ʼಕೌಸಲ್ಯಾ ಸುಪ್ರಜಾ ರಾಮಾʼ ಇಂದಿನಿಂದ(ಸೆ.15) ಅಮೆಜಾನ್‌ ಪ್ರೈಮ್‌ನಲ್ಲಿ

OTT : ಇದೇ ಜುಲೈ 28 ರಂದು ಥಿಯೇಟರ್‌ಗಳಲ್ಲಿ ತೆರೆಕಂಡ ʼಕೌಸಲ್ಯಾ ಸುಪ್ರಜಾ ರಾಮಾʼ ಇದೀಗ ಸಿನಿಮಾವನ್ನು ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಇಂದು(ಸೆ.15) ರಂದು ರಿಲೀಸ್‌ ಆಗಿದೆ.

Written by - Zee Kannada News Desk | Last Updated : Sep 15, 2023, 04:47 PM IST
  • ʼಕೌಸಲ್ಯಾ ಸುಪ್ರಜಾ ರಾಮಾʼ ಸಿನಿಮಾ ಇದೀಗ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್‌ ಆಗಿದೆ.
  • ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ನಟನೆಯ ʼಕೌಸಲ್ಯ ಸುಪ್ರಜಾ ರಾಮʼ.
  • ಡಾರ್ಲಿಂಗ್‌ ಕೃಷ್ಣ ಅವರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್‌ ಆಗುವುದರ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ʼಕೌಸಲ್ಯಾ ಸುಪ್ರಜಾ ರಾಮಾʼ ಇಂದಿನಿಂದ(ಸೆ.15) ಅಮೆಜಾನ್‌ ಪ್ರೈಮ್‌ನಲ್ಲಿ title=

Kousalya Supraja Rama : ಮೊಗ್ಗಿನ ಮನಸ್ಸು ಖ್ಯಾತಿಯ ಶಶಾಂಕ್‌ ನಿರ್ದೇಶನದ ʼಕೌಸಲ್ಯಾ ಸುಪ್ರಜಾ ರಾಮʼ ಇದೇ ಜುಲೈ 28ರಂದು ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಿದ್ದು, ಯಶಸ್ಸನ್ನು ಕಂಡಿದೆ ಮತ್ತು ಇದೀಗ ಸಿನಿಮಾವನ್ನು ಅಮೆಜಾನ್‌ ಪ್ರೈಮ್‌ನಲ್ಲಿ ಇಂದು(ಸೆ.15) ರಿಲೀಸ್‌ ಮಾಡಲಾಗಿದೆ.

ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ನಟನೆಯ ʼಕೌಸಲ್ಯ ಸುಪ್ರಜಾ ರಾಮʼ ಕೌರವ ಪ್ರೊಡಕ್ಷನ್ ಹೌಸ್ ಮತ್ತು ಶಶಾಂಕ್ ಸಿನಿಮಾಸ್ ಜಂಟಿಯಾಗಿ ಕೌಸಲ್ಯಾ ಸುಪ್ರಜಾ ರಾಮ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸುಗ್ನನ್ ಛಾಯಾಗ್ರಹಣ ಮಾಡಲಾಗಿದೆ. 

ಇದನ್ನು ಓದಿ - ಅಮೀರ್ ಖಾನ್ ಮಗ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ... ಶುರುವಾಯ್ತು ಹೊಸ ಗಾಸಿಪ್‌!

ಜುಲೈ 28ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಚಿತ್ರವು ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದ್ದು, ಕಮರ್ಷಿಯಲ್‌ ಆಗಿಯೂ ಯಶಸ್ಸನ್ನು ಕಂಡಿದೆ. ಈ ಚಿತ್ರದ 'ಶಿವಾನಿ..', 'ಇರು ಇರು..' ಹಾಡುಗಳು ಇಷ್ಟವಾಗುವುದಲ್ಲದೇ ಒಟ್ಟಾರೆ 'ಕೌಸಲ್ಯಾ ಸುಪ್ರಜಾ ರಾಮ' ಚಿತ್ರದ ಸಾರಾಂಶ ಮತ್ತು ಕೆಲ ಸಂಭಾಷಣೆಗಳು ಬಹುತೇಕರ ಮನಸ್ಸಿಗೆ ನಾಟುತ್ತದೆ. ಸಿನಿಮಾದಲ್ಲಿ ಎಲ್ಲೂ ಬೋರ್ ಆಗದಂತೆ ನೋಡಿಸಿಕೊಂಡು ಹೋಗುವುದಕ್ಕೆ ನಟ ನಾಗಭೂಷಣ್‌ ಅವರ ಕೊಡುಗೆ ಜಾಸ್ತಿ ಇದೆ. ಆಗಾಗ ಕಾಮಿಡಿ ಕಿಕ್ ಕೊಡುವ ಪಾತ್ರದಲ್ಲಿ ನಾಗಭೂಷಣ ಅವರ ಪಾತ್ರ ಜನರಿಗೆ ಇಷ್ಟವಾಗುತ್ತದೆ.

ಈಗ ಓಟಿಟಿ ಪ್ಲಾಟ್‌ಫಾರ್ಮ್‌ ಮೂಲಕ ಜನರನ್ನು ನಗಿಸಲು ಹೊರಟಿದ್ದು, ಇಂದಿನಿಂದ(ಸೆ.15) ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಶುರುವಾಗಿದೆ. ಡಾರ್ಲಿಂಗ್‌ ಕೃಷ್ಣ ಅವರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್‌ ಆಗುವುದರ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News