'ಪೆಪೆ' ಸಿನಿಮಾದ ಹೊಸ ಹಾಡಿಗೆ ಅಭಿಮಾನಿಗಳು ಫಿದಾ..! ಹೇಗಿದೆ ಗೊತ್ತಾ ಜೇನು ಕುರುಬ ಸಾಂಗ್..?

Pepe New Song Release: ತಾನು ಮಾಡುವ ಪ್ರತಿ ಸಿನಿಮಾಲ್ಲಿಯೂ ವಿನಯ್‌ ರಾಜ್‌ ಕುಮಾರ್‌ ವಿಭಿನ್ನ ಲುಕ್‌ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾಗಳ ಮುಂದೆ ಬರುತ್ತಾರೆ. ಈ ಮೂಲಕ ತಾನೊಬ್ಬ ಕ್ಲಾಸ್‌ ಆಕ್ಟರ್‌ ಅನ್ನುವುದನ್ನ ಸಾಬೀತು ಪಡಿಸುತ್ತಿದ್ದಾರೆ. ಇದೀಗ ದೊಡ್ಮನೆ ಕುಡಿಯ ಚಿತ್ರದ ಟೀಸರ್‌ ಈಗಾಗಲೇ ಹಿಟ್‌ ಲಿಸ್ಟ್‌ ಸೇರಿದ್ದು, ಚಿತ್ರ ಹೊಸ ಸಾಂಗ್‌ ಒಂದು ರಿಲೀಸ್‌ ಆಗಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ.  

Written by - Zee Kannada News Desk | Last Updated : Aug 8, 2024, 11:24 AM IST
  • ದೊಡ್ಮನೆ ಕುಡಿಯ ಚಿತ್ರದ ಟೀಸರ್‌ ಈಗಾಗಲೇ ಹಿಟ್‌ ಲಿಸ್ಟ್‌ ಸೇರಿದ್ದು, ಚಿತ್ರ ಹೊಸ ಸಾಂಗ್‌ ಒಂದು ರಿಲೀಸ್‌ ಆಗಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ.
  • ಪ್ರಿಸೆಟ್ ಎಂಬ ಟ್ಯಾಗ್ ಲೈನ್‌ನ ಅಡಿಯಲ್ಲಿ ಪೆಪೆ ಚಿತ್ರತಂಡ ಈ ಹೊಸ ಹಾಡನ್ನು ಅನಾವರಣ ಮಾಡಿದೆ.
  • ಬುಡಗಟ್ಟು ಜನಾಂಗದ ಆಚಾರ ವಿಚಾರ ತೆರೆದಿಡುವಂತೆ ಮೂಡಿಬಂದಿರುವ ಜೇನು ಕುರುಬ ಈ ಹಾಡು ಸದ್ಯಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
'ಪೆಪೆ' ಸಿನಿಮಾದ ಹೊಸ ಹಾಡಿಗೆ ಅಭಿಮಾನಿಗಳು ಫಿದಾ..! ಹೇಗಿದೆ ಗೊತ್ತಾ ಜೇನು ಕುರುಬ ಸಾಂಗ್..? title=

Pepe New Song Release: ತಾನು ಮಾಡುವ ಪ್ರತಿ ಸಿನಿಮಾಲ್ಲಿಯೂ ವಿನಯ್‌ ರಾಜ್‌ ಕುಮಾರ್‌ ವಿಭಿನ್ನ ಲುಕ್‌ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾಗಳ ಮುಂದೆ ಬರುತ್ತಾರೆ. ಈ ಮೂಲಕ ತಾನೊಬ್ಬ ಕ್ಲಾಸ್‌ ಆಕ್ಟರ್‌ ಅನ್ನುವುದನ್ನ ಸಾಬೀತು ಪಡಿಸುತ್ತಿದ್ದಾರೆ. ಇದೀಗ ದೊಡ್ಮನೆ ಕುಡಿಯ ಚಿತ್ರದ ಟೀಸರ್‌ ಈಗಾಗಲೇ ಹಿಟ್‌ ಲಿಸ್ಟ್‌ ಸೇರಿದ್ದು, ಚಿತ್ರ ಹೊಸ ಸಾಂಗ್‌ ಒಂದು ರಿಲೀಸ್‌ ಆಗಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ.

ಪ್ರಿಸೆಟ್ ಎಂಬ ಟ್ಯಾಗ್ ಲೈನ್‌ನ ಅಡಿಯಲ್ಲಿ ಪೆಪೆ ಚಿತ್ರತಂಡ ಈ ಹೊಸ ಹಾಡನ್ನು ಅನಾವರಣ ಮಾಡಿದೆ. ಪಿಆರ್ ಕೆ ಆಡಿಯೋದಲ್ಲಿ ರಿಲೀಸ್ ಆಗಿರುವ  ಈ ಹಾಡು ಗಾನಬಜಾನ ವಿಭಿನ್ನತೆಯಿಂದ ಕೂಡಿದೆ. ಬುಡಗಟ್ಟು ಜನಾಂಗದ ಆಚಾರ ವಿಚಾರ ತೆರೆದಿಡುವಂತೆ ಮೂಡಿಬಂದಿರುವ ಜೇನು ಕುರುಬ ಈ ಹಾಡು ಸದ್ಯಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಹಾಡಿಗೆ ಜಿ.ಜಿ. ಕುಮಾರ್‌ ಧ್ವನಿ ನೀಡಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. 

ಈ ಮುಂಚೆ ಚಿತ್ರತಂಡ ಇಡೀ ಚಿತ್ರ ಸೌಂಡ್‌ ಡಿಸೈನ್‌ ಯೂನಿಕ್‌ ಅಗಿದೆ ಎಂದು ಹೇಳಿಕೊಂಡಿತ್ತು. ಇದೀಗ ಅದಕ್ಕೆ ಪುಷ್ಠಿ ನೀಡವಂತೆ ಈ ಸಾಂಗ್‌ ಮೂಡಿ ಬಂದಿದ್ದು, ಹಾಡಿನ ಸೌಂಡ್‌ ಡಿಸೈನ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಇನ್ನೂ ಈ ಚಿತ್ರಕ್ಕೆ ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮಾಡಿದ್ದು ಈ ಚಿತ್ರದ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದಾರೆ, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರ ತಾರಾಗಣವನ್ನು ಚಿತ್ರತಂಡ  ಒಳಗೊಂಡ . ‘ಪೆಪೆ’ ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ.

ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News