ಪ್ರಿಯಕರನ ಜೊತೆ ಸಪ್ತಪದಿ ತುಳಿದ 'ಮಾಸ್ತರ್ ಮಗಳು'....!

Ginrama Actress : ಕನ್ನಡದ ಜನಪ್ರಿಯ ಕಿರುತೆರೆ ನಟಿ ನಯನಾ ನಾಗರಾಜ್ ತಮ್ಮ ಪ್ರಿಯಕರ  ಸುಹಾಸ್ ಶಿವಣ್ಣಅವರನ್ನು ಭಾನುವಾರ ಜೂನ್ ೧೬ರಂದು ವಿವಾಹವಾದರು.   

Written by - Zee Kannada News Desk | Last Updated : Jun 17, 2024, 05:02 PM IST
  • ಕನ್ನಡ ಕಿರುತೆರೆಯಲ್ಲಿ ಪರಿಚಿತರಾಗಿರುವ ನಯನಾ ನಾಗರಾಜ್ 'ಗಿಣಿರಾಮ' ಧಾರವಾಹಿಯ ಮೂಲಕ ಎಲ್ಲರ ಮನೆ ಮಾತಾಗಿದ್ದರು.
  • ಇದೀಗ ಇಬ್ಬರು ನಯನ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ ನಿನ್ನೆಯಷ್ಟೇ ಶಾಸ್ತ್ರೋಕ್ರ ವಾಗಿ ವಿವಾಹವಾದರು.
  • ಇದೀಗ ತಮ್ಮ ಪ್ರಿಯಕರನೊಟ್ಟಿಗೆ ಶಾಸ್ತ್ರೋಕ್ರ ವಾಗಿ ಮದುವೆಯಾಗಿರುವ ಫೋಟೋ ವನ್ನು ಹಂಚಿಕೊಂಡಿದ್ದಾರೆ.
ಪ್ರಿಯಕರನ ಜೊತೆ ಸಪ್ತಪದಿ ತುಳಿದ 'ಮಾಸ್ತರ್ ಮಗಳು'....! title=

Nayana Nagraj weds Suhas Shivanna :  ಕನ್ನಡದ ಜನಪ್ರಿಯ ಕಿರುತೆರೆ ನಟಿ ನಯನಾ ನಾಗರಾಜ್ ತಮ್ಮ ಪ್ರಿಯಕರ  ಸುಹಾಸ್ ಶಿವಣ್ಣಅವರನ್ನು ಭಾನುವಾರ ಜೂನ್ ೧೬ರಂದು ವಿವಾಹವಾದರು. 

ಹತ್ತು ವರ್ಷಗಳಿಂದ ಪ್ರೀತಿಯಲ್ಲಿದ್ದ ಇಬ್ಬರು  ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ನಿನ್ನೆಯಷ್ಟೇ ಕಾಲಿಟ್ಟರು. ಕನ್ನಡ ಕಿರುತೆರೆಯಲ್ಲಿ ಪರಿಚಿತರಾಗಿರುವ  ನಯನಾ ನಾಗರಾಜ್ ಇತ್ತೀಚಿಗಷ್ಟೇ ತಮ್ಮ ಮನೆಯಲ್ಲಿಯೇ ಸುಹಾಸ್ ಶಿವಣ್ಣ ಅವರೊಟ್ಟಿಗೆ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದು ಇಡೀ ಕನ್ನಡ ಜನತೆಗೆ ತಮ್ಮ ಪ್ರಿಯಕರ ಯಾರು ಎಂದು ತೋರಿಸಿಕೊಟ್ಟಿದ್ದರು. 

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರಿಯಕರ ಯಾರು, ಎಂಬುವುದನ್ನು ತಿಳಿಸಿ ಹತ್ತು ವರ್ಷಗಳ ಪ್ರೀತಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದರ ಕುರಿತು ತಮ್ಮ ಪೋಸ್ಟನಲ್ಲಿ ಬರೆದುಕೊಂಡಿದ್ದರು. ಇದೀಗ ತಮ್ಮ ಪ್ರಿಯಕರನೊಟ್ಟಿಗೆ ಶಾಸ್ತ್ರೋಕ್ರ ವಾಗಿ ಮದುವೆಯಾಗಿರುವ ಫೋಟೋ ವನ್ನು ಹಂಚಿಕೊಂಡಿದ್ದಾರೆ. 

ಇದನ್ನು ಓದಿ : 

 ಕನ್ನಡ ಕಿರುತೆರೆಯಲ್ಲಿ ಪರಿಚಿತರಾಗಿರುವ  ನಯನಾ ನಾಗರಾಜ್ 'ಗಿಣಿರಾಮ' ಧಾರವಾಹಿಯ ಮೂಲಕ ಎಲ್ಲರ ಮನೆ ಮಾತಾಗಿದ್ದರು. ಅವರ ಪ್ರಮುಖ ಪಾತ್ರ ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು.  ಕನ್ನಡ ಮನರಂಜನಾ ಮಾಧ್ಯಮದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ ಸುಹಾಸ್ ಶಿವಣ್ಣ ರಂಗಭೂಮಿಯಲ್ಲಿ ಗೌರವಾನ್ವಿತ ವ್ಯಕ್ತಿ. ಕರಕುಶಲತೆಗೆ ಅವರ ಸಮರ್ಪಣೆ ಮತ್ತು ವೇದಿಕೆಯ ಪ್ರದರ್ಶನಕ್ಕೆ ನೀಡಿದ ಗೌರವಗಳು ಮೆಚ್ಚುಗೆಗೆ ಪಾತ್ರವಾಗಿವೆ. 

ಇದೀಗ ಇಬ್ಬರು ನಯನ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ ನಿನ್ನೆಯಷ್ಟೇ ಶಾಸ್ತ್ರೋಕ್ರ ವಾಗಿ ವಿವಾಹವಾದರು.ಈ ಮೂಲಕ ತಮ್ಮ ದಾಂಪತ್ಯ ಜೀವನಕ್ಕೆ ಇಬ್ಬರು ಕಾಲಿಟ್ಟರು. ಚಿತ್ರರಂಗದ ಗಣ್ಯರು, ನಟ ನಟಿಯರು, ಕುಟುಂಬದವರು ಹಾರೈಸಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News