20 ವರ್ಷಗಳ ಹಿಂದೆ ಮಿಸ್ ಯುನಿವರ್ಸ್ ಕಿರೀಟ ಧರಿಸಿದ್ದ ನಮ್ಮ ಬೆಂಗಳೂರಿನ ಹುಡುಗಿ ಲಾರಾ ದತ್ತ!

ಲಾರಾ ದತ್ತಾ  ಬುಧವಾರ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ತನ್ನ ಮಿಸ್ ಯೂನಿವರ್ಸ್ ದಿನಗಳ ಸ್ಮರಣೆಯನ್ನು ಹಂಚಿಕೊಂಡಿದ್ದಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಫ್ಯಾನ್ ಕ್ಲಬ್ ಹಂಚಿಕೊಂಡ ಪಿಕ್ಚರ್ ಕೊಲಾಜ್ ಅನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಚಿತ್ರಗಳ ಹಿಂದಿನ ಕಥೆಯನ್ನು ಬಹಿರಂಗಪಡಿಸಿದ್ದಾರೆ. 

Last Updated : Oct 28, 2020, 03:52 PM IST
20 ವರ್ಷಗಳ ಹಿಂದೆ ಮಿಸ್ ಯುನಿವರ್ಸ್ ಕಿರೀಟ ಧರಿಸಿದ್ದ ನಮ್ಮ ಬೆಂಗಳೂರಿನ ಹುಡುಗಿ ಲಾರಾ ದತ್ತ!

ನವದೆಹಲಿ: ಲಾರಾ ದತ್ತಾ  ಬುಧವಾರ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ತನ್ನ ಮಿಸ್ ಯೂನಿವರ್ಸ್ ದಿನಗಳ ಸ್ಮರಣೆಯನ್ನು ಹಂಚಿಕೊಂಡಿದ್ದಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಫ್ಯಾನ್ ಕ್ಲಬ್ ಹಂಚಿಕೊಂಡ ಪಿಕ್ಚರ್ ಕೊಲಾಜ್ ಅನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಚಿತ್ರಗಳ ಹಿಂದಿನ ಕಥೆಯನ್ನು ಬಹಿರಂಗಪಡಿಸಿದ್ದಾರೆ. 

2000 ರಲ್ಲಿ ಮಿಸ್ ಯೂನಿವರ್ಸ್ ಕಿರೀಟವನ್ನು ಪಡೆದ ನಂತರ ಆಕೆಗೆ ಭರ್ಜರಿ ಸ್ವಾಗತ ದೊರೆತಾಗಿನ ಪೋಟೋಗಳೆಂದು ನಟಿ ಹೇಳಿಕೊಂಡಿದ್ದಾರೆ'"ವರ್ಷ 2000. ನನ್ನ ಸ್ವಂತ ಊರಾದ ಬೆಂಗಳೂರಿನಲ್ಲಿ ನನಗೆ ಸಿಕ್ಕಂತ ಅತಿ ದೊಡ್ಡ ಸ್ವಾಗತ ಎಂದು ಬರೆದುಕೊಂಡಿದ್ದಾರೆ.ನಂತರ ತನ್ನ ಪೋಸ್ಟ್ನಲ್ಲಿ, ಲಾರಾ ಪ್ರವಾಸದ ಸಮಯದಲ್ಲಿ ತನ್ನೊಂದಿಗೆ ಬಂದ ಮಿಸ್ ಯೂನಿವರ್ಸ್ ಅಧಿಕಾರಿಗಳು ತನಗೆ ಸಿಕ್ಕಿರುವ ಸ್ವಾಗತವನ್ನು ಖಂಡು ಅಚ್ಚರಿ ವ್ಯಕ್ತಪಡಿಸಿದರು ಎಂದು ಲಾರಾ ಬರೆದು ಕೊಂಡಿದ್ದಾರೆ.

 
 
 
 

 
 
 
 
 
 
 
 
 

Year 2000. My home town of Bengaluru came out in full force to give me the biggest, grandest welcome I have ever experienced!! The Miss Universe officials who had accompanied me on this trip were overwhelmed!! They had never experienced such large numbers of people!! I still meet adults who were kids then, who had been a part of this parade, who say it was an unforgettable experience! Was for me too!! 🥰🥰🥰. @missuniverse #20years #bengaluru #memories #i❤️myindia

A post shared by Lara Dutta Bhupathi (@larabhupathi) on

ಈ ಪ್ರವಾಸದಲ್ಲಿ ನನ್ನೊಂದಿಗೆ ಬಂದ ಮಿಸ್ ಯೂನಿವರ್ಸ್ ಅಧಿಕಾರಿಗಳು ಆಶ್ಚರ್ಯಚಕಿತರಾಗಿದ್ದರು! ಅವರು ಇಷ್ಟು ದೊಡ್ಡ ಸಂಖ್ಯೆಯಲ್ಲಿ  ಜನರನ್ನು ನೋಡಿರಲಿಲ್ಲ! ಆಗ ಈ ಮೆರವಣಿಗೆಯಲ್ಲಿ ಭಾಗವಾಗಿದ್ದವರನ್ನು ನಾನು ಭೇಟಿಯಾಗಿದ್ದೇನೆ ಅವರು ಯಾವಾಗಲೂ ಇದೊಂದು ಅದ್ಬುತ ಅನುಭವ ಎಂದು ಹೇಳುತ್ತಾರೆ, ಇದು ನನಗೂ ಕೂಡ ಹಾಗೆ ! ಎಂದು ಲಾರಾದತ್ತ 'ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಅಂದಾಜ್, ಭಾಗಮ್ ಭಾಗ್, ಕಾಲ್, ಪಾರ್ಟ್ನರ್ , ಚಲೋ ಡಿಲ್ಲಿ ಮತ್ತು ಡಾನ್ ಸರಣಿಯ ಚಿತ್ರಗಳಲ್ಲಿನ ಪಾತ್ರಗಳಿಗೆ ಲಾರಾ ದತ್ತಾ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅವರು ಕೊನೆಯ ಬಾರಿಗೆ ವೆಬ್-ಸರಣಿ 'ಹಂಡ್ರೆಡ್'ನಲ್ಲಿ ಕಾಣಿಸಿಕೊಂಡಿದ್ದರು. 

More Stories

Trending News