KGF-2 Trailer: 'ಕೆಜಿಎಫ್‌-2' ಟ್ರೇಲರ್‌ ನೋಡಿ ವಾವ್..‌ ವಾವ್.‌. ಎಂದ ತಮಿಳು‌ ಸಿನಿಮಾ ಡೈರೆಕ್ಟರ್..!

ಇತ್ತೀಚೆಗೆ ನಡೆದ 'ಕೆಜಿಎಫ್‌-2' ಟ್ರೇಲರ್‌ ರಿಲೀಸ್‌ ಸಮಾರಂಭದಲ್ಲಿ ಸ್ವತಃ ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳಿಗೆ ಒಂದು ಸಂದೇಶ ನೀಡಿದ್ದರು. ಈ ಮೂಲಕ ಕನ್ನಡಿಗರ ಹೃದಯ ಎಷ್ಟು ವಿಶಾಲ ಎಂಬುದನ್ನ ರಾಕಿಂಗ್‌ ಸ್ಟಾರ್‌ ಯಶ್‌ ಜಗತ್ತಿಗೇ ಸಾರಿ ಹೇಳಿದ್ದರು. 

Written by - Malathesha M | Edited by - Yashaswini V | Last Updated : Mar 31, 2022, 02:40 PM IST
  • 'ಕೆಜಿಎಫ್‌-1' ಆಧುನಿಕ ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಇಡೀ ಜಗತ್ತಿಗೇ ಪರಿಚಯಿಸಿದ ಸಿನಿಮಾ.
  • ಊಹೆಗೂ ನಿಲುಕದಷ್ಟು ಎತ್ತರಕ್ಕೆ 'ಕೆಜಿಎಫ್‌-1' ಹಿಟ್‌ ಆಗಿತ್ತು.
  • ಹೀಗಾಗಿ ವರ್ಲ್ಡ್‌ ವೈಡ್ ನೂರಾರು ಕೋಟಿ ಅಭಿಮಾನಿಗಳು ಕೆಜಿಎಫ್‌ ಸೀಕ್ವೆಲ್‌ಗೆ ಕಾಯ್ತಿದ್ದಾರೆ.
KGF-2 Trailer: 'ಕೆಜಿಎಫ್‌-2' ಟ್ರೇಲರ್‌ ನೋಡಿ ವಾವ್..‌ ವಾವ್.‌. ಎಂದ ತಮಿಳು‌ ಸಿನಿಮಾ ಡೈರೆಕ್ಟರ್..! title=
KGF Chapter 2

KGF-2 Trailer: ಕನ್ನಡ ಸಿನಿಮಾಗಳಿಗೆ ಪರಭಾಷೆ ಚಿತ್ರಗಳು ಕೊಟ್ಟ ಕಾಟ ಅಷ್ಟಿಷ್ಟಲ್ಲ. ಆದರೆ 'ಕೆಜಿಎಫ್‌' ಸಿನಿಮಾ ಎದುರು ನಿಲ್ಲೋದಕ್ಕೆ ಮಾತ್ರ ಪರಭಾಷೆ ಸಿನಿಮಾ ನಿರ್ದೇಶಕರು, ಹೀರೋಗಳು ಹಾಗೂ ನಿರ್ಮಾಪಕರ ಕಾಲು ನಡುಗುತ್ತಿದೆ. ಇದೆಲ್ಲವನ್ನೂ ಮೀರಿ ತಮಿಳು ನಟ ವಿಜಯ್‌ ಅಭಿನಯದ 'ಬೀಸ್ಟ್‌' ಸಿನಿಮಾ 'ಕೆಜಿಎಫ್‌' ಎದುರು ಬರುತ್ತಿದೆ. ಈ ಹೊತ್ತಲ್ಲೇ ಅಭಿಮಾನಿಗಳ ನಡುವೆ ಕಿಚ್ಚು ಹೊತ್ತಿದ್ದು, ಆ ಕಿಚ್ಚು ತಣ್ಣಗಾಗಿಸಲು ಸ್ವತಃ 'ಬೀಸ್ಟ್‌' ನಿರ್ದೇಶಕರೇ ಫೀಲ್ಡ್‌ಗೆ ಎಂಟ್ರಿಯಾಗಿದ್ದಾರೆ.

'ಕೆಜಿಎಫ್‌-1' (KGF-1) ಆಧುನಿಕ ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಇಡೀ ಜಗತ್ತಿಗೇ ಪರಿಚಯಿಸಿದ ಸಿನಿಮಾ. ಊಹೆಗೂ ನಿಲುಕದಷ್ಟು ಎತ್ತರಕ್ಕೆ 'ಕೆಜಿಎಫ್‌-1' ಹಿಟ್‌ ಆಗಿತ್ತು. ಹೀಗಾಗಿ ವರ್ಲ್ಡ್‌ ವೈಡ್ ನೂರಾರು ಕೋಟಿ ಅಭಿಮಾನಿಗಳು ಕೆಜಿಎಫ್‌ ಸೀಕ್ವೆಲ್‌ಗೆ ಕಾಯ್ತಿದ್ದಾರೆ. ಈ ಹೊತ್ತಲ್ಲೇ 'ಕೆಜಿಎಫ್‌' ಚಾಪ್ಟರ್‌ 2 ಎದುರು ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ರಿಲೀಸ್‌ ಆಗುತ್ತಿದ್ದು, ಫ್ಯಾನ್ಸ್‌ ವಾರ್‌ಗೆ ದಾರಿಮಾಡಿಕೊಟ್ಟಿದೆ.

ಶಾಂತಿ ಮಂತ್ರ!
ಅಂದಹಾಗೆ ತಮಿಳು ನಟ ವಿಜಯ್‌ ಅಭಿನಯದ 'ಬೀಸ್ಟ್‌' ಸಿನಿಮಾ 'ಕೆಜಿಎಫ್‌' ಚಾಪ್ಟರ್‌ 2 (KGF Chapter-2) ರಿಲೀಸ್‌ ಆಗುವ ಹಿಂದಿನ ದಿನದಂದೇ ರಿಲೀಸ್‌ ಆಗಲಿದೆ. ಅಂದರೆ ಏಪ್ರಿಲ್‌ 14ರಂದು 'ಕೆಜಿಎಫ್‌' ಚಾಪ್ಟರ್‌ 2 ಬಿಡುಗಡೆ ಆದರೆ, ಏಪ್ರಿಲ್‌ 13ರಂದೇ 'ಬೀಸ್ಟ್‌' ರಿಲೀಸ್‌ ಆಗಲಿದೆ. ಹೀಗಾಗಿ ಎರಡೂ ಸಿನಿಮಾಗಳ ಮಧ್ಯೆ ದೊಡ್ಡ ಫೈಟ್‌ ಇರುತ್ತೆ ಅಂತಾ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು, ಇನ್ನೂ ಕೆಲವರು ಅತಿರೇಕದ ಕಮೆಂಟ್‌ಗಳ ಮೂಲಕ ಶಾಂತಿ ಕೆಡಿಸುವ ಕೆಲಸಕ್ಕೂ ಮುಂದಾಗುತ್ತಿದ್ದಾರೆ. ಆದರೆ ಈ ಹೊತ್ತಲ್ಲೇ ಅಲರ್ಟ್‌ ಆಗಿರುವ 'ಕೆಜಿಎಫ್‌' ಹಾಗೂ 'ಬೀಸ್ಟ್‌' ಚಿತ್ರಗಳ ನಿರ್ದೇಶಕರು ಯಾವುದೇ ಸಂಘರ್ಷ ನಡೆಯದಂತೆ ಶಾಂತಿ ಮಂತ್ರ ಪಠಿಸುತ್ತಿದ್ದಾರೆ.

ಇದನ್ನೂ ಓದಿ- Vijay Deverakonda : ಪುರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ ಫಿಕ್ಸ್.. 2023ಕ್ಕೆ JGM ರಿಲೀಸ್

ತಮಿಳು ಡೈರೆಕ್ಟರ್ ಫಿದಾ..!
ಇತ್ತೀಚೆಗೆ ನಡೆದ 'ಕೆಜಿಎಫ್‌-2' ಟ್ರೇಲರ್‌ ರಿಲೀಸ್‌ ಸಮಾರಂಭದಲ್ಲಿ ಸ್ವತಃ ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳಿಗೆ ಒಂದು ಸಂದೇಶ ನೀಡಿದ್ದರು. ಈ ಮೂಲಕ ಕನ್ನಡಿಗರ ಹೃದಯ ಎಷ್ಟು ವಿಶಾಲ ಎಂಬುದನ್ನ ರಾಕಿಂಗ್‌ ಸ್ಟಾರ್‌ ಯಶ್‌ ಜಗತ್ತಿಗೇ ಸಾರಿ ಹೇಳಿದ್ದರು. 'ಕೆಜಿಎಫ್‌-2' ಸಿನಿಮಾ 'ಬೀಸ್ಟ್‌' ವಿರುದ್ಧ ಸ್ಪರ್ಧಿಸುತ್ತಿಲ್ಲ. ವಿಜಯ್‌ ಒಬ್ಬ ದೊಡ್ಡ ನಟ, ಇಂತಹ ಮಾತುಗಳು ಈಗ ಸೂಕ್ತವಲ್ಲ ಎನ್ನುವ ಮೂಲಕ ಯಾವುದೇ ಸ್ಟಾರ್‌ ವಾರ್‌ ನಡೆಯುತ್ತಿಲ್ಲ ಎಂಬ ವಿಚಾರ ಸ್ಪಷ್ಟಪಡಿಸಿದ್ದರು. ಹೀಗೆ ರಾಕಿ ಭಾಯ್‌ ಈ ಮಾತುಗಳನ್ನು ಹೇಳಿದ ಕೆಲವೇ ದಿನಗಳಲ್ಲಿ 'ಬೀಸ್ಟ್‌' ಡೈರೆಕ್ಟರ್‌ ಕನ್ನಡದ ಚಿತ್ರಕ್ಕೆ ಫುಲ್‌ ಮಾರ್ಕ್ಸ್‌ ಕೊಟ್ಟಿದ್ದಾರೆ.

ಟ್ವೀಟ್‌ ವೈರಲ್:
ಅಂದಹಾಗೆ ಇಳಯ ದಳಪತಿ ವಿಜಯ್‌ ಅಭಿನಯದ 'ಬೀಸ್ಟ್‌' ಸಿನಿಮಾ ನಿರ್ದೇಶಕ ನೆಲ್ಸನ್‌ ದಿಲೀಪ್‌ ಕುಮಾರ್‌ 'ಕೆಜಿಎಫ್‌' ಚಾಪ್ಟರ್‌ 2 ಟ್ರೇಲರ್‌ ನೋಡಿ‌ ಸ್ಪೆಷಲ್ ಟ್ವೀಟ್‌ ಮಾಡಿದ್ದಾರೆ. ಆ ಸ್ಪೆಷಲ್ ಟ್ವೀಟ್‌ನಲ್ಲಿ 'ಕೆಜಿಎಫ್‌' ಚಾಪ್ಟರ್‌ 2 ಟ್ರೇಲರ್‌ಗೆ ಫುಲ್‌ ಮಾರ್ಕ್ಸ್‌ ನೀಡಿರುವ 'ಬೀಸ್ಟ್‌' ನಿರ್ದೇಶಕ ನೆಲ್ಸನ್‌ ದಿಲೀಪ್‌ ಕುಮಾರ್‌, ತಾವು 'ಕೆಜಿಎಫ್‌' ಚಾಪ್ಟರ್‌ 2 ನೋಡಲು ಕಾಯುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಟ್ವೀಟ್‌ ವೈರಲ್‌ ಆಗುವ ಜೊತೆಗೆ ತಮಿಳು ಭಾಷಿಕರು ಹಾಗೂ ಕನ್ನಡಿಗರ ನಡುವೆ ಸಾಮರಸ್ಯ ಮೂಡಿಸಲು ಮುನ್ನುಡಿ ಬರೆದಿರುವಂತಿದೆ.

ಇದನ್ನೂ ಓದಿ- 'ಕೆಜಿಎಫ್-2' ಟ್ರೇಲರ್ ನೋಡಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಏನಂದ್ರು ಗೊತ್ತಾ..?

ಸಾಮರಸ್ಯದ ಪಾಠ:
ಇಷ್ಟೆಲ್ಲದರ ನಡುವೆ 'ಬೀಸ್ಟ್‌' ಸಿನಿಮಾ ನಿರ್ದೇಶಕ ನೆಲ್ಸನ್‌ ದಿಲೀಪ್‌ ಕುಮಾರ್‌ 'ಕೆಜಿಎಫ್‌' ಚಾಪ್ಟರ್‌ 2 ಟ್ರೇಲರ್‌ ಬಗ್ಗೆ ಮಾಡಿರುವ ಟ್ವೀಟ್‌ಗೆ 'ಕೆಜಿಎಫ್‌' ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಫಿದಾ ಆಗಿದ್ದಾರೆ. 'ಬೀಸ್ಟ್‌' ನಿರ್ದೇಶಕ ನೆಲ್ಸನ್‌ ದಿಲೀಪ್‌ ಕುಮಾರ್‌ 'ಕೆಜಿಎಫ್‌' ಚಾಪ್ಟರ್‌ 2 ಟ್ರೇಲರ್‌ ಬಗ್ಗೆ ಮಾಡಿದ ಟ್ವೀಟ್‌ಗೆ ಲೈಕ್‌ ಕೊಟ್ಟಿರುವ 'ಕೆಜಿಎಫ್‌' ಡೈರೆಕ್ಟರ್‌ ಪ್ರಶಾಂತ್‌ ನೀಲ್‌, ತಮ್ಮ ಫ್ಯಾನ್ಸ್‌ಗೆ ಸಾಮರಸ್ಯದ ಸಂದೇಶ ಸಾರಿದ್ದಾರೆ.

ಒಟ್ಟಾರೆ ಹೇಳೋದಾದರೆ 'ಕೆಜಿಎಫ್‌' ಚಾಪ್ಟರ್‌ 2 ಕನ್ನಡಿಗರು ಎಂದಿಗೂ ಮರೆಯಲಾಗದ ಸಿನಿಮಾ. ಹಾಗೇ ಸಾಮರಸ್ಯದ ಸಂದೇಶ ಸಾರುವ ಮೂಲಕ ನಟ ರಾಕಿಂಗ್‌ ಸ್ಟಾರ್‌ ಯಶ್‌, ನಿರ್ದೇಶಕ ಪ್ರಶಾಂತ್‌ ನೀಲ್‌ ಕನ್ನಡಿಗರ ಹೃದಯ ವೈಶಾಲ್ಯತೆಯ ಬಗ್ಗೆ ಜಗತ್ತಿಗೇ ಸಾರಿ ಹೇಳುತ್ತಿದ್ದಾರೆ. ಪರಭಾಷೆ ಸಿನಿಮಾಗಳ ವಿರುದ್ಧ ಗುದ್ದಾಡುವ ಬದಲು ಪ್ರೇಕ್ಷಕರ ಹೃದಯ ಗೆಲ್ಲುವ ಕೆಲಸಕ್ಕೆ ಮುಂದಾಗಿದ್ದಾರೆ. ಇದು ಕನ್ನಡಿಗರು ಮತ್ತು ಕರುನಾಡ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡದ ಸಿನಿಮಾ 'ಕೆಜಿಎಫ್‌' ನಕ್ಷತ್ರದಂತೆ ಮಿಂಚಲು ಸಜ್ಜಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News