ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿದ 'ಮುಂದಿನ ನಿಲ್ದಾಣ' ದ ಟೀಸರ್

ವಿನಯ್ ಭಾರದ್ವಾಜ್ ನಿರ್ದೇಶನದ 'ಮುಂದಿನ ನಿಲ್ದಾಣ' ಸಿನಿಮಾ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ತನ್ನ ಪೋಸ್ಟರ್ ವಿನ್ಯಾಸದಿಂದಲೇ ಸಾಕಷ್ಟು ಗಮನ ಸೆಳೆದಿದೆ. ಈಗ ಅದರ ಮುಂದುವರೆದ ಭಾಗವಾಗಿ ಇಂದು ಚಿತ್ರದ ಮೊದಲ ಟಿಸರ್ ಬಿಡುಗಡೆಯಾಗಿದೆ.

Updated: Aug 12, 2019 , 09:02 PM IST
ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿದ 'ಮುಂದಿನ ನಿಲ್ದಾಣ' ದ ಟೀಸರ್
Photo: facebook

ಬೆಂಗಳೂರು: ವಿನಯ್ ಭಾರದ್ವಾಜ್ ನಿರ್ದೇಶನದ 'ಮುಂದಿನ ನಿಲ್ದಾಣ' ಸಿನಿಮಾ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ತನ್ನ ಪೋಸ್ಟರ್ ವಿನ್ಯಾಸದಿಂದಲೇ ಸಾಕಷ್ಟು ಗಮನ ಸೆಳೆದಿದೆ. ಈಗ ಅದರ ಮುಂದುವರೆದ ಭಾಗವಾಗಿ ಇಂದು ಚಿತ್ರದ ಮೊದಲ ಟಿಸರ್ ಬಿಡುಗಡೆಯಾಗಿದೆ.

 

ಪೋಸ್ಟರ್ ನಷ್ಟೇ ಕಾವ್ಯಾತ್ಮಕವಾಗಿರುವ 'ಮುಂದಿನ ನಿಲ್ದಾಣ'ದ ಟಿಸರ್ ಮೂರು ವಿಭಿನ್ನ ಪಾತ್ರಗಳನ್ನು ಪರಿಚಯಿಸುತ್ತದೆ. ಈ ಮೂರು ಪಾತ್ರಗಳ ಮೂಲಕ ಮುಂದಿನ ನಿಲ್ದಾಣದ ಹುಡುಕಾಟದ ಸಂದರ್ಭದಲ್ಲಿ ಪರಸ್ಪರ ಹುಟ್ಟುವ ಪ್ರೀತಿ, ಸ್ನೇಹ, ಸಂಬಂಧ, ಮತ್ತು ಮತ್ತು ತಮ್ಮಿಷ್ಟದ ಬದುಕನ್ನು ಕಟ್ಟಿಕೊಳ್ಳುವ ಆಸೆ ಹಾಗೂ ಭರವಸೆಗಳ ಕುರಿತಾದ ಸಣ್ಣ ಜಲಕ್ ನ್ನು ಈ ಟಿಸರ್ ಕಟ್ಟಿಕೊಡುತ್ತದೆ. ಟಿಸರ್ ನ ವಿಶೇಷವೆಂದರೆ ದೃಶ್ಯದ ಪ್ರತಿಯೊಂದು ಪ್ರೇಮ್ ಗಳು ಅದ್ಬುತವಾಗಿ ಮೂಡಿ ಬಂದಿದೆ.

ಇನ್ನು ನಿರ್ದೇಶಕ ವಿನಯ್ ಭಾರದ್ವಾಜ್ ಅವರು ಈಗಾಗಲೇ ಕಿರುಚಿತ್ರ ಮತ್ತು ಸಾಕ್ಷ್ಯ ಚಿತ್ರಗಳ ನಿರ್ಮಾಣದಿಂದಾಗಿ ಹಾಗೂ ಟಾಕ್ ಷೋ ಗಳ ಮೂಲಕವಾಗಿ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ಆದರೆ ಅವರು ಇದೆ ಮೊದಲ ಬಾರಿಗೆ ಕನ್ನಡದಲ್ಲಿ ಪೂರ್ಣ ಪ್ರಮಾಣ ಚಿತ್ರವೊಂದು ನಿರ್ದೇಶಿಸಿದ್ದಾರೆ.ಪ್ರವೀಣ್ ತೇಜ್ ರಾಧಿಕಾ ನಾರಾಯಣ್ ಮತ್ತು ಅನನ್ಯಾ ಕಶ್ಯಪ್ ಅವರು ಮುಂದಿನ ನಿಲ್ದಾಣ ಚಿತ್ರದ ತಾರಾಗಣದಲ್ಲಿದ್ದಾರೆ. ಈ ಚಿತ್ರ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.