Poornima Enterprises: ಸಿನಿಮಾದಲ್ಲಿ ನಟಿಸುವ ಆಸಕ್ತಿ ಇದೆಯಾ? ಹಾಗಿದ್ರೆ ಇಲ್ಲಿದೆ ನಿಮಗೆ ಅವಕಾಶ!

ಪೂರ್ಣಿಮಾ ಎಂಟರ್‌ಪ್ರೈಸಸ್ ಸಂಸ್ಥೆಯಲ್ಲಿ ತಯಾರಾಗಲಿರುವ ಹೊಸ ಸಿನಿಮಾದಲ್ಲಿ ನಾಯಕಿ ನಟಿ ಪಾತ್ರಕ್ಕಾಗಿ  ಆಡಿಷನ್

Last Updated : Mar 28, 2021, 12:54 PM IST
  • ಕನ್ನಡ ಚಿತ್ರರಂಗದ ಯಶಸ್ವಿ ನಿರ್ಮಾಣ ಸಂಸ್ಥೆಯಲ್ಲಿ ಪೂರ್ಣಿಮಾ ಎಂಟರ್‌ಪ್ರೈಸಸ್ ಮೊದಲ ಸಾಲಿನಲ್ಲಿ ನಿಲ್ಲುತ್ತದೆ.
  • ಈ ಸಂಸ್ಥೆಯಡಿ ಬರಲಿರುವ ಹೊಸ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿದೆ.
  • ಪೂರ್ಣಿಮಾ ಎಂಟರ್‌ಪ್ರೈಸಸ್ ಸಂಸ್ಥೆಯಲ್ಲಿ ತಯಾರಾಗಲಿರುವ ಹೊಸ ಸಿನಿಮಾದಲ್ಲಿ ನಾಯಕಿ ನಟಿ ಪಾತ್ರಕ್ಕಾಗಿ ಆಡಿಷನ್
Poornima Enterprises: ಸಿನಿಮಾದಲ್ಲಿ ನಟಿಸುವ ಆಸಕ್ತಿ ಇದೆಯಾ? ಹಾಗಿದ್ರೆ ಇಲ್ಲಿದೆ ನಿಮಗೆ ಅವಕಾಶ! title=

ಬೆಂಗಳೂರು: ಕನ್ನಡ ಚಿತ್ರರಂಗದ ಯಶಸ್ವಿ ನಿರ್ಮಾಣ ಸಂಸ್ಥೆಯಲ್ಲಿ ಪೂರ್ಣಿಮಾ ಎಂಟರ್‌ಪ್ರೈಸಸ್ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಡಾ ಪಾರ್ವತಮ್ಮ ರಾಜ್ ಕುಮಾರ್ ಮುನ್ನಡೆಸುತ್ತಿದ್ದ ಬಹುದೊಡ್ಡ ಚಲನಚಿತ್ರ ನಿರ್ಮಾಣ ಸಂಸ್ಥೆ. ಈ ಸಂಸ್ಥೆಯಡಿ ಬರಲಿರುವ ಹೊಸ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿದೆ.

ಪೂರ್ಣಿಮಾ ಎಂಟರ್‌ಪ್ರೈಸಸ್ ಸಂಸ್ಥೆ(Poornima Enterprises)ಯಲ್ಲಿ ತಯಾರಾಗಲಿರುವ ಹೊಸ ಸಿನಿಮಾದಲ್ಲಿ ನಾಯಕಿ ನಟಿ ಪಾತ್ರಕ್ಕಾಗಿ ಆಡಿಷನ್ ಮಾಡಲಾಗುತ್ತಿದೆ. ಈ ಆಡಿಷನ್‌ನಲ್ಲಿ ಭಾಗವಹಿಸಿ ದೊಡ್ಮನೆ ನಿರ್ಮಾಣದ ಚಿತ್ರದಲ್ಲಿ ಹೀರೋಯಿನ್ ಆಗುವ ಅದೃಷ್ಟ ನಿಮ್ಮದಾಗಬಹುದು.

ಮದುವೆಗೆ ಯಾಕೆ ಕರೆದಿಲ್ಲ ಎಂಬ ಅಭಿಮಾನಿ ಪ್ರಶ್ನೆಗೆ ಪ್ರಿಯಾಂಕ ಚೋಪ್ರಾ ಉತ್ತರ ಹೀಗಿತ್ತು

ಆಡಿಷನ್(Audition)‌ನಲ್ಲಿ ಭಾಗವಹಿಸಲು ನೀವು ಮಾಡಬೇಕಾಗಿರುವುದು:

Aamir Khan- ಕರೋನಾಗೆ ತುತ್ತಾಗಿರುವ ಅಮೀರ್ ಖಾನ್‌ಗೆ ಚೀನಾ ಅಭಿಮಾನಿಗಳು ಹೇಳಿದ್ದೇನು?

- ವಯಸ್ಸು 18-25 ವರ್ಷ

- ಏಪ್ರಿಲ್ 15 ರೊಳಗೆ ನೊಂದಾಯಿಸಿಕೊಳ್ಳಿ

- ಕನ್ನಡ ಭಾಷೆ ಕಡ್ಡಾಯ ಹಾಗೂ ಕಲಿಯುವ ಆಸಕ್ತಿ ಇರಬೇಕು

Sushant Singh: ಆಸ್ಟ್ರೇಲಿಯಾದ ಬೆಂಚ್ ಮೇಲೆ ಸುಶಾಂತ್​​ ಹೆಸರು! ಭಾವುಕ ಪೋಸ್ಟ್ ಶೇರ್​ ಮಾಡಿದ SSR ಸಹೋದರಿ!

ಆಡಿಷನ್ ಅರ್ಜಿಯಲ್ಲಿ ಪ್ರಮುಖವಾಗಿ ಮೂರು ವಿಷಯ:

-ನೀವು ನಟನೆ ತರಬೇತಿ(Acting Training) ಪಡೆದಿದ್ದೀರಾ?

- ಮಾರ್ಷಲ್ ಆರ್ಟ್ಸ್ ತರಬೇತಿ ಇದೆಯಾ?

-ಕುದುರೆ ಸವಾರಿ ಮಾಡಲು ಬರುತ್ತದೆಯೇ?

See Photo- ಇಟಲಿಯಲ್ಲಿ ಟಾಲಿವುಡ್ ಸೂಪರ್‌ಸ್ಟಾರ್ ರವಿ ತೇಜ ಸ್ಟಂಟ್

ಈ ವಿಷಯಗಳನ್ನು ಗಮನಿಸಿರೆ ನಾಯಕಿಯ ಪಾತ್ರ(Female Lead) ಹೇಗಿರಬಹುದು ಎಂಬ ಸಣ್ಣ ಕುತೂಹಲ ಕಣ್ಣ ಮುಂದೆ ಬರುತ್ತದೆ.

ಇದು ಯಾವ ಚಿತ್ರ ಮತ್ತು ನಾಯಕ ಯಾರು ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ನಟ ಯುವರಾಜ್ ಕುಮಾರ್ ಈ ಆಡಿಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪೂರ್ಣಿಮಾ ಎಂಟರ್‌ಪ್ರೈಸಸ್ ಸಂಸ್ಥೆ ನಿರ್ಮಾಣದ ಮುಂದಿನ ಸಿನಿಮಾ ಎಂದು ತಿಳಿಸಿದ್ದಾರೆ.

Bollywood ನಟ ಅಮೀರ್ ಖಾನ್ ಗೆ ಕರೋನಾ ಸೋಂಕು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

 

Trending News