ಕೆಜಿಎಫ್ ನಲ್ಲಿನ ಯಶ್ ಖದರ್ ಗೆ ಬಾಹುಬಲಿ ಪ್ರಭಾಸ್ ಮೆಚ್ಚುಗೆ

ಬಾಹುಬಲಿ ಪಾತ್ರದಿಂದ ಇಡಿ ದೇಶದ ಗಮನ ಪ್ರಭಾಸ್ ಈಗ ಬಹುನಿರೀಕ್ಷಿತ ಕೆಜಿಎಫ್ ಸಿನಿಮಾದ ಟ್ರೈಲರ್ ನಲ್ಲಿ ಯಶ್ ಖದರ್ ಗೆ ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ.

Last Updated : Dec 9, 2018, 12:48 PM IST
ಕೆಜಿಎಫ್ ನಲ್ಲಿನ ಯಶ್ ಖದರ್ ಗೆ ಬಾಹುಬಲಿ ಪ್ರಭಾಸ್ ಮೆಚ್ಚುಗೆ  title=
Photo courtesy: Facebook

ಬೆಂಗಳೂರು: ಬಾಹುಬಲಿ ಪಾತ್ರದಿಂದ ಇಡಿ ದೇಶದ ಗಮನ ಪ್ರಭಾಸ್ ಈಗ ಬಹುನಿರೀಕ್ಷಿತ ಕೆಜಿಎಫ್ ಸಿನಿಮಾದ ಟ್ರೈಲರ್ ನಲ್ಲಿ ಯಶ್ ಖದರ್ ಗೆ ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ.

70, 80ರ ದಶಕದ ಹಿನ್ನಲೆ ಕಥೆಯನ್ನು ಹೊಂದಿರುವ ಈ ಸಿನಿಮಾ ಈಗಾಗಲೇ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾದ ಟ್ರೈಲರ್ ಭಾರಿ ಸುದ್ದಿ ಮಾಡಿದೆ.ಆ ಮೂಲಕ ಕನ್ನಡದ ಚಿತ್ರವೊಂದು ಇಡೀ ಭಾರತದಾದ್ಯಂತ ಸದ್ದು ಮಾಡುತ್ತಿರುವುದು ಇದೇ ಮೊದಲನೇ ಭಾರಿ ಎಂದು ಹೇಳಲಾಗುತ್ತಿದೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.ಮೂಲಗಳ ಪ್ರಕಾರ ಈ ಚಿತ್ರಕ್ಕಾಗಿ ಮೂರು ವರ್ಷಗಳಿಗೂ ಅಧಿಕ ಕಾಲ ಶ್ರಮಿಸಲಾಗಿದೆ.ಇದೇ ಡಿಸೆಂಬರ್ 21 ರಂದು  ಬಿಡುಗಡೆಯಾಗುವ  ಕೆಜಿಎಫ್ ಶಾರುಖ್ ಖಾನ್ ಚಿತ್ರ  ಜೀರೋಗೆ ಸಡ್ಡುಹೊಡೆಯುತ್ತಿದೆ.ಈಗ ಬಾಹುಬಲಿ ಹೀರೋ ರಾಕಿಂಗ್ ಸ್ಟಾರ್ ಯಶ್ ರನ್ನು ಮುಂಬೈನ ಪಾಲಿ ಭವನದಲ್ಲಿ ಭೇಟಿಯಾಗಿ ಚಿತ್ರದ ಟ್ರೈಲರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Trending News