ಚೆನ್ನೈ: ಮಲಯಾಳಂ ನಟಿ ನಯನತಾರಾ ಮತ್ತು ತಮಿಳಿನ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿಗೆ ಅವಳಿ ಗಂಡು ಮಗು ಆಗಿರುವ ವಿಚಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಆದರೆ ಬಳಿಕ ಬಾಡಿಗೆ ತಾಯ್ತನದ ಬಗ್ಗೆ ವಿವಾದ ಸೃಷ್ಟಿಯಾಯಿತು. ಈ ವಿವಾದದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದರು. ಇದಕ್ಕಾಗಿಯೇ ತನಿಖಾ ಸಮಿತಿಯೊಂದನ್ನು ರಚಿಸಿದರು. ಈಗ ಈ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಮಲಯಾಳಂ ನಟಿ ನಯನತಾರಾ ಮತ್ತು ತಮಿಳಿನ ನಿರ್ದೇಶಕ ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ 2021 ಅನ್ನು ಉಲ್ಲಂಘಿಸಿಲ್ಲ ಎಂದು ತಮಿಳುನಾಡು ಆರೋಗ್ಯ ಸಚಿವಾಲಯದ ವರದಿ ಬುಧವಾರ ತಿಳಿಸಿದೆ. ವಿಘ್ನೇಶ್ ಮತ್ತು ನಯನತಾರಾ ತಮ್ಮ ವಿವಾಹವನ್ನು 2016 ರಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ತಮಿಳುನಾಡು ಆರೋಗ್ಯ ಸಚಿವಾಲಯ ವರದಿಯಲ್ಲಿ ತಿಳಿಸಿದೆ. ಅವರು ಐಸಿಎಂಆರ್ ಉಲ್ಲೇಖಿಸಿದ ಬಾಡಿಗೆ ತಾಯ್ತನದ ಮಾರ್ಗಸೂಚಿಗಳನ್ನು ಸಹ ಅನುಸರಿಸಿದ್ದಾರೆ ಎಂದು ಅದು ಹೇಳಿದೆ.
ಇದನ್ನೂ ಓದಿ : Puneeth Rajkumar : ಪುನೀತ್ ಮಾಡಿದ್ದ ಟ್ವೀಟ್ ವೈರಲ್.. ವರ್ಷದ ಬಳಿಕ ನನಸಾಗ್ತಿದೆ ಅಪ್ಪು ಕನಸು
"ಆಸ್ಪತ್ರೆಯು ರೋಗಿಗಳ ಬಗ್ಗೆ ಯಾವುದೇ ವೈದ್ಯಕೀಯ ದಾಖಲೆಯನ್ನು ನಿರ್ವಹಿಸಲಿಲ್ಲ. ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ, 2021 ಜಾರಿಗೆ ಬರುವ ಹೊತ್ತಿಗೆ, ನವೆಂಬರ್‌ನಲ್ಲಿ ಬಾಡಿಗೆಗೆ ಭ್ರೂಣವನ್ನು ಇರಿಸಲಾಗಿತ್ತು" ಎಂದು ವರದಿ ಹೇಳಿದೆ.
ಈ ಹಿಂದೆ, ತಮಿಳುನಾಡು ಆರೋಗ್ಯ ಇಲಾಖೆಗೆ ಸಲ್ಲಿಸಿದ ವರದಿಯಲ್ಲಿ ದಂಪತಿಗಳು ಮಕ್ಕಳಿಗೆ ಜನ್ಮ ನೀಡಿದ ಬಾಡಿಗೆ ತಾಯಿ ನಯನತಾರಾ ಅವರ ಸಂಬಂಧಿ ಮತ್ತು ಅವರು ದುಬೈನಲ್ಲಿ ನೆಲೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ : Kantara : ಕಾಂತಾರ ನೋಡಿ ಕೊಂಡಾಡಿದ ರಂಗೀಲಾ ಬೆಡಗಿ ಊರ್ಮಿಳಾ
ತಮಿಳುನಾಡು ಆರೋಗ್ಯ ಇಲಾಖೆ ರಚಿಸಿರುವ ತನಿಖಾ ಸಮಿತಿ ವರದಿಯ ಪ್ರಕಾರ, ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಬಾಡಿಗೆ ತಾಯ್ತನ ಕಾನೂನುಬದ್ಧವಾಗಿದೆ. ಆಗಸ್ಟ್ 2021ರಲ್ಲಿ ದಂಪತಿ ಬಾಡಿಗೆ ತಾಯ್ತನ ಪ್ರಕ್ರಿಯೆಯನ್ನು ಆರಂಭಿಸಿದ್ದರು. ಅದೇ ವರ್ಷದ ನವೆಂಬರ್‌ನಲ್ಲಿ ಒಪ್ಪಂದಕ್ಕೆ ಕೂಡ ಸಹಿ ಹಾಕಿದ್ದರು.
2016ರ ಮಾರ್ಚ್ 11ರಂದು ರಿಜಿಸ್ಟ್ರಾರ್ ಪದ್ಧತಿಯಡಿ ತಮ್ಮ ಮದುವೆಯಾಗಿರುವುದಾಗಿ ನಯನತಾರಾ ಮತ್ತು ವಿಘ್ನೇಶ್ ಅಫಿಡವಿಟ್ ಸಲ್ಲಿಸಿದ್ದಾರೆ. ಇದೀಗ ಹೊರಬಿದ್ದ ವರದಿಯಲ್ಲಿ, ಎಲ್ಲ ನಿಯಮಗಳನ್ನೂ ಪಾಲಿಸಲಾಗಿದೆ. ಆದ್ರೆ, ಬಾಡಿಗೆ ತಾಯ್ತನದ ವಿಧಾನವನ್ನೇಕೆ ಆಯ್ಕೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.