T20 ವಿಶ್ವಕಪ್‌ಗೆ ಮೊದಲೇ ಕೆ.ಎಲ್‌.ರಾಹುಲ್-ಅಥಿಯಾ ಶೆಟ್ಟಿ ವಿವಾಹ.. ಮದುವೆ ಡೇಟ್‌ ಫಿಕ್ಸ್‌!

KL Rahul Athiya Shetty Marriage: ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಶೀಘ್ರದಲ್ಲೇ ತಮ್ಮ ಗೆಳತಿ ಅಥಿಯಾ ಶೆಟ್ಟಿ ಅವರನ್ನು ವಿವಾಹವಾಗಲಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಈ ಜೋಡಿ ಮದುವೆಯಾಗಲಿದ್ದಾರೆ.  

Written by - Chetana Devarmani | Last Updated : Jul 13, 2022, 11:12 AM IST
  • ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್
  • ಕೆ.ಎಲ್‌.ರಾಹುಲ್-ಅಥಿಯಾ ಶೆಟ್ಟಿ ವಿವಾಹ
  • ಕೆ.ಎಲ್‌.ರಾಹುಲ್-ಅಥಿಯಾ ಶೆಟ್ಟಿ ಮದುವೆ ಡೇಟ್‌ ಫಿಕ್ಸ್‌!
T20 ವಿಶ್ವಕಪ್‌ಗೆ ಮೊದಲೇ ಕೆ.ಎಲ್‌.ರಾಹುಲ್-ಅಥಿಯಾ ಶೆಟ್ಟಿ ವಿವಾಹ.. ಮದುವೆ ಡೇಟ್‌ ಫಿಕ್ಸ್‌! title=
ಕೆ.ಎಲ್‌.ರಾಹುಲ್-ಅಥಿಯಾ ಶೆಟ್ಟಿ

KL Rahul Athiya Shetty Marriage: ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಶೀಘ್ರದಲ್ಲೇ ತಮ್ಮ ಗೆಳತಿ ಅಥಿಯಾ ಶೆಟ್ಟಿ ಅವರನ್ನು ವಿವಾಹವಾಗಲಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಈ ಜೋಡಿ ಮದುವೆಯಾಗಲಿದ್ದಾರೆ. ಇತ್ತೀಚೆಗಷ್ಟೇ ಕೆ.ಎಲ್ ರಾಹುಲ್ ಕುಟುಂಬ ಈ ಸಂಬಂಧ ಮುಂಬೈಗೆ ಬಂದಿದ್ದು, ಅಥಿಯಾ ಶೆಟ್ಟಿ ಕುಟುಂಬವನ್ನು ಭೇಟಿ ಮಾಡಿದ್ದರು. ಇಬ್ಬರೂ ಮದುವೆಯ ನಂತರ ವಾಸಿಸಲು ನಿವೇಶನವನ್ನು ಸಹ ರೆಡಿ ಮಾಡಿಕೊಂಡಿದ್ದಾರೆ ಮತ್ತು ಮುಂಬೈನಲ್ಲಿಯೇ ಮನೆಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. 

ವರದಿಯ ಪ್ರಕಾರ, ತಮ್ಮ ಹೊಸ ಮನೆಯ ತಯಾರಿ ಹೇಗೆ ನಡೆಯುತ್ತಿದೆ ಎಂಬುದನ್ನು ಕಾಲಕಾಲಕ್ಕೆ ಅಥಿಯಾ ಸ್ವತಃ ತೆರಳಿ ಪರಿಶೀಲಿಸುತ್ತಾರೆ. ಇತ್ತೀಚೆಗೆ ಅಥಿಯಾ ಮತ್ತು ರಾಹುಲ್ ತಮ್ಮ ಕುಟುಂಬದೊಂದಿಗೆ ಈ ಮನೆಗೆ ಭೇಟಿ ನೀಡಿದ್ದರು. 

ಇದನ್ನೂ ಓದಿ: India vs England : ಬುಮ್ರಾ ಎಸೆತಕ್ಕೆ ತತ್ತರಿಸಿದ ಆಂಗ್ಲರು, ಟೀಂ ಇಂಡಿಯಾಗೆ ಭರ್ಜರಿ ಗೆಲವು!

ಇಬ್ಬರ ಮದುವೆ ಸಮಾರಂಭ ಕೂಡ ಮುಂಬೈನಲ್ಲೇ ನಡೆಯಲಿದ್ದು, ಅಥಿಯಾ ಕೂಡ ತಯಾರಿ ನಡೆಸುತ್ತಿದ್ದಾರೆ. ಈ ದಿನಗಳಲ್ಲಿ ಭಾರತ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿದೆ. ಆದರೆ ಕೆ.ಎಲ್ ರಾಹುಲ್ ಈ ಪ್ರವಾಸದ ಭಾಗವಾಗಿಲ್ಲ. ಏಕೆಂದರೆ ಅವರ ತೊಡೆಸಂದು ಸ್ನಾಯುವಿನ ಒತ್ತಡದಿಂದಾಗಿ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ. 

ಈ ಗಾಯಕ್ಕೆ ಚಿಕಿತ್ಸೆ ಪಡೆದು ಇತ್ತೀಚೆಗೆ ಜರ್ಮನಿಯಿಂದ ವಾಪಸಾಗಿದ್ದಾರೆ. ಜೂನ್ ಮಧ್ಯಭಾಗದಲ್ಲಿ ಜರ್ಮನಿಗೆ ತೆರಳಿದ್ದ ರಾಹುಲ್, ಜೊತೆಗೆ ಅವರನ್ನು ನೋಡಿಕೊಳ್ಳಲು ಅಥಿಯಾ ಸಹ  ತೆರಳಿದ್ದರು. ಇಬ್ಬರ ಮದುವೆಯ ದಿನಾಂಕ ನಿಗದಿಯಾಗಿದೆ. ಇನ್ನೇನು 3 ತಿಂಗಳಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬುದು ಖಚಿತವಾಗಿದೆ. ಆದರೆ ಈ ಬಗ್ಗೆ ಇಬ್ಬರೂ ಸಹ ಮೌನ ಮುರಿದಿಲ್ಲ.

ಈ ಸಂಬಂಧ ಸಂತಸ ವ್ಯಕ್ತಪಡಿಸಿರುವ ಬಾಲಿವುಡ್ ನ ಹಿರಿಯ ನಟ ಹಾಗೂ ಅಥಿಯಾ ತಂದೆ ಸುನೀಲ್ ಶೆಟ್ಟಿ, ಈಗ ಕಾಲ ಬದಲಾಗಿದ್ದು, ತಮಗೆ ಏನು ಬೇಕು ಎಂಬುದು ಅವರ ಆಯ್ಕೆಯಾಗಿದೆ ಎಂದಿದ್ದಾರೆ. ಅವಳು ನನ್ನ ಮಗಳು ಮತ್ತು ಅವಳು ಯಾವುದಾದರೂ ಒಂದು ಹಂತದಲ್ಲಿ ಮದುವೆಯಾಗಬೇಕು. ನನ್ನ ಮಗನಿಗೂ ಮದುವೆ ಮಾಡಿಸಬೇಕು. ಎಷ್ಟು ಬೇಗವೊ ಅಷ್ಟು ಒಳ್ಳೆಯದು ಎಂದಿದ್ದರು ಸುನೀಲ್‌ ಶೆಟ್ಟಿ. 

ಇದನ್ನೂ ಓದಿ: Ind vs Eng : 3ನೇ ಪಂದ್ಯದಲ್ಲಿ ಈ ಆಟಗಾರನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ ರೋಹಿತ್!

ಕೆ.ಎಲ್ ರಾಹುಲ್ ವಿಚಾರವಾಗಿ, ನಾನು ಆ ವ್ಯಕ್ತಿಯನ್ನು ಇಷ್ಟಪಡುತ್ತೇನೆ. ಮಗಳು ಮತ್ತು ಮಗ ಇಬ್ಬರೂ ಜವಾಬ್ದಾರರು ಮತ್ತು ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನನ್ನ ಆಶೀರ್ವಾದ ಸದಾ ಅವರ ಮೇಲಿದೆ ಎಂದಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News