ಚೈತ್ರ ಕುಂದಾಪುರ್ ಗೆ ಕಾನೂನು ಸಂಕಷ್ಟ !ಬಿಗ್ ಬಾಸ್ ಮನೆಯಿಂದ ಫೈರ್ ಬ್ರಾಂಡ್ ಔಟ್ ?

ಬಿಗ್ ಬಾಸ್ ಮನೆ ತಲುಪಿರುವ ಚೈತ್ರ ಕುಂದಾಪುರ್ ಗೆ ಕಾನೂನು ಸಂಕಷ್ಟ ಎದುರಾಗಿದೆ. ಅವರ ಮೇಲೆ ಈ ಹಿಂದೆ ದಾಖಲಾಗಿರುವ ಕೇಸ್ ಗಳೆ ಅವರಿಗೆ ಮುಳ್ಳಾಗಿವೆ.    

Written by - Ranjitha R K | Last Updated : Oct 1, 2024, 04:33 PM IST
  • ಬಿಗ್ ಬಾಸ್ 11 ಆರಂಭವಾಗಿ ಮೂರು ದಿನಗಳಾಗಿವೆ.
  • ಈ ಬಾರಿ 17 ಸ್ಪರ್ಧಿಗಳು ಬಿಗ್ ಬಾಸ್ ಮನೆ ತಲುಪಿದ್ದಾರೆ
  • ಈ ಸ್ಪರ್ಧಿಗಳ ಪೈಕಿ ಚೈತ್ರ ಕುಂದಾಪುರ್ ಕೂಡಾ ಒಬ್ಬರು.
ಚೈತ್ರ ಕುಂದಾಪುರ್ ಗೆ ಕಾನೂನು ಸಂಕಷ್ಟ !ಬಿಗ್ ಬಾಸ್ ಮನೆಯಿಂದ ಫೈರ್ ಬ್ರಾಂಡ್ ಔಟ್ ?  title=

ಬೆಂಗಳೂರು : ಬಿಗ್ ಬಾಸ್ 11 ಆರಂಭವಾಗಿ  ಮೂರು ದಿನಗಳಾಗಿವೆ. ಈ ಬಾರಿ 17 ಸ್ಪರ್ಧಿಗಳು ಬಿಗ್ ಬಾಸ್ ಮನೆ ತಲುಪಿದ್ದಾರೆ. ಈ ಸ್ಪರ್ಧಿಗಳ ಪೈಕಿ ಚೈತ್ರ ಕುಂದಾಪುರ್ ಕೂಡಾ ಒಬ್ಬರು. ಇದೀಗ ಚೈತ್ರ ಕುಂದಾಪುರ್ ಗೆ ಕಾನೂನು ಸಂಕಷ್ಟ ಎದುರಾಗಿದೆ. ಇವರ ಮೇಲಿರುವ ಹಳೆಯ ದೂರುಗಳೇ ಇವರು ಕಾರ್ಯಕ್ರಮದಲ್ಲಿ ಮುಂದುವರೆಯುವುದಕ್ಕೆ ಮುಳ್ಳಾಗುತ್ತಿರುವಂತೆ ಕಾಣುತ್ತಿದೆ. 

ಇದೀಗ ಚೈತ್ರ ಕುಂದಾಪುರ್ ಅವರನ್ನು ಬಿಗ್ ಬಾಸ್ ಆಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಕಲರ್ಸ್ ವಾಹಿನಿಗೆ ನೋಟೀಸ್ ಕಳುಹಿಸಲಾಗಿದೆ. ವಕೀಲ ಭೋಜರಾಜ್ ಎನ್ನುವವರು ಚೈತ್ರ ಕುಂದಾಪುರ್ ಅವರನ್ನು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊಇರ ಕಳುಹಿಸಬೇಕು. ಇಲ್ಲವಾದರೆ ವಾಹಿನಿ ವಿರುದ್ದ ಕಾನೂನು ಕ್ರಮ ಜರಗಿಸುವುದಾಗಿ ಎಚ್ಚರಿಸಿದ್ದಾರೆ. 

ಇದನ್ನೂ ಓದಿ : BBK11: ಬಿಗ್‌ಬಾಸ್‌ ಮನೆ ಎಂಟ್ರಿಯಲ್ಲೇ ಶುರುವಾಯ್ತಾ ಲವ್!? ಈ ಕ್ಯೂಟೆಸ್ಟ್‌ ರೂಮರ್ಡ್‌ ಜೋಡಿಗೆ ಸಿಕ್ತು ಪ್ರೇಕ್ಷಕರಿಂದ ಫುಲ್‌ ಸಪೋರ್ಟ್!!‌

 ಚೈತ್ರ ಕುಂದಾಪುರ್ ವಿರುದ್ದ ಗಲಾಟೆ, ದೊಂಬಿ, ಜೀವ ಬೆದರಿಕೆ ವಂಚನೆ ಮುಂತಾದ ಪ್ರಕರಣಗಳು ದಾಖಲಾಗಿದ್ದು, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಕಾರ್ಯಕ್ರಮದಲ್ಲಿ  ಭಾಗವಹಿಸಲು ಅವಕಾಶ ಕೊಟ್ಟಿರುವ ಬಗ್ಗೆ ನೋಟೀಸ್ ನಲ್ಲಿ ಪ್ರಶ್ನಿಸಲಾಗಿದೆ. 

ಚೈತ್ರ ಮೇಲೆ ಸಾಕಷ್ಟು ಕೇಸ್ ಗಳಿವೆ. ಇಷ್ಟಿದ್ದರೂ ಅವರನ್ನು ಸ್ಪರ್ಧಿಯಾಗಿ  ಮುಂದುವರೆಸಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಈ ಕೂಡಲೇ ಅವರನ್ನು Bigboss ನಿಂದ ಹೊರಕಳಿಸುವಂತೆ ಮನವಿ ಮಾಡಲಾಗಿದೆ. ಇದೀಗ ವಕೀಲ ಭೋಜರಾಜ್ ಕಲರ್ಸ್ ಕನ್ನಡಕ್ಕೆ ಬರೆದಿರೋ ಪತ್ರ ವೈರಲ್ ಆಗಿದೆ. 

ಇದನ್ನೂ ಓದಿ : ಗನ್‌ʼನಿಂದ ಶೂಟ್ ಮಾಡಿಕೊಂಡ ನಟ ಗೋವಿಂದ.. ಐಸಿಯುಗೆ ದಾಖಲು!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News