Chiranjeevi Sarja : ಚಿರಂಜೀವಿ ಅವರ ಸಾವು ಆಕಸ್ಮಿಕ, ಇದರಿಂದ ಸರ್ಜಾ ಕುಟುಂಬಕ್ಕೆ ಮತ್ತು ಅಭಿಮಾನಿಗಳ ಎದೆಗೆ ಸಿಡಿಲು ಬಡೆದಂತೆ ಆಗಿದ್ದಂತೂ ಸುಳ್ಳಲ್ಲ. ಅಂದಿನಿಂದಲೂ ಮೇಘನಾ ಅವರ ನೆನಪಿನಲ್ಲೇ ಜೀವನ ಕಳೆಯುತ್ತಿದ್ದಾರೆ. ನೋವುಗಳನ್ನು ಮರೆತು ಹೊಸ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.
ಇಂದು ಚಿರಂಜೀವಿ ಸರ್ಜಾ ಅವರ ಮೂರನೇ ಪುಣ್ಯತಿಥಿ. ಅವರ ಸಮಾಧಿ ಬಳಿ ಅಣೆಕ ಪೂಜೆ ಪುನಸ್ಕಾರಗಳು ನೆರವೇರುತ್ತಿವೆ. ಸಹೋದರನಾದ ಧ್ರುವ ಸರ್ಜಾ ಹಾಗೂ ಮಗನಾದ ರಾಯನ್ ಸೇರಿದಂತೆ ಇಡೀ ಕುಟುಂಬವೇ ಪುಣ್ಯತಿಥಿಯ ಕಾರ್ಯದಲ್ಲಿ ಭಾಗಿಯಾಗಿದೆ. ಇದೇ ಸಮಯದಲ್ಲಿ ಮೇಘನಾ ರಾಜ್ ಅವರು ತಮ್ಮ ಪ್ರೀತಿಯ ಚಿರಜೀವಿ ಅವರನ್ನು ನೆನೆದು ಭಾವನಾತ್ಮಕ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ-Chiru's Death Anniversary: ಚಿರು ಸರ್ಜಾ ಫೋಟೋಗೆ ಮುತ್ತು ಇಟ್ಟು, ಹೂ ಹಾಕಿ ನಮಿಸಿದ ರಾಯನ್ ರಾಜ್ ಸರ್ಜಾ!
ಪರಿಯ ಪುಣ್ಯತಿಥಿಯಂದು ಮೇಘನಾ ಅವರಿಬ್ಬರ ಹಳೆಯ ಪೋಟೋವೊಂದನ್ನು ಶೇರ್ ಮಾಡಿ, ಕೆಳಗೆ ಭಾವುಕರಾಗಿ ʼನನ್ನ ನಿನ್ನೆ, ಇಂದು, ಎಂದೆಂದಿಗೂ ನೀನೆʼ ಎಂದು ಅವರ ಪ್ರೀತಿಯ ಸಾಲುಗಳನ್ನು ಬರೆದಿದ್ದಾರೆ. ಅದನ್ನು ನೋಡಿದರೆ ಕರುಳು ಕಿತ್ತು ಬತುವಂತಿದೆ. ಈ ಸಾಲುಗಳಿಗೆ ಚಿರಂಜೀವಿ ಅವರ ಅಭಿಮಾನಿಗಳು ಸಹ ದುಃಖಿತರಾಗಿ ಕಾಮೆಂಟ್‌ಗಳ ಮೂಲಕ ಸಮಾಧಾನದ ಮಾತುಗಳನ್ನಾಡಿದ್ದಾರೆ.
ರಾಯನ್‌ಗೆ ಜನ್ಮ ನೀಡಿದ ನಂತರ ಮೇಘನಾ ರಾಜ್ ಕೆಲವು ದಿನಗಳ ಕಾಲ ಸಿನಿರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಈಗ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಅವರ ಗೆಳೆಯ ಪನ್ನಾಗಭರಣ ಅವರು ನಿರ್ದೇಶಿಸಿರುವ ಸಿನಿಮಾ ʼತತ್ಸಮ ತದ್ಭವʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ-Om Raut kisses Kriti: ತಿರುಪತಿ ದೇವಸ್ಥಾನದಲ್ಲಿ ಕೃತಿ ಸನೋನ್‌ಗೆ ಕಿಸ್ ಕೊಟ್ಟ ನಿರ್ದೇಶಕ, ಟೀಕೆಗೆ ಗುರಿ.!