TV Actress: 20ರ ಕಿರುವಯಸ್ಸಲ್ಲಿ ಮದುವೆ, ಪತಿಯ ಮೇಲೆ ಕಿರುಕುಳ ಆರೋಪ ಮಾಡಿದ ಈ ಕಿರುತೆರೆ ನಟಿ ಈಗೆಲ್ಲಿದ್ದಾಳೆ?

Popular TV Actress Personal Life: ಕಿರುತೆರೆ ಹಾಗೂ ಚಲನ ಚಿತ್ರಳಲ್ಲಿ ಕೆಲಸ ಮಾಡಿದ ಈ ಜನಪ್ರಿಯ ನಟಿ ನಂತರದ ದಿನಗಳಲ್ಲಿ ತನ್ನ ವೈಯಕ್ತಿಕ ಜೀವನದ ಕಾರಣ ಕೂಡ ಸಾಕಷ್ಟು ಹೆಡ್ಲೈನ್ ಗಿಟ್ಟಿಸಿದ್ದಾಳೆ, ವಿಶೇಷವಾಗಿ ಈಕೆ ತನ್ನ 20ರ ಕಿರುವಯಸ್ಸಲ್ಲಿ ವಿವಾಹ ಮಾಡಿಕೊಂಡಿದ್ದಾಳೆ. (Entertainment News In Kananda)    

Written by - Nitin Tabib | Last Updated : Apr 1, 2024, 08:57 PM IST
  • ನಟಿಯ ವೃತ್ತಿಜೀವನದ ಕುರಿತು ಹೇಳುವುದಾದರೆ, ಅವರು ಆಕೆ, ರಾಮಾಯಣ, ಶರಾರತ್, ಮಧುಬಾಲಾ-ಏಕ್ ಇಷ್ಕ್ ಏಕ್ ಜುನೂನ್,
  • ಸೋನ್ಪರಿ, ಬಿಗ್ ಬಾಸ್ 8, ರಂಜು ಕಿ ಬೇಟಿಯಾ, ಪಾಲಕ್ ಕಿ ಚಾವ್ ಮೇ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ.
  • ಅವರು ಗ್ಯಾಂಗ್ಸ್ಟರ್, ರಾಣಿ ಹಿಂದೂಸ್ತಾನಿ, ಕೊಯ್ಲಾ, ದಿಲ್ಲಗಿ, ರೀಶ್ತೆ, ಪಾರ್ಟ್‌ನರ್, ಒನ್ ಡೇ: ಜಸ್ಟೀಸ್ ಡೆಲಿವರ್ಡ್‌ನಂತಹ ಚಲನಚಿತ್ರಗಳಲ್ಲಿಯೂ ಕೂಡ ನಟಿಸಿದ್ದಾಳೆ.
TV Actress: 20ರ ಕಿರುವಯಸ್ಸಲ್ಲಿ ಮದುವೆ, ಪತಿಯ ಮೇಲೆ ಕಿರುಕುಳ ಆರೋಪ ಮಾಡಿದ ಈ ಕಿರುತೆರೆ ನಟಿ ಈಗೆಲ್ಲಿದ್ದಾಳೆ? title=

Popular TV Actress ನಟಿ ದೀಪಶಿಖಾ ನಾಗ್ಪಾಲ್ ಕಿರುತೆರೆಯ ಓರ್ವ ಜನಪ್ರಿಯ ನಟಿ. ನಟಿ 1993 ರಲ್ಲಿ ಟಿವಿ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ ಈ ನಟಿ ನಂತರದ ದಿನಗಳಲ್ಲಿ ಚಲನಚಿತ್ರಗಳಲ್ಲಿ ಮತ್ತು ಟಿವಿಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾಳೆ. ದೀಪಶಿಖಾ ತಮ್ಮ ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನದಲ್ಲೂ ಸಾಕಷ್ಟು ಸುದ್ದಿಯಲ್ಲಿರುತ್ತಾಳೆ (popular tv actress personal life ups and downs).

20 ನೇ ವಯಸ್ಸಿನಲ್ಲಿ ಮೊದಲ ಮದುವೆ
ನಟಿ 20 ನೇ ವಯಸ್ಸಿನಲ್ಲಿ ವಿವಾಹವಾಗಿದ್ದಾಳೆ (Deepshikha Nagpal Age). ಆಕೆ ಕೇವಲ 20 ವರ್ಷದವಳಿದ್ದಾಗ ಜೀತ್ ಉಪೇಂದ್ರ (Deepshikha Nagpal Relationship) ಅವರನ್ನು ವಿವಾಹ ಮಾಡಿಕೊಂಡಳು. ಈ ಮದುವೆಯಿಂದ ಆಕೆಗೆ ಇಬ್ಬರು ಮಕ್ಕಳೂ ಇದ್ದಾರೆ. ಆದರೆ ಅವರ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು 10 ವರ್ಷಗಳ ನಂತರ ಆಕೆ ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾಳೆ.

ಇದರ ನಂತರ ಆಕೆ 2012 ರಲ್ಲಿ ಕೇಶವ್ ಅರೋರಾ ಅವರನ್ನು ವಿವಾಹವಾದಳು. ಇವರಿಬ್ಬರೂ 'ಯೇ ದೂರಿಯಾ' ಚಿತ್ರದಲ್ಲಿ ಜೊತೆಗೆ ಕೆಲಸ ಮಾಡಿದ್ದರು. ದೀಪಶಿಖಾ ಈ ಚಿತ್ರದ ಮೂಲಕ ನಿರ್ದೇಶಕಿಯಾಗಿಯೂ ಪಾದಾರ್ಪಣೆ ಮಾಡಿದ್ದಳು. ಆದರೆ ಕೇಶವ್ ಜೊತೆಗಿನ ದಾಂಪತ್ಯವೂ ಹೆಚ್ಚುಕಾಲ ಉಳಿಯಲ್ಲಿಲ್ಲ ಮತ್ತು 4 ವರ್ಷಗಳಲ್ಲೇ ಆಕೆ ಅವರಿನ ವಿಚ್ಛೇದನ ಪಡೆದುಕೊಂಡಳು.

ನಂತರದ ದಿನಗಳಲ್ಲಿ ದೀಪಶಿಖಾ ಅವರು ಕೇಶವ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಕೇಶವ್‌ಗೆ ಹಣ ನೀಡಲು ನಿರಾಕರಿಸಿದಾಗ ಕೇಶವ್ ತನ್ನ ಮೇಲೆ ಕೈ ಎತ್ತಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ದೀಪಶಿಖಾ ಹೇಳಿದ್ದರು.

ಪತಿ ವಿರುದ್ಧ ಆಕೆಯ ಆರೋಪ ಏನು? (Deepsikha Nagpal Personal Life)
ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ದೀಪಶಿಖಾ, 'ಜನರು ವುಮೆನ್ ಹುಡ್ ಆಚರಿಸುತ್ತಿದ್ದಾಗ ನನ್ನನ್ನು ನಿಂದಿಸಲಾಯಿತು. ನನ್ನ ಅನುಮತಿಯಿಲ್ಲದೆ ಅವನು ನನ್ನ ಮನೆಗೆ ಹೇಗೆ ಪ್ರವೇಶಿಸಬಹುದು? ಕೇಶವ ನನ್ನ ಮನೆಗೆ ಬಂದು ಹಣ ಕೇಳುತ್ತಿದ್ದ. ನಾನು ನಿರಾಕರಿಸಿದಾಗ, ಅವನು ನನಗೆ ಹೊಡೆಯಲು ಪ್ರಾರಂಭಿಸುತ್ತಿದ್ದ. ನನ್ನ ಮೂಗಿನಿಂದ ರಕ್ತ ಬರುತ್ತಿತ್ತು. ನನ್ನ ಮೈಮೇಲೆ ಅನೇಕ ಗಾಯಗಳಿದ್ದವು. ಈ ಘಟನೆಯ ನಂತರ ನನಗೆ ಆಘಾತವಾಗಿದೆ. ತಾನು ಮನುಷ್ಯನಾಗಿರುವುದರಿಂದ ಏನು ಬೇಕಾದರೂ ತಪ್ಪಿಸಿಕೊಳ್ಳಬಹುದು ಎಂದು ಅವನು ಭಾವಿಸುತ್ತಾನೆ. ನಾನು ಅಳುವವಳಲ್ಲ, ಆತನಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದಿದ್ದಳು.

ದೀಪಶಿಖಾ ಅವರು ಕೇಶವ್ ವಿರುದ್ಧ (Deepshikha Nagpal Husband) ದೂರು ದಾಖಲಿಸಿದ್ದಾರೆ, ಆದರೆ ಅದೇ ವರ್ಷದ ನವೆಂಬರ್‌ನಲ್ಲಿ ಇಬ್ಬರೂ ತಮ್ಮ ಸಂಬಂಧಕ್ಕೆ ಮತ್ತೊಂದು ಅವಕಾಶವನ್ನು ನೀಡಲು ಯೋಚಿಸಿದರು ಮತ್ತು ಅದನ್ನು ಸರಿಪಡಿಸಿದರು. ಆದರೆ ಸ್ವಲ್ಪ ಸಮಯದ ನಂತರ ಇಬ್ಬರೂ ಶಾಶ್ವತವಾಗಿ ಬೇರ್ಪಟ್ಟರು.

ಇದನ್ನೂ ಓದಿ-'CREW Worldwide Collection: ಬಿಡುಗಡೆಯ ಮೊದಲ ದಿನವೇ 20ಕೋಟಿ ರೂ.ಗಳಿಕೆ ಮಾಡಿ ದಾಖಲೆ ಬರೆದ 'Crew'

ಈ ಷೋಗಳು ಮತ್ತು ಚಲನಚಿತ್ರಗಳಲ್ಲಿ ಕಂಡುಬಂದಿದ್ದಳು
ನಟಿಯ ವೃತ್ತಿಜೀವನದ ಕುರಿತು ಹೇಳುವುದಾದರೆ, ಅವರು ಆಕೆ, ರಾಮಾಯಣ, ಶರಾರತ್, ಮಧುಬಾಲಾ-ಏಕ್ ಇಷ್ಕ್ ಏಕ್ ಜುನೂನ್, ಸೋನ್ಪರಿ, ಬಿಗ್ ಬಾಸ್ 8, ರಂಜು ಕಿ ಬೇಟಿಯಾ, ಪಾಲಕ್ ಕಿ ಚಾವ್ ಮೇ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅವರು ಗ್ಯಾಂಗ್ಸ್ಟರ್, ರಾಣಿ ಹಿಂದೂಸ್ತಾನಿ, ಕೊಯ್ಲಾ, ದಿಲ್ಲಗಿ, ರೀಶ್ತೆ, ಪಾರ್ಟ್‌ನರ್, ಒನ್ ಡೇ: ಜಸ್ಟೀಸ್ ಡೆಲಿವರ್ಡ್‌ನಂತಹ ಚಲನಚಿತ್ರಗಳಲ್ಲಿಯೂ ಕೂಡ ನಟಿಸಿದ್ದಾಳೆ.

ಇದನ್ನೂ ಓದಿ-Samantha Ruth Prabhu: 'ಲೈಂಗಿಕತೆಯ ವಿಚಾರದಲ್ಲಿ ನಾನು ಯಾವಾಗಲೂ...', ಬೆಚ್ಚಿಬೀಳಿಸುವ ಹೇಳಿಕೆ ನೀಡಿದ ಸಮಂತಾ!

ನಟಿ ಇನ್ನೂ ನಿರಂತರವಾಗಿ ಕೆಲಸ ಮಾಡುತ್ತಿದ್ದಾಳೆ. ಕೊನೆಯ ಬಾರಿ ಆಕೆ  2023 ರಲ್ಲಿ ಪಾಲಕ್ ಕಿ ಚಾವ್ ಶೋನಲ್ಲಿ ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡ

Trending News