ಅನುಷ್ಕಾ, ದೀಪಿಕಾಗೆ ಕಾಫಿ ಆರ್ಡರ್ ಮಾಡುತ್ತಿದ್ದ ಈಕೆ ಇಂದು ಬಾಲಿವುಡ್ ನ ಸ್ಟಾರ್ ನಟಿ!ಅದೃಷ್ಟ ಬದಲಿಸಿದ್ದು ಆ ಒಂದು ಫೋನ್ ಕಾಲ್

ಒಂದು ಕಾಲದಲ್ಲಿ ಪರಿಣಿತಿ ಚೋಪ್ರಾ ಹಿಂದೆ ರಣವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ಅವರ ಸಂದರ್ಶನಗಳನ್ನು ಲೈನ್ ಅಪ್ ಮಾಡುತ್ತಿದ್ದರಂತೆ. ಆಗ ನಟ ನಟಿಯರಿಗಾಗಿ ಕಾಫಿ ಆರ್ಡರ್ ಮಾಡುವ ಕೆಲಸವೂ ಪರಿಣಿತಿದ್ದಾಗಿತ್ತು.    

Written by - Ranjitha R K | Last Updated : Apr 29, 2024, 10:36 AM IST
  • ಪ್ರೇಕ್ಷಕರಿಂದ ವಿಮರ್ಶಕರವರೆಗೆ ಮೆಚ್ಚುಗೆಗೆ ಪಾತ್ರವಾಗಿರುವ ನಟಿ ಪರಿಣಿತಿ ಚೋಪ್ರಾ
  • YRF ಕಚೇರಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದ ನಟಿ
  • ಒಂದು ಫೋನ್ ಕರೆಯಿಂದ ಬದಲಾಯಿತು ವೃತ್ತಿಜೀವನ
ಅನುಷ್ಕಾ, ದೀಪಿಕಾಗೆ ಕಾಫಿ ಆರ್ಡರ್ ಮಾಡುತ್ತಿದ್ದ ಈಕೆ ಇಂದು ಬಾಲಿವುಡ್ ನ ಸ್ಟಾರ್ ನಟಿ!ಅದೃಷ್ಟ ಬದಲಿಸಿದ್ದು ಆ ಒಂದು ಫೋನ್ ಕಾಲ್  title=

Parineeti Chopra : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಇತ್ತೀಚಿನ ದಿನಗಳಲ್ಲಿ 'ಅಮರ್ ಸಿಂಗ್ ಚಮ್ಕಿಲಾ'ಚಿತ್ರದಿಂದಾಗಿ ಸುದ್ದಿಯಲ್ಲಿದ್ದಾರೆ. ಪ್ರೇಕ್ಷಕರಿಂದ ವಿಮರ್ಶಕರವರೆಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಪರಿಣಿತಿ ಚೋಪ್ರಾ, ಇತ್ತೀಚೆಗೆ ಸಂದರ್ಶನವೊಂದನ್ನು ನೀಡಿದ್ದಾರೆ.ಪರಿಣಿತಿ ಚೋಪ್ರಾ ಅವರು YRF ಕಚೇರಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದ ಸದರ್ಭದ ಕೆಲವು ಘಟನೆಗಳನ್ನು ಇಲ್ಲಿ ಎಲುಕು ಹಾಕಿದ್ದಾರೆ. ಪರಿಣಿತಿ ಚೋಪ್ರಾ ಹಿಂದೆ ರಣವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ಅವರ ಸಂದರ್ಶನಗಳನ್ನು  ಲೈನ್ ಅಪ ಮಾಡುತ್ತಿದ್ದರಂತೆ. 

YRF ಕಚೇರಿಯಲ್ಲಿ ಇಂಟರ್ನ್ ಆಗಿದ್ದ ಪರಿಣಿತಿ ಚೋಪ್ರಾ :
ಪರಿಣಿತಿ ಚೋಪ್ರಾ ಇತ್ತೀಚೆಗೆ ರಾಜ್ ಶಾಮ್ ಅವರ ಪಾಡ್‌ಕಾಸ್ಟ್‌ಗಾಗಿ  ಸಂದರ್ಶನ ನೀಡಿದ್ದರು. ಈ ಸಂದರ್ಭದಲ್ಲಿ ಪರಿಣಿತಿ ಕೆಲವು ವಿಚಾರಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.'ದಿಲ್ ಬೋಲೆ ಹಡಿಪ್ಪಾ, ದೀಪಿಕಾ ಪಡುಕೋಣೆ-ನೀಲ್ ನಿತಿನ್ ಮುಖೇಶ್ ಅವರ ಲಫಂಗೆ ಪರಿಂದೇ ಮತ್ತು ಅನುಷ್ಕಾ ಶರ್ಮಾ-ಶಾಹಿದ್ ಕಪೂರ್ ಅವರ ಬದ್ಮಾಶ್ ಕಂಪನಿಗಾಗಿ ಪ್ರಚಾರ ಮಾಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಪರಿಣಿತಿ ನಟಿಯಾಗುವ ಮುನ್ನ ಈ ಎಲ್ಲಾ ನಟ- ನಟಿಯರ  ಸಂದರ್ಶನಗಳನ್ನು ಮಾಧ್ಯಮಗಳಿಗೆ ಲೈನ್ ಅಪ್ ಮಾಡುತ್ತಿದ್ದರಂತೆ.ಈ ಸಂದರ್ಭದಲ್ಲಿ ಅವರಿಗಾಗಿ ಕಾಫಿ ಆರ್ಡರ್ ಮಾಡುತ್ತಿದ್ದರಂತೆ.ಇಂಟರ್ನ್ ಆಗಿ ಪರಿಣಿತಿ ಪ್ರಚಾರ ಮಾಡಿದ ಕೊನೆಯ ಚಿತ್ರವೇ ಬ್ಯಾಂಡ್ ಬಾಜಾ ಬಾರಾತ್.

ಇದನ್ನೂ ಓದಿ :  Haripriya - Vasishta: ಐಷಾರಾಮಿ ಕಾರು ಖರೀದಿಸಿದ ಸಿಂಹಪ್ರಿಯಾ ದಂಪತಿ: ಇದರ ಬೆಲೆ ಹಾಗೂ ವಿಶೇಷತೆಗಳೇನು ಗೊತ್ತೇ??

ಒಂದು ಫೋನ್ ಕರೆಯಿಂದ ಬದಲಾಯಿತು ವೃತ್ತಿಜೀವನ  :
YR ನಲ್ಲಿ ಇಂಟರ್ನ್ ಆಗಿರುವಾಗ ಯಾವ ಪತ್ರಕರ್ತರಿಗಾಗಿ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಏರ್ಪಡಿಸುತ್ತಿದ್ದರೋ ಅವರೇ ಈಗ ಪರಿಣಿತಿ ಸಂದರ್ಶನ ನಡೆಸುವಂತಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಪರಿಣಿತಿ.ಪರಿಣಿತಿ ಚೋಪ್ರಾ ಯಶ್ ರಾಜ್ ಫಿಲಂಸ್ ನಲ್ಲಿ ಸುಮಾರು ಒಂದೂವರೆ ವರ್ಷ ಕೆಲಸ ಮಾಡಿದ್ದರು.ನಂತರ ಅಲ್ಲಿ ಕೆಲಸ ಬಿಟ್ಟ ಕೆಲವು ದಿನಗಳ ನಂತರ,ಆದಿತ್ಯ ಚೋಪ್ರಾ ಪರಿಣಿತಿಗೆ ಕರೆ ಮಾಡಿದ್ದಾರೆ.  

ಮೂರು ಚಿತ್ರಗಳ ಆಫರ್  : 
ಕಾಸ್ಟಿಂಗ್ ಡೈರೆಕ್ಟರ್ ಶಾನು ಶರ್ಮಾ ಅವರ ಆಡಿಷನ್ ಟೇಪ್ ಅನ್ನು ನೋಡಿದ ನಂತರ, ಆದಿತ್ಯ ಚೋಪ್ರಾ ಪರಿಣಿತಿಗೆ ಮೂರು ಚಿತ್ರಗಳನ್ನು ಆಫರ್ ಮಾಡಿದ್ದರಂತೆ. 'ಇಶಕ್ಜಾದೆ', 'ಹಸೀ ತೋ ಫಾಸೀ' ಮತ್ತು 'ಮೇರಿ ಪ್ಯಾರಿ ಬಿಂದು' ಚಿತ್ರಗಳ ಮೂಲಕ ಪರಿಣಿತಿ ಪ್ರೇಕ್ಷಕರ ಮೆಚ್ಚಿಗೆ ಗಳಿಸಿದರು.ಪರಿಣಿತಿ ಚೋಪ್ರಾ ಯಶ್ ರಾಜ್ ಫಿಲ್ಮ್ಸ್‌ನೊಂದಿಗೆ 11 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ : ನಟನ ಜೊತೆ ಲವ್.. ಕ್ರಿಕೆಟಿಗನ ಜೊತೆ ಸಂಬಂಧ.. ಮಗ ಹುಟ್ಟಿದ ಮೇಲೆ ಮದುವೆ.. ಯಾರು ಈ ನಟಿ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News