ಖ್ಯಾತ ಬಾಲಿವುಡ್ ನಿರ್ದೇಶಕ Anurag Kashyap ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಪಾಯಲ್ ಘೋಷ್, ಅನುರಾಗ್ ಹೇಳಿದ್ದೇನು?

ನಟಿ ಪಾಯಲ್ ಘೋಷ ಖ್ಯಾತ ಬಾಲಿವುಡ್ ನಿರ್ದೇಶಕ 'ಅನುರಾಗ್ ಕಶ್ಯಪ್ ನನ್ನ ಮೇಲೆ ಬಲವಂತ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.

Updated: Sep 20, 2020 , 11:03 AM IST
ಖ್ಯಾತ ಬಾಲಿವುಡ್ ನಿರ್ದೇಶಕ Anurag Kashyap ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಪಾಯಲ್ ಘೋಷ್, ಅನುರಾಗ್ ಹೇಳಿದ್ದೇನು?

ನವದೆಹಲಿ: ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಪ್ರಕರಣದಲ್ಲಿ ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿದೆ. ನಟಿ ಪಾಯಲ್ ಘೋಷ್ ಅನುರಾಗ್ ಕಶ್ಯಪ್ ಅವರ ಟ್ವೀಟ್ ಅನ್ನು ಟ್ಯಾಗ್ ಮಾಡುವ ಮೂಲಕ 'ಅನುರಾಗ್ ಕಶ್ಯಪ್ ನನ್ನ ಮೇಲೆ ಬಲವಂತ ಮಾಡಿದ್ದರು. ನರೇಂದ್ರ ಮೋದಿ ಅವರೇ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ. ಇದರಿಂದ ಅಸಲಿಯತ್ತು ಏನಾಗಿದೆ ಎಂಬುದು ಇಡೀ ದೇಶಕ್ಕೆ ಗೊತ್ತಾಗಲಿ. ಇದರಿಂದ ನನಗೆ ಹಾನಿಯಾಗಲಿದೆ ಎಂಬುದು ನನಗೆ ತಿಳಿದಿದೆ ಹಾಗೂ ನಾನು ಅಪಾಯಕ್ಕೆ ಸಿಳುಕಲಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಿ' ಎಂದು ಆರೋಪ ಮಾಡಿದ್ದಾರೆ.

Also Read -'ABCD' ಚಿತ್ರ ಖ್ಯಾತಿಯ ಡಾನ್ಸರ್-ನಟ ಕಿಶೋರ್ ಡ್ರಗ್ಸ್ ಪ್ರಕರಣದಲ್ಲಿ ಬಂಧನ​


ಆದರೆ, ಇದುವರೆಗೆ ಪಾಯಲ್ ಘೋಷ್ ಅನುರಾಗ್ ಕಶ್ಯಪ್ ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಇನ್ನೊಂದೆಡೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಪ್ರಕರಣದಲ್ಲಿ ಅನುರಾಗ್ ಕಶ್ಯಪ್ ಅವರ ಮೇಲೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪಾಯಲ್ ಘೋಷ್ ಅವರಿಂದ ಪ್ರಕರಣದ ಸಂಪೂರ್ಣ ವಿವರಗಳನ್ನು ಕೇಳಿದ್ದಾರೆ . ಇನ್ನೊಂದೆಡೆ ನಟಿ ಕಂಗನಾ ರಣಾವತ್ ಕೂಡ ಪಯಾಲ್ ಅವರನ್ನು ಬೆಂಬಲಿ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್ ನಲ್ಲಿ #MeToo ಬರೆದು ಅನುರಾಗ್ ಕಶ್ಯಪ್ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
Also Read - VIDEO: PM Modi ಅವರಿಗೆ ಹುಟ್ಟುಹಬ್ಬದ ವಿಶ್ ಮಾಡಿದ Kangana Ranaut ಹೇಳಿದ್ದೇನು?​ಇದಾದ ಬಳಿಕ ಸರಣಿ ಟ್ವೀಟ್ ಗಳನ್ನೂ ಮಾಡಿರುವ ಅನುರಾಗ್ ಕಶ್ಯಪ್, "ಇನ್ನೂ ಸಾಕಷ್ಟು ದಾಳಿಗಳು ನಡೆಯಲಿವೆ. ಇದು ಕೇವಲ ಆರಂಭ. ನನಗೆ ಮಾತನಾಡದಿರಲು ಹಲವು ಕರೆಗಳು ಬಂದಿವೆ. ಎಲ್ಲಿಂದ ಬಾಣಗಳು ಬರಲಿವೆ ಎಂಬುದು ಗೊತ್ತಿಲ್ಲ. ನಿರೀಕ್ಷೆಯಲ್ಲಿದ್ದೇನೆ' ಎಂದಿದ್ದಾರೆ.
Also Read- ಕೇಂದ್ರ ಸರ್ಕಾರದ ವಿರುದ್ಧ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಾಗ್ದಾಳಿ