ಆಸ್ಕರ್ ವಿಜೇತ ಕಲಾ ನಿರ್ದೇಶಕ ಟೆರೆನ್ಸ್ ಮಾರ್ಷ್ ಇನ್ನಿಲ್ಲ

   

Last Updated : Jan 13, 2018, 12:40 PM IST
ಆಸ್ಕರ್ ವಿಜೇತ ಕಲಾ ನಿರ್ದೇಶಕ ಟೆರೆನ್ಸ್ ಮಾರ್ಷ್ ಇನ್ನಿಲ್ಲ  title=
ಸಂಗ್ರಹ ಚಿತ್ರ

ವಾಷಿಂಗ್ಟನ್: ಎರಡು ಬಾರಿ ಆಸ್ಕರ್ ಪ್ರಶಸ್ತಿ ಪಡೆದಿದ್ದ  ನಿರ್ಮಾಣ ವಿನ್ಯಾಸಕ ಮತ್ತು ಕಲಾ ನಿರ್ದೇಶಕ ಟೆರೆನ್ಸ್ ಮಾರ್ಷ್ ಅವರು ತಮ್ಮ  86 ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.

ದಿ ಹಾಲಿವುಡ್ ರಿಪೋರ್ಟರ್ನ ಪ್ರಕಾರ, ನಾಲ್ಕು ವರ್ಷಗಳ ಕಾಲ  ಕ್ಯಾನ್ಸರ್ ನಿಂದ ಬಳಲುತ್ತಿದ್ದ  ಮಾರ್ಷ್   ಮಂಗಳವಾರ ರಂದು   ಪೆಸಿಫಿಕ್ ಪ್ಯಾಲಿಸೇಡ್ಸ್ನಲ್ಲಿ ನಿಧನರಾದರು ಎಂದು  ಅವರ ಪತ್ನಿ, ಏಜೆಂಟ್ ಸಾಂಡ್ರಾ ಮಾರ್ಶ್ ತಿಳಿಸಿದ್ದಾರೆ. ಡೇವಿಡ್ ಲೀನ್ನ ಪ್ರಣಯ ಮಹಾಕಾವ್ಯ 'ಡಾಕ್ಟರ್ ಝಿಗೊಗೊ' ಮತ್ತು ಕರೋಲ್ ರೀಡ್ನ 1968 ರ ಸಂಗೀತ 'ಆಲಿವರ್!' ನಲ್ಲಿ ಕಲಾ ನಿರ್ದೇಶಕರಾಗಿ  ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದರು ಮತ್ತು ಮೂರು ಬಾಫ್ಟಾ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದ್ದರು.

2010 ರಲ್ಲಿ, ಆರ್ಟ್ಸ್ ಡೈರೆಕ್ಟರ್ಸ್ ಗಿಲ್ಡ್ನಿಂದ ಜೀವಮಾನದ ಸಾಧನೆಯ ಪ್ರಶಸ್ತಿಯನ್ನು ಮಾರ್ಶ್ ಗೆ ಗೌರವಿಸಲಾಯಿತು.

Trending News