Kiccha Sudeep: ಹೊಸ ಪ್ರಯತ್ನಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ ಕಿಚ್ಚ ಸುದೀಪ್

ಅಖಿಲ್ ಅಕ್ಕಿನೇನಿ ನಟನೆಯ ಬಹುನಿರೀಕ್ಷಿತ ‘ಏಜೆಂಟ್’ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.

Written by - Malathesha M | Edited by - Puttaraj K Alur | Last Updated : Jul 18, 2022, 08:19 PM IST
  • ಟಾಲಿವುಡ್ ಚಿತ್ರರಂಗದ ಭರವಸೆಯ ನಟ ಅಖಿಲ್ ಅಕ್ಕಿನೇನಿ ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್‌
  • ‘ಏಜೆಂಟ್’ ಚಿತ್ರದ ಕನ್ನಡ ಟೀಸರ್ ರಿಲೀಸ್ ಮಾಡಿ ಶುಭ ಹಾರೈಸಿದ ಅಭಿನಯ ಚಕ್ರವರ್ತಿ
  • ಸಿಕ್ಸ್ ಪ್ಯಾಕ್ & ಸ್ಟೈಲೀಶ್ ಲುಕ್‌ನಲ್ಲಿ ಗ್ರ್ಯಾಂಡ್ ಎಂಟ್ರಿ ನೀಡಿರುವ ಅಖಿಲ್ ಅಕ್ಕಿನೇನಿ
Kiccha Sudeep: ಹೊಸ ಪ್ರಯತ್ನಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ ಕಿಚ್ಚ ಸುದೀಪ್ title=
‘ಏಜೆಂಟ್’ ಟೀಸರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್

ಬೆಂಗಳೂರು: ನಟ ಸುದೀಪ್‌ ಅವರು ಹೊಸ ಪ್ರತಿಭೆಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾರೆ. ಯಾವ ಭಾಷೆಯ ಸಿನಿಮಾ ಆಗಿದ್ದರೂ ಕಿಚ್ಚ ಬೆಂಬಲ ನೀಡುತ್ತಾರೆ. ಹೀಗೆ ಟಾಲಿವುಡ್ ಚಿತ್ರರಂಗದ ಭರವಸೆಯ ನಟ ಅಖಿಲ್ ಅಕ್ಕಿನೇನಿ ಚಿತ್ರಕ್ಕೂ ಸಾಥ್‌ ನೀಡಿದ್ದಾರೆ. ಅಖಿಲ್ ಅಕ್ಕಿನೇನಿ ನಟನೆಯ ಬಹುನಿರೀಕ್ಷಿತ ‘ಏಜೆಂಟ್’ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಶಿವ ಕಾರ್ತಿಕೇಯನ್ ಟೀಸರ್ ಝಲಕ್ ರಿಲೀಸ್ ಮಾಡಿ ‘ಏಜೆಂಟ್’ ಟೀಂಗೆ ಸಾಥ್ ನೀಡಿದ್ದಾರೆ.

ಅಷ್ಟಕ್ಕೂ ಟಾಲಿವುಡ್‌ನ ಭರವಸೆಯ ನಾಯಕ ನಟ ಅಖಿಲ್ ಅಕ್ಕಿನೇನಿ ಅವರು ಸಿಕ್ಸ್ ಪ್ಯಾಕ್ ಅವತಾರದಲ್ಲಿ ಸಖತ್ ಸ್ಟೈಲೀಶ್ ಲುಕ್‌ನಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು, ಭರ್ಜರಿ ಆಕ್ಷನ್ ಧಮಾಕಾ ‘ಏಜೆಂಟ್’ ಟೀಸರ್‌ನಲ್ಲಿದೆ. ಮಮ್ಮುಟ್ಟಿ ಅಮೋಘ ಅಭಿನಯ ನೋಡುಗರಿಗೆ ಥ್ರಿಲ್ ಕೊಡುತ್ತದೆ. ಇದು ಮಾಸ್‌ ಆಡಿಯನ್ಸ್‌ ಜೊತೆಗೆ ಕ್ಲಾಸ್‌ ಆಡಿಯನ್ಸ್‌ಗೂ ಇಷ್ಟವಾಗುವಂತಿದೆ.

ಇದನ್ನೂ ಓದಿ: Sushmita Sen : ʻಗೋಲ್ಡ್ ಡಿಗ್ಗರ್ʼ ಎಂದವರಿಗೆ ನಟಿ ಸುಶ್ಮಿತಾ ಸೇನ್‌ ಖಡಕ್‌ ಉತ್ತರ!

ನಟಿ ಸಾಕ್ಷಿ ಸಾಥ್..!

‘ಏಜೆಂಟ್’ ಸಿನಿಮಾ ಸಾಕಷ್ಟು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾ ಹೈ ಬಜೆಟ್‌ನಲ್ಲಿ ಮೂಡಿಬಂದಿದೆ. ಇನ್ನು ಸ್ಪೈ ಥ್ರಿಲ್ಲರ್ ಕಥಾಹಂದರ ಚಿತ್ರಕ್ಕೆ ಈಗಾಗಲೇ ನಿರೀಕ್ಷೆಗಳ ಭಾರ ಹೆಚ್ಚಾಗಿದೆ. ನಟಿ ಸಾಕ್ಷಿ ವೈದ್ಯ ಅವರು ನಟ ಅಖಿಲ್‌ಗೆ ಜೋಡಿಯಾಗಿದ್ದಾರೆ. ‘ಸೈರಾ ನರಸಿಂಹ ರೆಡ್ಡಿ’ ಖ್ಯಾತಿಯ ಸುರೇಂದ್ರ ರೆಡ್ಡಿ ಡೈರೆಕ್ಷನ್‌ ಮಾಡಿದ್ದಾರೆ. ವಕ್ಕಂತಂ ವಂಶಿ ಈ ಸಿನಿಮಾಗೆ ಕಥೆ ಬರೆದಿದ್ದಾರೆ.

‌ಮತ್ತೊಂದ್ಕಡೆ ‘ಏಜೆಂಟ್’ ಸಿನಿಮಾಗೆ ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಹಿಪ್ ಹಾಪ್ ತಮಿಝಾ ಸಂಗೀತ ನೀಡಿದ್ದಾರೆ. ರಸೂಲ್ ಎಲ್ಲೂರು ಕ್ಯಾಮೆರಾ  ವರ್ಕ್‌ ಕಮಾಲ್‌ ಮಾಡಿದೆ. ರಾಷ್ಟ್ರಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ ಇದ್ದರೆ, ಅವಿನಾಶ್ ಕೊಲ್ಲಾ ಕಲಾ ನಿರ್ದೇಶನ ಚಿತ್ರಕ್ಕಿದ್ದು, ಅಜಯ್ ಸುಂಕರ, ಪತಿ ದೀಪಾ ರೆಡ್ಡಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ‘ಏಜೆಂಟ್’ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿರುವ ಟೀಂ ಟೀಸರ್ ಮೂಲಕ ಹವಾ ಎಬ್ಬಿಸಿದೆ. ಜೊತೆಗೆ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಇದನ್ನೂ ಓದಿ: ಎನ್‌ಎಫ್‌ಟಿಯಿಂದ ಕಿಚ್ಚನ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್: ಕಿಚ್ಚ ವರ್ಸ್ ಲಾಂಚ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News