Beautiful Rakshabandhan: ಚಿರತೆಯ ಕೈಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ಮಹಿಳೆ, ವಿಡಿಯೋ ನೋಡಿ

Rakshabandhan In Rajasthan: ಮಹಿಳೆಯೊಬ್ಬರು ಚಿರತೆಯ ಕೈಗಳಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಿದ್ದಾಳೆ. ಇಲ್ಲಿ ಅತ್ಯಂತ ಸುಂದರ ಸಂಗತಿ ಎಂದರೆ, ಚಿರತೆ ಮಹಿಳೆಗೆ ಯಾವುದೇ ಹಾನಿಯನ್ನು ತಲುಪಿಸುವುದಿಲ್ಲ. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋ ರಾಜಸ್ಥಾನದ ರಾಜಸಮಂಜ್ ಜಿಲ್ಲೆಯಿಂದ ಹೊರಹೊಮ್ಮಿದೆ.  

Written by - Nitin Tabib | Last Updated : Aug 12, 2022, 10:13 PM IST
  • ಮಹಿಳೆಯೊಬ್ಬರು ಚಿರತೆಯ ಕೈಗಳಿಗೆ ರಾಖಿ ಕಟ್ಟುವ ಮೂಲಕ
  • ರಕ್ಷಾ ಬಂಧನ ಹಬ್ಬವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಿದ್ದಾಳೆ.
  • ಇಲ್ಲಿ ಅತ್ಯಂತ ಸುಂದರ ಸಂಗತಿ ಎಂದರೆ, ಚಿರತೆ ಮಹಿಳೆಗೆ ಯಾವುದೇ ಹಾನಿಯನ್ನು ತಲುಪಿಸುವುದಿಲ್ಲ.
Beautiful Rakshabandhan: ಚಿರತೆಯ ಕೈಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ಮಹಿಳೆ, ವಿಡಿಯೋ ನೋಡಿ title=
Woman Tied Rakhi To Leopard

Rakshabandhan Special - ಇಂದು ದೇಶದ ಹಲವು ರಾಜ್ಯಗಳಲ್ಲಿ ಭಾತೃತ್ವದ ಸಂಕೇತವಾಗಿರುವ ರಕ್ಷಾಬಂಧನ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿಯನ್ನು ಕಟ್ಟಿದ್ದಾರೆ. ಇಂತಹುದರಲ್ಲಿ ರಾಜಸ್ಥಾನದ ರಾಜಸಮಂಜ್ ಜಿಲ್ಲೆಯಿಂದ ಒಂದು ವಿಶಿಷ್ಟ ಸುದ್ದಿಯೊಂದು ಹೊರಹೊಮ್ಮಿದೆ. ವಾಸ್ತವದಲ್ಲಿ ಅಲ್ಲಿನ ಓರ್ವ ಮಹಿಳೆಯು ಒಂದು ಚಿರತೆಯ ಕೈಗೆ ರಾಖಿಯನ್ನು ಕಟ್ಟಿ ರಕ್ಷಾಬಂಧನ ಉತ್ಸವವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಿದ್ದಾರೆ. ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ರಾಖಿ ಕಟ್ಟುವ ಸಂದರ್ಭದಲ್ಲಿ ಚಿರತೆ ಮಹಿಳೆಗೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡಿಲ್ಲ ಎಂಬುದು ಇಲ್ಲಿ ತುಂಬಾ ವಿಶೇಷವಾಗಿದೆ.

ಚಿರತೆಗೆ ರಾಖಿ ಕಟ್ಟಿದ ಮಹಿಳೆ
ರಾಜಸಮಂಜ್ ಜಿಲ್ಲೆಯ ಖೇಡಾ ಗ್ರಾಮದ ನಿವಾಸಿಯಾಗಿರುವ ಲೀಲಾ ಹೆಸರಿನ ಮಹಿಳೆ ತನ್ನ ಪತಿಯೊಂದಿಗೆ ತವರು ಮನೆಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಗಾಯಗೊಂಡ ಒಂದು ಚಿರತೆ ರಸ್ತೆಯ ಪಕ್ಕದಿಂದ ಸಾಗುತ್ತಿರುವುದನ್ನು ಆಕೆ ಗಮನಿಸಿದ್ದಾಳೆ. ಆಗ ವಾಹನವನ್ನು ನಿಲ್ಲಿಸಲು ಹೇಳಿದ ಮಹಿಳೆ ಚಿರತೆಯ ಮುಂದಿನ ಕೈಗೆ ರಾಖಿಯನ್ನು ಕಟ್ಟಿದ್ದಾಳೆ. ಈ ಘಟನೆಯ ವಿಡಿಯೋವನ್ನು ಕೂಡ ಚಿತ್ರೀಕರಿಸಲಾಗಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. 

ಇದನ್ನೂ ಓದಿ-Kissing King Cobra: ಕಾಳಿಂಗ ಸರ್ಪಕ್ಕೆ ಕಿಸ್ ಕೊಡಲು ಖತರ್ನಾಕ್ ಕೆಲಸ ಮಾಡಿದ ಯುವತಿ, ವಿಡಿಯೋ ನೋಡಿ
 

ಗಾಯಗೊಂಡ ಚಿರತೆ ಅಸು ನೀಗಿದೆ
ವಾಸ್ತವದಲ್ಲಿ ವಿಡಿಯೋದಲ್ಲಿರುವ ಹೆಣ್ಣು ಚಿರತೆ ಗಾಯಗೊಂಡಿತ್ತು ಮತ್ತು ಅದು ಪಟ್ಟಣಕ್ಕೆ ಬಂದಿತ್ತು. ಮಹಿಳೆ ಚಿರತೆಗೆ ರಾಖಿ ಕಟ್ಟಿದ ಬಳಿಕ, ಅದರ ಸೂಚನೆಯನ್ನು ಕೆಲ ಜನರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದಾರೆ. ಬಳಿಕ ವೈದ್ಯಾಧಿಕಾರಿಗಳೊಂದಿಗೆ ಘಟನಾಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಚಿರತೆಗೆ ಚಿಕಿತ್ಸೆ ನೀಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಚಿರತೆ ಅಸು ನೀಗಿದೆ. 

 

ಇದನ್ನೂ ಓದಿ-UK PM Race: ಸೋಲನ್ನು ಒಪ್ಪಿಕೊಳ್ಳುತ್ತೇನೆ, ಆದರೆ ಸುಳ್ಳು ಭರವಸೆ‌ ನೀಡಲ್ಲ - ರಿಷಿ ಸುನಕ್

ಜಿಲ್ಲೆಯಲ್ಲಿ ಹಲವು ಚಿರತೆಗಳಿವೆ
ರಾಜಸ್ಥಾನದ ರಾಜಸಮಂಜ್ ಜಿಲ್ಲೆಯ ದಟ್ಟ ಕಾಡುಗಳಲ್ಲಿ ಹಲವು ಚಿರತೆಗಳಿವೆ. ಗಡಿಭಾಗದಲ್ಲಿ ಆಗಾಗ್ಗ ನಡೆಯುವ ಕೆಲ ಘರ್ಷಣೆಗಳಿಂದ ಚಿರತೆಗಳು ಗಾಯಗೊಳ್ಳುತ್ತವೆ. ನಂತರ ದಾರಿತಪ್ಪಿ ಅವು ಜನ ವಸತಿ ಪ್ರದೇಶಗಳಿಗೆ ಬರುತ್ತವೆ. ಮತ್ತೊಂದೆಡೆ ಬೇಟೆಗಾರರು ಇವುಗಳನ್ನು ಬೇಟೆಯಾಡುವಾಗ ಚಿರತೆಗಳು ಗಾಯಗೊಳ್ಳುತ್ತವೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News