ನಟ, ನಿರೂಪಕ ಮಾಸ್ಟರ್ ಆನಂದ್ ಗೆ ಲಕ್ಷ-ಲಕ್ಷ ಪಂಗನಾಮ

Master Anand : ಮಾಸ್ಟರ್ ಆನಂದ್ ಕನ್ನಡ ಸಿನಿರಂಗದ ಖ್ಯಾತ ನಟ ಮತ್ತು ನಿರೂಪಕ. ಇಂತಹ ನಟನಿಗೆ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ಪಂಗನಾಮ ಹಾಕಿದೆ. ಸದ್ಯ ಅದೇ ರಿಯಲ್ ಎಸ್ಟೇಟ್ ಸಂಸ್ಥೆ ವಿರುದ್ಧ ಆನಂದ್ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  

Written by - VISHWANATH HARIHARA | Edited by - Savita M B | Last Updated : Jun 26, 2023, 03:39 PM IST
  • ಆಕರ್ಷಕ ಸಾಲ ಸೌಲಭ್ಯ ಕೊಡೋದಾಗಿ ಸಂಸ್ಥೆ ನಿರ್ದೇಶಕ ಸುಧೀರ್ ನಂಬಿಸಿದ್ದ
  • ಇವರ ಬಣ್ಣದ ಮಾತು ನಂಬಿದ ಮಾಸ್ಟರ್ ಆನಂದ್ ಹಂತ ಹಂತವಾಗಿ‌ ಹಣ ನೀಡಿದ್ದಾರೆ‌.
  • ನಂತರ ವಿಚಾರಿಸಿದಾಗ ಪೂರಕವಾದ ಸ್ಪಂದನೆ‌ ಕೂಡ ಸಿಕ್ಕಿರಲಿಲ್ಲ.
ನಟ, ನಿರೂಪಕ ಮಾಸ್ಟರ್ ಆನಂದ್ ಗೆ ಲಕ್ಷ-ಲಕ್ಷ ಪಂಗನಾಮ title=

ಬೆಂಗಳೂರು: ಮಾಸ್ಟರ್ ಆನಂದ್ ಕೊಮ್ಮಘಟ್ಟ ರಾಮಸಂದ್ರಕ್ಕೆ 2020 ರ ಜುಲೈ ನಲ್ಲಿ ಶೂಟಿಂಗ್ ಗೆ ತೆರಳಿದ್ರು. ಅಲ್ಲಿನ ವಾತಾವರಣ ನೋಡಿ ಇಲ್ಲೊಂದು ನಿವೇಶನ ಖರೀದಿ ಮಾಡಬೇಕಲ್ಲ ಅನ್ನೋ ಆಲೋಚನೆ ಬಂದಿತ್ತು. ಈ ಸಂಬಂಧ ಮಲ್ಟಿ ಲೀಪ್ ವೆಂಚರ್ಸ್ ಮಾರ್ಕೆಂಟಿಂಗ್ ಕಚೇರಿಯಲ್ಲಿದ್ದ ಮನಿಕಾ ಬಳಿ ವಿಚಾರಿಸಿದ್ದಾರೆ. ಆಕೆ ಮಾಲೀಕರಾದ ಸುಧೀರ್ ನ ಪರಿಚಯ ಮಾಡಿದ್ದಾಳೆ. 

ಚಂದ್ರಾ ಲೇಔಟ್ ನ ಕಚೇರಿಯಲ್ಲಿ 2000 ಅಡಿ ವಿಸ್ತೀರ್ಣದ ನಿವೇಶನಕ್ಕೆ 70 ಲಕ್ಷಕ್ಕೆ ಡೀಲ್ ಕುದುರಿದೆ. ಅಲ್ಲದೇ ಆಕರ್ಷಕ ಸಾಲ ಸೌಲಭ್ಯ ಕೊಡೋದಾಗಿ ಸಂಸ್ಥೆ ನಿರ್ದೇಶಕ ಸುಧೀರ್ ನಂಬಿಸಿದ್ದ. ಇವರ ಬಣ್ಣದ ಮಾತು ನಂಬಿದ ಮಾಸ್ಟರ್ ಆನಂದ್ ಹಂತ ಹಂತವಾಗಿ‌ 2021 ರ ವರೆಗೆ 18.50 ಲಕ್ಷ ಹಣ ನೀಡಿದ್ದಾರೆ‌. ನಂತರ ವಿಚಾರಿಸಿದಾಗ ಪೂರಕವಾದ ಸ್ಪಂದನೆ‌ ಕೂಡ ಸಿಕ್ಕಿರಲಿಲ್ಲ.

ಇದನ್ನೂ ಓದಿ-ಶೀಲ ಶಂಕಿಸಿ ಹೆಂಡತಿಯ ಗುಪ್ತಾಂಗಕ್ಕೆ ಇರಿದ ಪಾಪಿ ಗಂಡ..!

ಅಲ್ಲದೇ ಅದೇ ನಿವೇಶನವನ್ನು ಮಾಸ್ಟರ್ ಆನಂದ್ ಗಮನಕ್ಕೆ ಬಾರದೆ ಅಧಿಕ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡಿರೋದು ಗೊತ್ತಾಗಿದೆ.ಹಾಗಾಗಿ ಮಾಸ್ಟರ್ ಆನಂದ್ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಿದ್ದು ತನಿಖೆ ಮುಂದುವರೆದಿದೆ. ಮತ್ತೊಂದು ಕಡೆ ಚಂದ್ರಾ ಲೇಔಟ್ ಎಸ್ ಜೆ ಎಲಿಗೆನ್ಸ್ ಕಟ್ಟಡದಲ್ಲಿದ್ದ ಕಚೇರಿಯನ್ನು ಮಲ್ಟಿಲೀಪ್ ವೆಂಚರ್ಸ್ ಸಂಸ್ಥೆ ಖಾಲಿ ಮಾಡಿದೆ.

ಮತ್ತೊಂದು ಕಡೆ ನಿರ್ಮಾಪಕ ಟಿ.ಚಂದ್ರಶೇಖರ್ ಎಂಬುವವರ ಕೌಟುಂಬಿಕ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇವರು ಹೀಗೊಂದು ದಿನ ಮತ್ತು ಅಪ್ಪುಗೆ ಅನ್ನೋ ಸಿನಿಮಾದ ನಿರ್ಮಾಪಕ. ಪತ್ನಿ  ನಮಿತಾ ಮೇಲೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರೆ, ಪತ್ನಿ ಕೂಡ ಚಂದ್ರಶೇಖರ್ ಮೇಲೆ ಹಲ್ಲೆ ಆರೋಪದ ದೂರು ನೀಡಿದ್ದಾಳೆ. ಟಿ.ಚಂದ್ರಶೇಖರ್ ದೂರಿನಲ್ಲಿ ಪತ್ನಿ ಡ್ರಗ್ ವ್ಯಸನಿಯಾಗಿದ್ದಾಳೆ. 

ಇದನ್ನೂ ಓದಿ-ಕೊಡಗಿನ ಜನರ ನಿದ್ದೆಗೆಡಿಸಿದ್ದ ಪುಂಡಾನೆ ಸೆರೆ

ಡ್ರಗ್ಸ್ ಗಾಗಿ ಡ್ರಗ್ ಪೆಡ್ಲರ್ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾಳೆ.ಮನೆಯಲ್ಲಿ ಪತ್ನಿ ಹಾಗೂ ಪ್ರಿಯತಮ ಡ್ರಗ್ ಪೆಡ್ಲರ್ ದೈಹಿಕ ಸಂಪರ್ಕದಲ್ಲಿದ್ದ ವೇಳೆ ನೋಡಿ ಪ್ರಶ್ನಿಸಿದಾಗ ಇಬ್ಬರೂ ಸೇರಿ ಹಲ್ಲೆ ನಡೆಸಿದ್ದಾಗಿ ದೂರು ದಾಖಲಿಸಿದ್ದಾರೆ‌. ಇತ್ತ ಪತಿಯ ಮೇಲೆ ಮರು ದೂರು ನೀಡಿರುವ ಪತ್ನಿ, ಮನೆಯಲ್ಲಿ ಡ್ರಗ್ ಇಟ್ಟು ಅರೆಸ್ಟ್ ಮಾಡಿಸ್ತೀನಿ ಎಂದು ಬೆದರಿಕೆ ಹಾಕಿದ್ದಾನೆ. 

ಅಷ್ಟಲ್ಲದೆ ಸ್ನೇಹಿತ ಲಕ್ಷ್ಮೀಶ್ ಪ್ರಭುಗೆ ಥಳಿಸಿದ್ದಾನೆ. ಚಾಕುವಿನಿಂದ ತನ್ನ ಮೇಲೆ ಕೂಡ ಹಲ್ಲೆ ನಡೆಸಿರೋದಾಗಿ ಆರೋಪಿಸಿದ್ದಾಳೆ. ಸದ್ಯ ಈ ಸಂಬಂಧ ಪರಸ್ಪರ  ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ತನಿಖೆ ಮುಂದುವರೆದಿದೆ.ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ಹೊರ ಬೀಳಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News