ವಿವಾದಗಳ ನಡುವೆಯೇ CET ಪರೀಕ್ಷೆಯಲ್ಲಿ ತೇರ್ಗಡೆಯಾದ ಪವಿತ್ರಾ ಲೋಕೇಶ್..ಬೆಳಗಾವಿಯಲ್ಲಿ ಪಿಎಚ್‌ಡಿ ರಿಸರ್ಚ್‌..!

Pavitra Lokesh Passed in CET Exam : ಸಿನಿಮಾ ನಟನೆಯ ಜತೆಗೆ ಶೈಕ್ಷಣಿಕ ವಿಚಾರದಲ್ಲಿಯೂ ಮುಂದಿರುವ ಬಹುಭಾಷಾ ನಟಿ ಪವಿತ್ರಾ ಲೋಕೇಶ್‌ ಪಿಎಚ್‌ಡಿ ಪದವಿ ಪಡೆಯುವುದಕ್ಕೆ ತಯಾರಿ ನಡೆಸಿದ್ದಾರೆ. ಇತ್ತೀಚೆಗೆ ಅದರ ಪ್ರವೇಶ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.   

Written by - Savita M B | Last Updated : Aug 5, 2023, 12:29 PM IST
  • ಪವಿತ್ರಾ ನರೇಶ್‌ ತಮ್ಮ ಶೈಕ್ಷಣಿಕ ಬದುಕಿಗೆ ಹೊಸ ತಿರುವನ್ನು ನೀಡಿದ್ದಾರೆ
  • ಇದೀಗ ಪಿಎಚ್‌ಡಿ ಪದವಿ ಆರಂಭಿಕ ಪ್ರವೇಶ ಪರೀಕ್ಷೆಯಲ್ಲಿ ಪವಿತ್ರಾ ತೇರ್ಗಡೆಯಾಗಿದ್ದಾರೆ.
  • ಇದೇ ಮೇ 30ರಂದು ನಡೆದ ಪಿಎಚ್‌ಡಿ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ ಪವಿತ್ರಾ ಲೋಕೇಶ್‌
ವಿವಾದಗಳ ನಡುವೆಯೇ CET ಪರೀಕ್ಷೆಯಲ್ಲಿ ತೇರ್ಗಡೆಯಾದ ಪವಿತ್ರಾ ಲೋಕೇಶ್..ಬೆಳಗಾವಿಯಲ್ಲಿ ಪಿಎಚ್‌ಡಿ ರಿಸರ್ಚ್‌..!  title=

Pavitra Lokesh : ಇತ್ತೀಚೆಗೆ ತೆಲುಗು ನಟ ನರೇಶ್‌ ಜತೆ ಕಾಣಿಸಿಕೊಂಡಿದ್ದರಿಂದ ಸದಾ ಸುದ್ದಿಯಲ್ಲಿರುವ ಪವಿತ್ರಾ ಲೋಕೆಶ್‌ ತಮ್ಮ ನಿಜ ಜೀವನವನ್ನೇ ತೆರೆಮೇಲೆ ತಂದು ಸಾಕಷ್ಟು ಗುಲ್ಲೆಬ್ಬಿಸಿದ್ದರು. ಇದೀಗ ಇದೆಲ್ಲದರ ನಡುವಯೇ ತಮ್ಮ ಶೈಕ್ಷಣಿಕ ಬದುಕಿಗೂ ಹೊಸ ತಿರುವನ್ನು ನೀಡಿ ಯಶಸ್ಸು ಪಡೆದುಕೊಂಡಿದ್ದಾರೆ.

ಕೇವಲ ನಟಿಯಾಗಿ ಗುರುತಿಸಿಕೊಳ್ಳುವುದಲ್ಲದೇ ಶೈಕ್ಷಣಿಕವಾಗಿಯೂ ದೃಢವಾಗಿವಾಗಿರುವ ನಟಿ ಪವಿತ್ರಾ ಲೋಕೇಶ್‌. ಇದೇ ಕಾರಣಕ್ಕೆ ಪಿಎಚ್‌ಡಿ ಪದವಿ ಪಡೆಯುವುದಕ್ಕೆ ಸಕಲ ತಯಾರಿಯನ್ನೂ ನಡೆಸಿದ್ದ ಅವರು ಇದೀಗ ಪಿಎಚ್‌ಡಿ ಪದವಿ ಆರಂಭಿಕ ಪ್ರವೇಶ ಪರೀಕ್ಷೆಯಲ್ಲಿ ಪವಿತ್ರಾ ತೇರ್ಗಡೆಯಾಗಿದ್ದಾರೆ. 

ಇದನ್ನೂ ಓದಿ-Shocking: ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ಖ್ಯಾತ ನಟಿ!

ಪಿಎಚ್‌ಡಿಗಾಗಿ ಪ್ರವೇಶ ಪರೀಕ್ಷೆ ಬರೆದವರ ಫಲಿತಾಂಶವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದೆ. ಒಟ್ಟು 980ಕ್ಕೂ ಹೆಚ್ಚು ಜನ ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದಿದ್ದರು. ಆ ಪೈಕಿ 259 ಮಂದಿ ತೇರ್ಗಡೆಯಾಗಿದ್ದಾರೆಂದು ವಿವಿ ಕುಲಸಚಿವ ಡಾ. ಸುಬ್ಬಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಇದೇ ಮೇ 30ರಂದು ನಡೆದ ಪಿಎಚ್‌ಡಿ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ ಪವಿತ್ರಾ ಲೋಕೇಶ್‌, ಬೆಳಗಾವಿ ವಿಸ್ತರಣಾ ಕೇಂದ್ರದಲ್ಲಿ ಸಂಶೋಧನಾ ಕೈಗೊಳ್ಳಲು ಪರೀಕ್ಷೆಯನ್ನು ಬರೆದಿದ್ದರು. ಅದರಂತೆ ಇದೀಗ ಆ ಸಿಯಟಿ ಪರೀಕ್ಷೆಯಲ್ಲಿ ಪವಿತ್ರಾ ಲೋಕೇಶ್‌ ಉತ್ತೀರ್ಣರಾಗಿದ್ದಾರೆ. 

ಇದನ್ನೂ ಓದಿ-Raj B. Shetty: ಹಿಸ್ಟರಿ ಕ್ರಿಯೇಟ್ ಮಾಡಲಿರುವ ‘ಟೋಬಿ’ ಸಿನಿಮಾದ ಟ್ರೈಲರ್ ಇಂದು ರಿಲೀಸ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News