ನವರಸನಾಯಕ ಈಗ ರಂಗನಾಯಕ ; ಮಾರ್ಚ್ 8 ಕ್ಕೆ‌ಆಟ ಶುರು

ನವರಸ ನಾಯಕ ಜಗ್ಗೇಶ್ ಅಭಿನಯದ ಮಠ ಗುರುಪ್ರಸಾದ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ರಂಗನಾಯಕ ಮಾರ್ಚ್ 8 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ.

Written by - YASHODHA POOJARI | Edited by - Manjunath N | Last Updated : Feb 16, 2024, 07:35 PM IST
  • ಇಂಡಸ್ಟ್ರಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟ ನವರಸನಾಯಕ ಜಗ್ಗೇಶ್ ಫೈನ್ ಓನ್ ಅನ್ನೋ ಡಬ್ಬಿಂಗ್ ಸ್ಟುಡಿಯೋವನ್ನು ಶುರು ಮಾಡ್ತಿದ್ದಾರೆ
  • ಜನ ಥಿಯೇಟರ್ ಗೆ ಬಂದು ಬಾಯಿ ತುಂಬಾ ನಕ್ಬಿಟ್ರೆ ನಮಗೆ ಖುಷಿಯಾಗತ್ತೆ ಎಂದು ಡೋಲೊ 650 ಡೈಲಾಗ್ ಹೇಳಿದರು
 ನವರಸನಾಯಕ ಈಗ ರಂಗನಾಯಕ ; ಮಾರ್ಚ್ 8 ಕ್ಕೆ‌ಆಟ ಶುರು title=

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅಭಿನಯದ ಮಠ ಗುರುಪ್ರಸಾದ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ರಂಗನಾಯಕ ಮಾರ್ಚ್ 8 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ.

ಪುಷ್ಪಕ ವಿಮಾನ ಖ್ಯಾತಿಯ ನಿರ್ಮಾಪಕ‌ ವಿಖ್ಯಾತ್ ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಮಠ, ಎದ್ದೇಳು ಮಂಜುನಾಥ ಚಿತ್ರಗಳ ಮೂಲಕ ಹೊಸ ದಾಖಲೆಯನ್ನೇ‌‌  ಸೃಷ್ಟಿಸಿದ್ದ ‌ಗುರುಪ್ರಸಾದ್ ಜಗ್ಗೇಶ್  ಜೋಡಿ  ನಗುವಿನ ಅಲೆ ಎಬ್ಬಿಸಲು ಮತ್ತೊಮ್ಮೆ  ಪ್ರೇಕ್ಷಕರೆದುರು ಬರುತ್ತಿದ್ದಾರೆ.

ಇದನ್ನೂ  ಓದಿ : ನಮ್ಮ ಬಜೆಟ್‌ ನೋಡಿ ವಿರೋಧ ಪಕ್ಷಗಳ ನಾಯಕರಿಗೆ ಸಂಕಟದಿಂದ ಕೂರಲು ಆಗಲಿಲ್ಲ : ಡಿಸಿಎಂ

ಶಿವರಾತ್ರಿಯ ವಿಶೇಷವಾಗಿ ಈ ಚಿತ್ರ ಮಾರ್ಚ್ 8ರಂದು ಬಿಡುಗಡೆಯಾಗುತ್ತಿದೆ.15 ವರ್ಷಗಳ  ನಂತರ ಮತ್ತೆ  ಒಂದಾದ ಜಗ್ಗಣ್ಣ ಮತ್ತು ಗುರುಪ್ರಸಾದ್ ಜೋಡಿ ಈ ಸಲ ಪ್ರೇಕ್ಷಕರಿಗೆ ಯಾವ‌ ರೀತಿ ಮೋಡಿ ಮಾಡುತ್ತಾರೆಂದು ಕಾದು ನೋಡಬೇಕಿದೆ. ಈ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಜಗ್ಗೇಶ್ , ಚೈತ್ರ ಕೊಟ್ಟೂರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

ಇದನ್ನೂ  ಓದಿ : ಬಜೆಟ್ ಬಹಿಷ್ಕಾರದ ಮೂಲಕ ಬಿಜೆಪಿಯಿಂದ ರಾಜ್ಯದ ಜನರಿಗೆ ಅವಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

ಕಾರ್ಯಕ್ರಮದಲ್ಲಿ ನಾಯಕನಟ ಜಗ್ಗೇಶ್ ಮಾತನಾಡುತ್ತ ಈ ಸಿನಿಮಾ ಸಂಪೂರ್ಣವಾಗಿ ಗುರುಪ್ರಸಾದ್ ಅವರ ಪ್ರಸಾದ. ಎನ್ನುತ್ತ ಮಠ ಹಾಗೂ ಎದ್ದೇಳು ಮಂಜುನಾಥ ಸಿನಿಮಾದ ನೆನಪುಗಳನ್ನ ಮೆಲುಕು ಹಾಕಿದರು.  ಗುರುಪ್ರಸಾದ್ ಜಗಮೊಂಡ, ಆತ ಯಾರು ಮಾತನ್ನೂ  ಕೇಳೋನಲ್ಲ.  ಮದವೇರಿದ ಒಂಟಿ ಸಲಗನಂತೆ ಎಂದು ನಿರ್ದೇಶಕರ ಕಾರ್ಯವೈಖರಿಯನ್ನು ಮೆಚ್ಚುಕೊಂಡರು.ವರ್ಷಕ್ಕೊಂದು ಸಿನಿಮಾ ಮಾಡಿದ್ರೆ ಕಂಡಿತಾ ಒಳ್ಳೆದಾಗತ್ತೆ ಎಂದು ಮಾತನಾಡಿದ ಜಗ್ಗೇಶ್, ಡಬ್ಬಿಂಗ್ ಸ್ಟುಡಿಯೋ ನಂಗೆ ತುಂಬಾ ಇಷ್ಟವಾದ ಜಾಗ ಎಂದರು.

ಇಂಡಸ್ಟ್ರಿಯಲ್ಲಿ  ಮತ್ತೊಂದು ಹೆಜ್ಜೆ ಮುಂದಿಟ್ಟ ನವರಸನಾಯಕ ಜಗ್ಗೇಶ್ ಫೈನ್ ಓನ್ ಅನ್ನೋ ಡಬ್ಬಿಂಗ್ ಸ್ಟುಡಿಯೋವನ್ನು  ಶುರು ಮಾಡ್ತಿದ್ದಾರೆ..ರಂಗನಾಯಕ. ಒಂದು ಎಂಟರ್ ಟೈನಿಂಗ್ ಚಿತ್ರ. ಜನ ಥಿಯೇಟರ್ ಗೆ ಬಂದು ಬಾಯಿ ತುಂಬಾ ನಕ್ಬಿಟ್ರೆ ನಮಗೆ ಖುಷಿಯಾಗತ್ತೆ ಎಂದು  ಡೋಲೊ 650 ಡೈಲಾಗ್ ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News