Tagaru Palya: ಡಾಲಿಯ ‘ಟಗರು ಪಲ್ಯ’ಕ್ಕೆ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿ

‘ಟಗರು ಪಲ್ಯ’ ಚಿತ್ರದಲ್ಲಿ ನಾಗಭೂಷಣಗೆ ನಾಯಕಿಯಾಗಿ ಅಮೃತಾ ಫೈನಲ್ ಆಗಿದ್ದಾರೆ. ಈ ಮೂಲಕ ಪ್ರೇಮ್ ಅವರ ಇಬ್ಬರು ಮಕ್ಕಳು ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗಿದೆ.

Written by - YASHODHA POOJARI | Edited by - Puttaraj K Alur | Last Updated : Nov 28, 2022, 11:50 AM IST
  • ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ
  • ಡಾಲಿ ಧನಂಜಯ್ ‘ಟಗರು ಪಲ್ಯ’ ಸಿನಿಮಾಗೆ ನಾಯಕಿಯಾದ ಅಮೃತಾ
  • ‘ಗುರು ಶಿಷ್ಯರು’ ಸಿನಿಮಾದಲ್ಲಿ ಶರಣ್ ಶಿಷ್ಯನಾಗಿ ಗಮನ ಸೆಳೆದಿದ್ದ ಪ್ರೇಮ್ ಪುತ್ರ
Tagaru Palya: ಡಾಲಿಯ ‘ಟಗರು ಪಲ್ಯ’ಕ್ಕೆ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿ title=
‘ಟಗರು ಪಲ್ಯ’ಕ್ಕೆ ಪ್ರೇಮ್ ಪುತ್ರಿ ನಾಯಕಿ

ಬೆಂಗಳೂರು: ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡೊಕೆ ಸಜ್ಜಾದ ಸ್ಟಾರ್ ನಟನ ಪುತ್ರಿ… ಅರೇ ಯಾರಪ್ಪಾ ಅಂತಾ ನೀವು ಲೆಕ್ಕಾಚಾರ ಹಾಕ್ಬೋದು. ಹೌದು, ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಜನರನ್ನು ರಂಜಿಸಿ ಜನಮನ ಗೆದ್ದಿರೋ ನೆನಪಿರಲಿ ಪ್ರೇಮ್ ಪುತ್ರಿ ಇದೀಗ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದು, ಪ್ರೇಮ್ ಅಭಿಮಾನಿಗಳ ಪಾಲಿಗೆ ಸಿಹಿ ವಿಚಾರ  ಹಂಚಿಕೊಂಡಿದ್ದಾರೆ.

ಫೈನಲಿ ಬಣ್ಣದ ಲೋಕಕ್ಕೆ ಬಂದಿದ್ದಾರೆ ನೆನಪಿರಲಿ ಪ್ರೇಮ್ ಮುದ್ದಿನ ಮಗಳು ಅಮೃತಾ ಪ್ರೇಮ್. ಡಾಲಿ ಧನಂಜಯ್ ನಿರ್ಮಾಣದ ‘ಟಗರು ಪಲ್ಯ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಹ್ಯಾಪಿ ನ್ಯೂಸ್ ಕೊಟ್ಟಿದ್ದಾರೆ. ‘ಡಾಲಿ ಪಿಕ್ಚರ್’ನಲ್ಲಿ ಮೂಡಿ ಬರುವ ‘ಟಗರು ಪಲ್ಯ’ ಚಿತ್ರಕ್ಕೆ ನಾಗಭೂಷಣ್ ನಾಯಕನಾಗಿದ್ದಾರೆ.

ಇದನ್ನೂ ಓದಿ: ಚಿಕ್ಕಪ್ಪ "ಪುನೀತ್" ಸ್ಕ್ರಿಪ್ಟ್ "ಯುವರಾಜ್ ಕುಮಾರ್ ಗೆ".. ಶೂಟಿಂಗ್ ಯಾವಾಗಿಂದ ಶುರು ಗೊತ್ತಾ...?

‘ಟಗರು ಪಲ್ಯ’ ಚಿತ್ರದಲ್ಲಿ ನಾಗಭೂಷಣಗೆ ನಾಯಕಿಯಾಗಿ ಅಮೃತಾ ಫೈನಲ್ ಆಗಿದ್ದಾರೆ. ಈ ಮೂಲಕ ಪ್ರೇಮ್ ಅವರ ಇಬ್ಬರು ಮಕ್ಕಳು ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗಿದೆ. ‘ಗುರು ಶಿಷ್ಯರು’ ಚಿತ್ರದಲ್ಲಿ ಶರಣ್ ಶಿಷ್ಯನಾಗಿ ಗಮನ ಸೆಳೆಯೋ ಮೂಲಕ ಪ್ರೇಮ್ ಪುತ್ರ ಏಕಾಂತ್ ಭರವಸೆ ಮೂಡಿಸಿದ್ದಾರೆ.

ನೆನಪಿರಲಿ ಪ್ರೇಮ್ ಪುತ್ರಿ ಶಾಲಾ-ಕಾಲೇಜು ದಿನಗಳಿಂದಲೇ ತಂದೆಗೆ ತಕ್ಕ ಮಗಳಾಗಿ ಗುರುತಿಸಿಕೊಂಡಿದ್ದಾರೆ. ಯಾಕಂದ್ರೆ ಓದಿನಿಂದ ಹಿಡಿದು ಎಲ್ಲಾ ಚಟುವಟಿಕೆಗಳಲ್ಲಿ ಪ್ರಥಮ ಶ್ರೇಣಿಯಲ್ಲೇ ಗುರುತಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಚಂದನವನದಲ್ಲಿ ಅಪ್ಪನನ್ನು ಮಗಳು ಬೀಟ್ ಮಾಡ್ತಾರಾ ಅನ್ನೋ ಟಾಕ್ ಕೂಡ ಗಾಂಧಿನಗರದಲ್ಲಿ ಶುರುವಾಗಿದೆ. ‘ಟಗರು ಪಲ್ಯ’ ಸಿನಿಮಾ ಈಗಾಗಲೇ ಬಾರೀ ಸುದ್ದಿಯಾಗುತ್ತಿರೋ ಸಿನಿಮಾ. ಡಾಲಿ ಆಪ್ತ ಗೆಳೆಯರೇ ಸೇರಿಕೊಂಡು ಈ ಸಿನಿಮಾ ಮಾಡುತ್ತಿದ್ದು,ಇದೀಗ ನಟರಾಕ್ಷಸ ಡಾಲಿ ಧನಂಜಯ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲೂ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಅದೇನೇ ಇರಲಿ  ನಮ್ಮ ಕನ್ನಡ ಇಂಡಸ್ಟ್ರಿ ಇನ್ನಷ್ಟು ಬೆಳೆಯಲಿ, ಹೆಸರು ಮಾಡಲಿ ಅನ್ನೋದೇ ನಮ್ಮ ಆಶಯ.

ಇದನ್ನೂ ಓದಿ: Shruti Haasan : ಮೇಕಪ್ ಇಲ್ಲದೆ ಶೃತಿ ಹಾಸನ್ ಹೀಗೆ ಕಾಣ್ತಾರಾ.. ದಂಗಾದ ಫ್ಯಾನ್ಸ್‌..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News