ಪಾಕ್ ಯೂಟ್ಯೂಬರ್ ಖಾಸಗಿ ವಿಡಿಯೋ ವೈರಲ್..! ತನಿಖಾ ಸಂಸ್ಥೆ ಮೊರೆ ಹೋದ ಅಲಿಜಾ ಸಹರ್

Pakistani YouTuber private video viral: ದಿನೆ ದಿನೇ ಅಪಾಯಕಾರಿ ಎನ್ನಿಸುತ್ತಿರುವ ಸೋಷಿಯಲ್‌ ಮಿಡಿಯಾಗಳು ಸದ್ಯ ಜನರ ಖಾಸಗಿ ಜೀವನಕ್ಕೆ ಧಕ್ಕೆ ತರುತ್ತಿವೆ. ಅದೇ ರೀತಿ ಇದೀಗ ಪಾಕಿಸ್ತಾನದ ಫೇಮಸ್ ಯೂಟ್ಯೂಬರ್ ಖಾಸಗಿ ವಿಡಿಯೋ ಲೀಕ್‌ ಆಗಿ ಸಖತ್‌ ವೈರಲ್‌ ಆಗುತ್ತಿದೆ. 

Written by - Savita M B | Last Updated : Oct 29, 2023, 02:04 PM IST
  • ಅಲಿಜಾ ಸಹರ್‌ ಅವರು ಪಾಕಿಸ್ತಾನ್‌ ಮೂಲದ ಫೇಮಸ್‌ ಯುಟ್ಯೂಬರ್‌
  • ಪಾಕಿಸ್ತಾನದ ಹಳ್ಳಿ ಜೀವನವನ್ನು ಯುಟ್ಯೂಬ್‌ ವಿಡಿಯೋಗಳ ಮೂಲಕ ತೋರಿಸುತ್ತಿದ್ದರು.
  • ಇದೀಗ ಇವರದ್ದೇ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪಾಕ್ ಯೂಟ್ಯೂಬರ್ ಖಾಸಗಿ ವಿಡಿಯೋ ವೈರಲ್..! ತನಿಖಾ ಸಂಸ್ಥೆ ಮೊರೆ ಹೋದ ಅಲಿಜಾ ಸಹರ್ title=

Pakistani YouTuber: ಅಲಿಜಾ ಸಹರ್‌ ಅವರು ಪಾಕಿಸ್ತಾನ್‌ ಮೂಲದ ಫೇಮಸ್‌ ಯುಟ್ಯೂಬರ್‌ ಆಗಿದ್ದು, ಪಾಕಿಸ್ತಾನದ ಹಳ್ಳಿ ಜೀವನವನ್ನು ಯುಟ್ಯೂಬ್‌ ವಿಡಿಯೋಗಳ ಮೂಲಕ ತೋರಿಸುತ್ತಿದ್ದರು. ಇದೀಗ ಇವರದ್ದೇ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಯೂಟ್ಯೂಬ್‌ ಚಾನೆಲ್‌ ಮೂಲಕ ಜನಪ್ರಿಯತೆ ಪಡೆದುಕೊಂಡ ಅಲಿಜಾ ಸುಮಾರು ಒಂದು ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದಾರೆ. ಇವರು ತಮ್ಮ ವಿಡಿಯೋಗಳಲ್ಲಿ ಪಾಕಿಸ್ತಾನದಲ್ಲಿ ಹಳ್ಳಿ ಜನರ ಜೀವನ ಹೇಗಿರುತ್ತದೆ.. ಅಲ್ಲಿನ ಸಂಸ್ಕೃತಿ.. ಅಡುಗೆ ವಿಧಾನ ಇಂತಹ ಉತ್ತಮ ಕಂಟೆಂಟ್‌ ಆಧಾರಿತ ವಿಡಿಯೋಗಳನ್ನು ಮಾಡುತ್ತಿದ್ದರು. 

ಇದನ್ನೂ ಓದಿ-ವರುಣ್ ತೇಜ್-ಲಾವಣ್ಯ ಲಗ್ನಪತ್ರಿಕೆ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!

ಇಷ್ಟೆಲ್ಲಾ ಫೇಮಸ್‌ ಆಗಿರುವ ಅಲಿಜಾ ಸಹರ್ ಈಗ ಸಂಕಷ್ಟದಲ್ಲಿ ಸಿಕ್ಕಿಕೊಂಡಿದ್ದಾರೆ. ಹೌದು ಅವರ ಖಾಸಗಿ ವಿಡಿಯೋವೊಂದು ಲೀಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಏನಿದೆ ಆ ವಿಡಿಯೋದಲ್ಲಿ ಅಂತೀರಾ ಇಲ್ಲಿದೆ ಉತ್ತರ..

ಇದನ್ನೂ ಓದಿ-'Friends' ಖ್ಯಾತಿಯ ನಟ ಮ್ಯಾಥ್ಯೂ ಪೆರ್ರಿ ಅನುಮಾನಾಸ್ಪದ ಸಾವು.!

ಅಲಿಜಾ ಸಹರ್‌ ವಿಡಿಯೋ ಕಾಲ್‌ನಲ್ಲಿ ವ್ಯಕ್ತಿಯೊಬ್ಬರ ಜೊತೆ ಮಾತು ಕಥೆ ನಡೆಸಿದ್ದರು..ಅದೇ ವೇಳೆ ಎಲ್ಲವನ್ನು ಕಾಲ್‌ನಲ್ಲಿ ರೆಕಾರ್ಡ್‌ ಮಾಡಿದ ಆ ವ್ಯಕ್ತಿ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾ ನೆಂದು ವರದಿಯಾಗಿದೆ. 

ಅಲಿಜಾ ಸಹರ್ ವಿಡಿಯೋ ಕಾಲ್‌ನಲ್ಲಿ ತಮ್ಮ ದೇಹವನ್ನು ಪ್ರದರ್ಶಿಸುವ ದೃಶ್ಯಗಳು ಹಾಗೂ ಕೆಲವು ಅಶ್ಲೀಲ ಮಾತುಗಳಿವೆ ಎನ್ನಲಾಗುತ್ತಿದೆ. ಇದರಿಂದ ಪಾಕಿಸ್ತಾನದ ಯೂಟ್ಯೂಬರ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಅಲಿಜಾ ಸಹರ್ ಪ್ರತಿಕ್ರಿಯಿಸಿ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಮೊರೆ ಹೋಗಿದ್ದಾರೆ. ತಮ್ಮ ಖಾಸಗಿ ವಿಡಿಯೋವನ್ನು ಲೀಕ್ ಮಾಡಿದವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ. ಸದ್ಯ ಏಜನ್ಸಿ ಆ ವ್ಯಕ್ತಿ ಕತಾರ್‌ನಲ್ಲಿ ನೆಲೆಸಿದ್ದಾರೆ ಎನ್ನುವ ಮಾಹಿತಿಯೊಂದನ್ನು ನೀಡಿದೆ ಎಂದು ಅಲಿಜಾ ತನ್ನ ವೀಕ್ಷಕರಿಗೆ ತಿಳಿಸಿದ್ದಾರೆ. ಇದಲದೇ ಸೈಬರ್ ಕ್ರೈಂ ತಂಡ ಸಹ ತನ್ನ ಸಹಾಯಕ್ಕೆ ನಿಂತಿದೆ..ಜೊತೆಗೆ ಕೆಟ್ಟ ದಿನಗಳಲ್ಲಿ ತಮ್ಮ ಪರವಾಗಿ ನಿಂತ ಅನ್‌ಲೈನ್ ಕಮ್ಯೂನಿಟಿಗಳಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News