ಬೆಂಗಳೂರು: ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ಮೂಲವೆನಿಸಿಕೊಂಡಿರುವ ವಿಶ್ವ ಪ್ರಸಿದ್ಧ ತಾಣ ಐಎಂಡಿಬಿ, (www.imdb.com) ಇಂದು 2024ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯನ್ನು ಘೋಷಿಸಿದೆ. ಐಎಂಡಿಬಿ ತಾಣಕ್ಕೆ ಭೇಟಿ ನೀಡುವ ಲಕ್ಷಾಂತರ ಬಳಕೆದಾರರ ಮಾಸಿಕ ಪೇಜ್ ವೀಕ್ಷಣೆಯನ್ನು ಆಧರಿಸಿ ಈ ಅನನ್ಯ ಪಟ್ಟಿ ಸಿದ್ಧಪಡಿಸಲಾಗಿದೆ.
ಫೈಟರ್ (2024ರ ಬಹು ನಿರೀಕ್ಷಿತ ಚಿತ್ರ) ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿರುವ ಹೃತಿಕ್ ರೋಷನ್, “ಇದು ನಂಬಲಾಗದ ಪಾಸಿಟಿವ್ ಅಪ್‌ಡೇಟ್. ಐಎಂಡಿಬಿ ಪ್ರಕಾರ ಫೈಟರ್ ಚಿತ್ರದ 2024ರ ಬಹುನಿರೀಕ್ಷಿತ ಚಿತ್ರ ಎಂದು ತಿಳಿದು ಬಂತು. ಫೈಟರ್ ಟೀಸರ್ ಗೆ ಲಭಿಸಿರುವ ಪ್ರತಿಕ್ರಿಯೆ ಮತ್ತು ಹಾಡುಗಳು ಅದ್ಭುತವಾಗಿದ್ದು, ಸಮಗ್ರವಾದ ಸಿನಿಮಾ ಅನುಭವವನ್ನು ನಮ್ಮ ವೀಕ್ಷಕರಿಗೆ ನೀಡುತ್ತೇವೆ ಎಂಬ ವಿಶ್ವಾಸವಿದೆ. ಜನವರಿ 25, 2024ರಂದು ಚಿತ್ರ ತೆರೆ ಕಾಣಲಿದೆ. ಗಣರಾಜ್ಯದ ಹಿಂದಿನ ದಿನಚಿತ್ರ ಮಂದಿರಗಳಲ್ಲಿ ಸಿಗೋಣ” ಎಂದಿದ್ದಾರೆ.
ಇದನ್ನೂ ಓದಿ-'ಬೊಂಬಾಟ್ ಭೋಜನ' 1000 ಸಂಚಿಕೆಯ ಸಂಭ್ರಮ: ಸಂಕ್ರಾಂತಿಗೆ ಹೊಸ ಸೀಸನ್ ಶುರು..
2024ರ ಐಎಂಡಿಬಿಯ ಬಹುನಿರೀಕ್ಷಿತ ಭಾರತೀಯ ಚಿತ್ರಗಳು
1. ಫೈಟರ್
2. 2 ಫುಷ್ಪ: ದಿ ರೂಲ್ – ಭಾಗ 2
3. ವೆಲ್‌ಕಂ ಟು ದಿ ಜಂಗಲ್
4. ಸಿಂಘಂ ಅಗೇನ್
5. ಕಲ್ಕಿ 2898ಎಡಿ
6. ಭಗೀರಾ
7. ಹನುಮಾನ್
8. ಬಡೆ ಮಿಯಾ ಛೋಟೆ ಮಿಯಾ
9. ಕಂಗುವಾ
10. ದೇವರ ಭಾಗ -1
11. ಛಾವಾ
12. ಗುಂಟುರು ಕಾರಂ
13. ಮಲೈಕೊಟ್ಟೈ ವಾಲಿಬನ್
14. ಮೆರಿ ಕ್ರಿಸ್‌ಮಸ್
15. ಕ್ಯಾಪ್ಟನ್ ಮಿಲ್ಲರ್
16. ತಂಗಾಲನ್
17. ಇಂಡಿಯನ್ 2
18. ಯೋಧ
19. ಮೈ ಅಟಲ್ ಹೂಂ
20. ಜಿಗರ
*2024ರಲ್ಲಿ ಬಿಡುಗಡೆಯಾಗುತ್ತಿರುವ ಭಾರತೀಯ ಸಿನಿಮಾಗಳ ಈ ಶೀರ್ಷಿಕೆಗಳು ಐಎಂಡಿಬಿ ಬಳಕೆದಾರರಲ್ಲಿ ಸ್ಥಿರವಾಗಿ ಹೆಚ್ಚು ಜನಪ್ರಿಯವಾಗಿವೆ, ಐಎಂಡಿಬಿಗೆ ವಿಶ್ವಾದ್ಯಂತ ನೂರಾರು ಮಿಲಿಯನ್ ಮಾಸಿಕ ನಿಜವಾದ ಪೇಜ್ ವ್ಯೂ ಆಧರಿಸಿ ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ-BBK10: ದೊಡ್ಮನೆಯೊಳಗೆ ಜೋರಾದ ಪೈಪೋಟಿ...! ಫಿನಾಲೆ ಹೊಸ್ತಿಲಲ್ಲಿ ಸ್ಪರ್ಧಿಗಳ ಎದೆಗೆ ನಾಮಿನೇಷನ್ ಚೂರಿ
ಐಎಂಡಿಬಿ ಪಟ್ಟಿಯಲ್ಲಿರುವ 20 ಶೀರ್ಷಿಕೆಗಳಲ್ಲಿ ಒಂಬತ್ತು ಹಿಂದಿ ಸಿನಿಮಾಗಳು, ಐದು ತೆಲುಗು, ನಾಲ್ಕು ತಮಿಳು, ಒಂದು ಮಲಯಾಳಂ ಮತ್ತು ಒಂದು ಕನ್ನಡ ಸಿನಿಮಾ ಎಂಬುದು ಗಮನಾರ್ಹ. ಪಟ್ಟಿಯಲ್ಲಿರುವ ಮೊದಲ ಐದು ಸಿನಿಮಾಗಳ ಪೈಕಿ ಮೂರರಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. : ಫೈಟರ್ (ಸಂ. 1), ಸಿಂಗಮ್ ಎಗೈನ್ (ಸಂ. 4), ಮತ್ತು ಕಲ್ಕಿ 2898 AD(ಸಂ. 5). ಅವರು ಇತ್ತೀಚೆಗೆ ಘೋಷಿಸಿದ ಐಎಂಡಿಬಿ 2023 ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ 3 ನೇ ಸ್ಥಾನವನ್ನು ಪಡೆದಿದ್ದಾರೆ. ಪಟ್ಟಿಯಲ್ಲಿರುವ ನಾಲ್ಕು ಶೀರ್ಷಿಕೆಗಳು ಜನಪ್ರಿಯ ಸಿನಿಮಾಗಳ ಮುಂದುವರೆದ ಭಾಗಗಳಾಗಿವೆ: ಪುಷ್ಪಾ: ದಿ ರೂಲ್ - ಭಾಗ 2 (ಸಂ. 2), ವೆಲ್ಕಮ್ ಟು ದಿ ಜಂಗಲ್ (ಸಂ. 3), ಸಿಂಗಮ್ ಎಗೇನ್ (ಸಂ. 4), ಮತ್ತು ಇಂಡಿಯನ್ 2 (ಸಂ. 17).
ಐಎಂಡಿಬಿ ಬಳಕೆದಾರರು ಈ ಮತ್ತು ಇತರ ಶೀರ್ಷಿಕೆಗಳನ್ನು ತಮ್ಮ ಐಎಂಡಿಬಿ ವಾಚ್‌ಲಿಸ್ಟ್‌ಗೆ ಸೇರಿಸಿಕೊಳ್ಳಬಹುದು ಮತ್ತು ಅವುಗಳ ಅಲರ್ಟ್‌ಗಳನ್ನು ಪಡೆದುಕೊಳ್ಳಬಹುದು. 2024 ರ ಐಎಂಡಿಬಿ ಬಹು ನಿರೀಕ್ಷಿತ ಭಾರತೀಯ ಸಿನಿಮಾಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಈ ವೀಡಿಯೊವನ್ನು ವೀಕ್ಷಿಸಿ ಮತ್ತು ಸಂಪೂರ್ಣ ಪಟ್ಟಿಯನ್ನು ಇಲ್ಲಿ ವೀಕ್ಷಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.