NayanaTara-Vignesh Shivan: ನಿರ್ದೇಶಕ ವಿಘ್ನೇಶ್ ಶಿವನ್ ಕಳೆದ ದಿನ ಅಂದರೆ ಆಗಸ್ಟ್ 12ರಂದು ತಮ್ಮ ಪತ್ನಿ, ನಟಿ ನಯನತಾರಾ ಜೊತೆ ಹನಿಮೂನ್ ಗೆ ತೆರಳಿದ್ದಾರೆ. ಸ್ಪೇನ್‌ನ ಪ್ರಖ್ಯಾತ ಸ್ಥಳವಾದ ಬಾರ್ಸಿಲೋನಾದಲ್ಲಿ ಮದುವೆಯ ಬಳಿಕ ಮೊದಲ ಪ್ರಣಯದ ಪ್ರವಾಸ ಕೈಗೊಂಡಿದ್ದಾರೆ. ಇನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ವಿಘ್ನೇಶ್ "ನಿರಂತರ ಕೆಲಸದ ನಂತರ ನಾವು ನಮಗಾಗಿ ಸ್ವಲ್ಪ ಸಮಯವನ್ನು ಕಳೆಯಲು ಹೋಗುತ್ತಿದ್ದೇವೆ. ಬಾರ್ಸಿಲೋನಾ ನಾವು ಬರುತ್ತಿದ್ದೇವೆ!" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ..?
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ಯೋಜಿಸುವ ತಂಡದ ಅವಿಭಾಜ್ಯ ಅಂಗವಾಗಿದ್ದ ವಿಘ್ನೇಶ್ ಶಿವನ್ ಕಳೆದ ಕೆಲವು ವಾರಗಳಿಂದ ಅದಕ್ಕಾಗಿಯೇ ಶ್ರಮಿಸುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಅವರು ವಹಿಸಿದ ಪಾತ್ರವನ್ನು ಎಲ್ಲೆಡೆ ಪ್ರಶಂಸಿಸಲಾಗಿತ್ತು.
ಇನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಜಾಗತಿಕ ಕಾರ್ಯಕ್ರಮವನ್ನು ಅದ್ಭುತವಾಗಿಸಲು ಕಾರಣರಾದ ಎಲ್ಲರಿಗೂ ಧನ್ಯವಾದ ಹೇಳುವಾಗ ನಿರ್ದೇಶಕ ವಿಘ್ನೇಶ್ ಶಿವನ್ ಹೆಸರನ್ನು ಉಲ್ಲೇಖಿಸಿದ್ದರು.
ಆ ಬಳಿಕ ಮುಖ್ಯಮಂತ್ರಿ ಹೆಸರನ್ನು ಉಲ್ಲೇಖಿಸಿ, ವಿಘ್ನೇಶ್ ಶಿವನ್ ಪೋಸ್ಟ್ ಒಂದನ್ನು ಹಾಕಿದ್ದು, "ಗೌರವಾನ್ವಿತ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನನ್ನ ಹೆಸರನ್ನು ಅತ್ಯಂತ ಆತ್ಮೀಯ ಮತ್ತು ಅತ್ಯಂತ ಪ್ರೋತ್ಸಾಹದಾಯಕ ಪದಗಳಿಂದ ಉಲ್ಲೇಖಿಸಿದಾಗ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಭಾವಿಸಿದೆ. ಅದು ಅವರ ನಮ್ರತೆ ಮತ್ತು ಔದಾರ್ಯವನ್ನು ತೋರಿಸುತ್ತದೆ. ನನ್ನ ತಾಯಿ ಮತ್ತು ಸಹೋದರಿ ಇದ್ದಾರೆ. ನನ್ನ ಹೆಂಡತಿ ಟಿವಿಯಲ್ಲಿ ನೋಡುತ್ತಿದ್ದಾರೆ ಮತ್ತು ಇಡೀ ಕುಟುಂಬ ಸದಸ್ಯರು ಮತ್ತು ನನ್ನ ಸ್ನೇಹಿತರು ಈ ಸಮಯದಲ್ಲಿ ತುಂಬಾ ಸಂತೋಷ ಮತ್ತು ಹೆಮ್ಮೆಯನ್ನು ಅನುಭವಿಸುತ್ತಿದ್ದಾರೆ. ಧನ್ಯವಾದಗಳು ಸರ್. ಎಲ್ಲಾ ಕಠಿಣ ಪರಿಶ್ರಮವು ಈ ಒಂದು ಸಿಹಿ ಕ್ಷಣಕ್ಕೆ ಸಾರ್ಥಕವಾಗಿದೆ” ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಸಾಲ ವಸೂಲಿ ವೇಳೆ ಬೆದರಿಕೆ ಹಾಕುವಂತಿಲ್ಲ: ಆರ್‌ಬಿಐ ಖಡಕ್ ವಾರ್ನಿಂಗ್!
ಈ ಜೋಡಿಯು 2015 ರ ನಾನುಮ್ ರೌಡಿದಾನ್ ಚಿತ್ರದ ಸೆಟ್‌ನಲ್ಲಿ ಭೇಟಿಯಾಗಿದ್ದು, ಬಳಿಕ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದರು. ಇನ್ನು ನಯನತಾರಾ ಅವರ ಅನೇಕ ಸಿನಿಮಾಗಳನ್ನು ವಿಘ್ನೇಶ್ ನಿರ್ದೇಶಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.