು. ಎರಡೂ ಚಿತ್ರಗಳು ಸಾವಿರದ ಐನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯಿತು. ಕೆಜಿಎಫ್‌ ಮೂಲಕ ಇಡೀ ವಿಶ್ವದಲ್ಲೇ ಪ್ರಶಾಂತ್‌ ನೀಲ್‌ ಅವರ ಹೆಸರು ಖ್ಯಾತಿ ಪಡೆಯಿತು. ಇಂದು ಪ್ರಶಾಂತ್‌ ನೀಲ್‌ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. 

ಇದನ್ನೂ ಓದಿ: ಮಾಧುರಿ ದೀಕ್ಷಿತ್ ಜೊತೆಗಿನ ಸ್ಮರಣೀಯ ಕ್ಷಣವನ್ನು ಹಂಚಿಕೊಂಡ ಪೂಜಾ ಹೆಗ್ಡೆ

ಪ್ರಶಾಂತ್ ನೀಲ್ ಅವರು ತಮ್ಮ ಮುಂದಿನ ಪ್ಯಾನ್ ಇಂಡಿಯನ್ ಚಿತ್ರ 'ಸಲಾರ್' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಎರಡು ವರ್ಷಗಳಿಂದ ಸಿದ್ಧವಾಗುತ್ತಿದೆ. ಪ್ರಶಾಂತ್‌ ನೀಲ್‌ ಇಂದು 43 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ವಿಶೇಷ ದಿನದಂದು ಚಿತ್ರ ತಂಡವು ಸ್ಪೆಷಲ್‌ ಸರ್‌ಪ್ರೈಸ್‌ ನೀಡಿದೆ. ಸೆಟ್‌ನಲ್ಲಿ ಅವರ ಬಿಟಿಎಸ್ ವಿಡಿಯೋವನ್ನು ಬಿಡುಗಡೆ ಮಾಡಿದೆ. ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡೈರೆಕ್ಟರ್‌ ಜೊತೆ ಪ್ರಭಾಸ್ ಮತ್ತು ಇತರ ಚಿತ್ರತಂಡದವರು ಕೇಕ್ ಕತ್ತರಿಸಿ ಸೆಟ್‌ನಲ್ಲೇ ಸಂಭ್ರಮಿಸಿದರು. 

 

 
 
 
 

 
 
 
 
 
 
 
 
 
 
 

A post shared by Salaar (@salaarthesaga)

 

ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಅವರು ಬೃಹತ್ ಪ್ರಮಾಣದಲ್ಲಿ ನಿರ್ಮಿಸಿರುವ 'ಸಲಾರ್' ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತ, ಭುವನ್ ಗೌಡ ಅವರ ಛಾಯಾಗ್ರಹಣ ಮತ್ತು ಉಜ್ವಲ್ ಕುಲಕರ್ಣಿ ಅವರ ಸಂಕಲನ ಇದೆ. ಇವರೆಲ್ಲರೂ 'ಕೆಜಿಎಫ್' ನಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವರ್ಷ ಸೆಪ್ಟೆಂಬರ್ 28 ರಂದು ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸಿನಿಮಾ ಬಳಿಕ ಪ್ರಶಾಂತ್ ನೀಲ್ ಅವರು 'NTR31' ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್‌ಗೆ ಆಕ್ಷನ್‌ ಕಟ್‌ ಹೇಳಲು ಸಜ್ಜಾಗಿದ್ದಾರೆ.  

ಇದನ್ನೂ ಓದಿ: ನಾನು ಒಂದು ದಿನಕ್ಕೆ 4 ಲಕ್ಷ ರೂ. ದುಡಿತಿದ್ದೆ..! ಆ ದಿನಗಳನ್ನು ನೆನೆದ ಶಕೀಲಾ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News