Orchestra Mysuru: ಹಳ್ಳಿ ಹುಡುಗನ ಗಾಂಧಿ ನಗರದ ಕಥೆ, ಭಾವುಕನಾದ ಗಾಯಕ ನವೀನ ಸಜ್ಜು

ನಿಮಗೆ ಆರ್ಕೆಸ್ಟ್ರಾ ಮೈಸೂರು ಚಿತ್ರದಲ್ಲಿ ನವೀನ ಸಜ್ಜು ಪಾತ್ರವೇನು ಎಂದು ಕೂತುಹಲ ಮೂಡಬಹುದು, ಹೌದು, ಇದು ನವೀನ ಸಜ್ಜು ಜೀವನ ಕಥನವನ್ನು ಆಧರಿಸಿ ನಿರ್ಮಾಣವಾಗಿರುವ ಸಿನಿಮಾ.ಈಗ ರಾಷ್ಟ್ರೀಯ ಯುವ ದಿನದಂದು ಬಿಡುಗಡೆಯಾಗಿರುವ ಈ ಚಿತ್ರ ರಾಜ್ಯದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.ಈ ಹಿನ್ನೆಲೆಯಲ್ಲಿ ಈಗ ತನ್ನದೇ ಕಥೆ ಬೆಳ್ಳಿ ತೆರೆಯಲ್ಲಿ ಮೂಡಿ ಬಂದಿರುವ ಬಗ್ಗೆ ಗಾಯಕ ನವೀನ ಸಜ್ಜು ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

Written by - Zee Kannada News Desk | Last Updated : Jan 12, 2023, 06:11 PM IST
  • ನಿಮಗೆ ಆರ್ಕೆಸ್ಟ್ರಾ ಮೈಸೂರು ಚಿತ್ರದಲ್ಲಿ ನವೀನ ಸಜ್ಜು ಪಾತ್ರವೇನು ಎಂದು ಕೂತುಹಲ ಮೂಡಬಹುದು,
  • ಹೌದು, ಇದು ನವೀನ ಸಜ್ಜು ಜೀವನ ಕಥನವನ್ನು ಆಧರಿಸಿ ನಿರ್ಮಾಣವಾಗಿರುವ ಸಿನಿಮಾ.
  • ಈಗ ರಾಷ್ಟ್ರೀಯ ಯುವ ದಿನದಂದು ಬಿಡುಗಡೆಯಾಗಿರುವ ಈ ಚಿತ್ರ ರಾಜ್ಯದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
Orchestra Mysuru: ಹಳ್ಳಿ ಹುಡುಗನ ಗಾಂಧಿ ನಗರದ ಕಥೆ, ಭಾವುಕನಾದ ಗಾಯಕ ನವೀನ ಸಜ್ಜು title=

ಬೆಂಗಳೂರು: ಆ  ಹುಡುಗ ಮದುವೆ ಸಮಾರಂಭವಾಗಲಿ ಗಣೇಶ್ ಉತ್ಸುವವಾಗಲಿ ಹೀಗೆ ಯಾವುದೇ ಕಾರ್ಯಕ್ರಮ ಮೈಸೂರಿನಲ್ಲಿ ಜರುಗಿದರೂ, ಅಲ್ಲಿ ರಸಮಂಜರಿ ಕಾರ್ಯಕ್ರಮ ನೀಡುತ್ತಾ ಮೈಸೂರಿನ ಆರ್ಕೆಸ್ಟ್ರಾ ವಲಯದಲ್ಲಿ ಆತ ತನ್ನದೇ ಆದ ಹೆಗ್ಗುರತನ್ನು ಸೃಷ್ಟಿಸಿಕೊಂಡಿದ್ದ, ಅದು ಜೀವನೋಪಾಯದ ಮಾರ್ಗವೇನೋ ನಿಜ, ಆದರೆ ಇದೆಲ್ಲವೂ ಬರಿ ಆರ್ಕೆಸ್ಟ್ರಾಗೆ ಸೀಮಿತವಾಗದೆ ಅದು ರಂಗಭೂಮಿ, ಜನಪದ, ಸಾಹಿತ್ಯಕ್ಕೆ ವಿಸ್ತರಿಸಿಕೊಂಡಿತ್ತು, ಆತನಿಗಿದ್ದ ಈ ಸೃಜನಶೀಲತೆ ಸಾಮಾನ್ಯ ಹಳ್ಳಿ ಹುಡುಗನ ತಳಮಳದೊಂದಿಗೆ ರೂಪಿತವಾಗಿರುವಂತದ್ದು. ಈಗ ಅಂತಹ ಹುಡುಗ ಸ್ಯಾಂಡಲ್ ವುಡ್ ನಿಂದ ಹಿಡಿದು ದೂರದ ಅಮೇರಿಕಾ, ಹಾಗೂ ಇನ್ನಿತರ ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಮಟ್ಟಕ್ಕೆ ಬೆಳೆದಿದ್ದಾನೆ. ಹೌದು ಈಗ ನಾವು ನಿಮಗೆ ಹೇಳಹೊರಟಿರುವುದು ಮಂಡ್ಯದ ಬೆಳಕೇರಿ ಗ್ರಾಮದ ಹುಡುಗನಾದ ಹಿನ್ನಲೆ ಗಾಯಕ ನವೀನ ಸಜ್ಜು ಕಥೆ...!

ನಿಮಗೆ ಆರ್ಕೆಸ್ಟ್ರಾ ಮೈಸೂರು ಚಿತ್ರದಲ್ಲಿ ನವೀನ ಸಜ್ಜು ಪಾತ್ರವೇನು ಎಂದು ಕೂತುಹಲ ಮೂಡಬಹುದು, ಹೌದು, ಇದು ನವೀನ ಸಜ್ಜು ಜೀವನ ಕಥನವನ್ನು ಆಧರಿಸಿ ನಿರ್ಮಾಣವಾಗಿರುವ ಸಿನಿಮಾ.ಈಗ ರಾಷ್ಟ್ರೀಯ ಯುವ ದಿನದಂದು ಬಿಡುಗಡೆಯಾಗಿರುವ ಈ ಚಿತ್ರ ರಾಜ್ಯದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.ಈ ಹಿನ್ನೆಲೆಯಲ್ಲಿ ಈಗ ತನ್ನದೇ ಕಥೆ ಬೆಳ್ಳಿ ತೆರೆಯಲ್ಲಿ ಮೂಡಿ ಬಂದಿರುವ ಬಗ್ಗೆ ಗಾಯಕ ನವೀನ ಸಜ್ಜು ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

"ಆಕ್ರೇಸ್ಟ್ರಾ ಮೈಸೂರು"

ಆಕ್ರೇಸ್ಟ್ರಾ ಸಿನಿಮಾ ನೋಡುವಾಗ ಪ್ರತಿ ಕ್ಷಣವೂ ನನ್ನನ್ನು ನಾನೇ ತೆರೆಯ ಮೇಲೆ ನೋಡಿಕೊಳ್ಳುತ್ತಾ ಇದ್ದೆ. ಇದು ಸಿನಿಮಾನೋ ಅಥವಾ ನಿಜವಾಗಿಯೂ ನಮ್ ಮುಂದೆ ನಡೆಯುತ್ತಿರುವ ಕನಸೋ, ನನಸೋ, 15 ವರ್ಷಗಳ ಹಿಂದೆ ನನ್ ಹಿಂದೆನೇ ಕ್ಯಾಮೆರಾ ಕಟ್ಟಿದ್ದಾರೋ ಎಂದು confusion ಆಗಿದ್ದಂತು ಸುಳ್ಳಲ್ಲ.

ಮೈಸೂರಿನ ಗಲ್ಲಿ, ಗಲ್ಲಿಯಲ್ಲಿ ಆಕ್ರೇಸ್ಟ್ರಾ ಕಟ್ಟುವಾಗ ಓಡಾಡಿದ್ದು, ಶೋಗಳನ್ನು ನೀಡಿದ ಜಾಗ, ಅವಮಾನ, ಸ್ಮನ್ಮಾನ, ಸೋಲು- ಗೆಲುವು, ಹತಾಶೆ, ಪ್ರೀತಿ, ಜನಪ್ರಿಯತೆ, ಹಣ, ಜಿದ್ದು, ಕೋಪ, ಅಸೂಯೆ, ಜೀವನ ಪ್ರೀತಿ, ದಬ್ಬಾಳಿಕೆ, ಕುಟುಂಬ, ಸಮಾಜ, ಸಮುದಾಯ, ಒಂದು ನಗರ, ಆ ನಗರದ ಒಳಗೆ ಇರುವ ನೂರಾರು ಜನರ ಕಥೆಗಳು ಹೀಗೆ ಒಂದಾ- ಎರಡ ಎಲ್ಲಾ expressionಗಳು ಈ life story ಯಲ್ಲಿ ಬಂದು ಹೋಗುತ್ತವೆ.

ಸಿನಿಮಾದ ಪಾತ್ರಗಳು ಕೇವಲ ತೆರೆಯ ಮೇಲೆ ಬಂದು ಹೋಗುವುದಿಲ್ಲ "ಇವೆಲ್ಲ ನಮ್ಮ ಸುತ್ತ ನಡೆದಿತ್ತಲ್ಲ" ಈ ತರದ ಪಾತ್ರ ನಮ್ಮೂರಲ್ಲೂ ಇದ್ವಲ್ಲ ಎಂದು ಅನಿಸದೆ ಇರದು.

ಈ ಸಿನಿಮಾ ಪ್ರಯಾಣ ಶುರು ಆಗಿದ್ದನ್ನೇ ಇನ್ನೊಂದು ಕಥೆ ಮಾಡಬಹುದು. ನನ್ನ ಬದುಕಿನ ಘಟನೆಗಳನ್ನ ಇಷ್ಟು ಸುಂದರವಾಗಿ ಹೆಣೆದು, ನಾನೇ ತೆರೆಯ ಮೇಲೆ ಇದ್ದಿನೊ, ಏನೋ ಅನ್ನುವಷ್ಟರ ಮಟ್ಟಿಗೆ ಗೆಳೆಯ, ನಿರ್ದೇಶಕ ಸುನೀಲ್ ಮೈಸೂರು ಸಮರ್ಥವಾಗಿ ಇಡೀ ಮೈಸೂರನ್ನೇ ನಟನೆ ಮಾಡಿಸಿದ್ದಾರೆ.

ರಘು ದೀಕ್ಷಿತ್ ಅವರಂತೂ ತಮ್ಮ ಸಂಗೀತ ಎನ್ನುವ ಕಬ್ಬನ್ನು ಹಿಂಡಿ, ಹಿಂಡಿ ರಸವತ್ತಾದ ಕಬ್ಬಿನ ಹಾಲು ಕುಡಿಸಿದ್ದಾರೆ.

ಈ ಸಿನಿಮಾದ ಇನ್ನೊಂದು ವಿಶೇಷ ಎಂದರೆ ಯಾರು, ಯಾರು ನಟನೆ ಮಾಡಿದ್ದಾರೆ ಎನ್ನುವುದು ಸ್ವತಃ ನಟನೆ ಮಾಡಿದವರಿಗೆ ಗೊತ್ತಿಲ್ಲ. ನಿರ್ದೇಶಕರೇ ಹೇಳುವಂತೆ ಇಡೀ ಮೈಸೂರಿಗೆ ಕ್ಯಾಮೆರಾ ಇಟ್ಟಿರುವುದರಿಂದ ಎಷ್ಟೊಂದು ಜನರು ತಮಗೆ ಗೊತ್ತಿಲ್ಲದಂಗೆ ಈ ಸಿನಿಮಾದಲ್ಲಿ ಪಾತ್ರವಾಗಿ ಬಿಟ್ಟಿದ್ದಾರೆ.

ಒಂದೊಳ್ಳೆ ಕನ್ನಡ ಚಿತ್ರ ಇವತ್ತಿಂದ ನಿಮ್ಮೂರಿಗೆ ಬರ್ತಾ ಇದೆ. ಸಂಕ್ರಾಂತಿಗೆ ಎಳ್ಳು ಬೆಲ್ಲ ತಿನ್ನುತ್ತಾ ಒಳ್ಳೊಳ್ಳೆ ಮಾತನಾಡುತ್ತಾ, ಇನ್ನ್ಯಾರೋ ಬಂದು ನಮ್ಮ ಕನ್ನಡ ನೆಲದ ಸಿನಿಮಾವನ್ನ ದಬ್ಬಾಳಿಕೆ ಮಾಡುವ ಬದಲು ಸಂಕ್ರಾಂತಿಗೆ ಕಿಚ್ಚು ಹಾಯಿಸೋಣ.

ಎಲ್ಲಾ ಬಂದು ಇವತ್ತೇ ಸಿನಿಮಾ ನೋಡಿ, ಎಳ್ಳು ಬೆಲ್ಲದಷ್ಟೇ ಸಿನಿಮಾ ಸವಿಯಾಗಿದೆ.

ಧನ್ಯವಾದಗಳು

ಪ್ರೀತಿಯಿಂದ ನವೀನ್ ಸಜ್ಜು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News