RRR ದಾಖಲೆ ಮುರಿದ ಸಲಾರ್ : ಬಿಡುಗಡೆಗೂ ಮುನ್ನವೇ ಹಿಸ್ಟರಿ ಕ್ರಿಯೆಟ್‌ ಮಾಡಿತು ಕನ್ನಡಿಗನ ಸಿನಿಮಾ

Salaar movie : ಪ್ರಭಾಸ್ 'ಸಾಲಾರ್' ಬಿಡುಗಡೆಗೂ ಮುನ್ನವೇ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ RRR ದಾಖಲೆಯನ್ನು ಪ್ರಶಾಂತ್‌ ನೀಲ್‌ ಸಿನಿಮಾ ಬ್ರೇಕ್‌ ಮಾಡಿದೆ. ಚಿತ್ರವು ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.   

Written by - Krishna N K | Last Updated : Aug 9, 2023, 04:19 PM IST
  • ಬಿಡುಗಡೆಗೂ ಮುನ್ನವೇ ದಾಖಲೆ ಸೃಷ್ಟಿಸಿದ ಸಲಾರ್‌.
  • ಆರ್‌ಆರ್‌ಆರ್‌ ರೆಕಾರ್ಡ್‌ ಬ್ರೇಕ್‌ ಮಾಡಿದ ಪ್ರಭಾಸ್‌ ಸಿನಿಮಾ.
  • ಕನ್ನಡಿಗ ಪ್ರಶಾಂತ್‌ ನೀಲ್‌ ಚಿತ್ರ ಯುಸ್‌ನಲ್ಲಿ ರಿಲೀಸ್‌.
RRR ದಾಖಲೆ ಮುರಿದ ಸಲಾರ್ : ಬಿಡುಗಡೆಗೂ ಮುನ್ನವೇ ಹಿಸ್ಟರಿ ಕ್ರಿಯೆಟ್‌ ಮಾಡಿತು ಕನ್ನಡಿಗನ ಸಿನಿಮಾ title=

Salaar break RRR Record : ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಸಿನಿಮಾ 'ಸಾಲಾರ್'. ಈ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಮೊದಲ ಭಾಗಕ್ಕೆ 'ಸಲಾರ್: ಭಾಗ 1 ಕದನ ವಿರಾಮ' ( Salaar 1 : Ceasefire) ಎಂದು ಹೆಸರಿಸಲಾಗಿದೆ. ಚಿತ್ರ ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. 

ಆದರೆ ಬಿಡುಗಡೆಗೂ ಮುನ್ನವೇ ಸಲಾರ್ ಸದ್ದು ಮಾಡುತ್ತಿದ್ದು, 'RRR' ನಿರ್ಮಿಸಿದ್ದ ದಾಖಲೆಯನ್ನು ಸಲಾರ್ ಮುರಿದಿದೆ. ಹೌದು.. ಸಲಾರ್ ಯುಎಸ್ ವಿತರಕರು ಈ ಚಲನಚಿತ್ರವನ್ನು ಅಮೆರಿಕದಲ್ಲಿ ಎಲ್ಲಾ ಸಿನಿಮಾರ್ಕ್ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇದುವರೆಗೆ ಯಾವುದೇ ಕನ್ನಡ ಮತ್ತು ತೆಲುಗು ಸಿನಿಮಾ ಇಂತಹ ಸಾಧನೆ ಮಾಡಿಲ್ಲ. RRR ಸಿನಿಮಾ 285 ಸಿನಿಮಾರ್ಕ್ ಥಿಯೇಟರ್ ನಲ್ಲಿ ರಿಲೀಸ್ ಮಾಡಿ ದಾಖಲೆ ಸೃಷ್ಟಿಸಿತ್ತು.. ಈಗ ಅದನ್ನು ಮೀರಿಸಲು ಸಲಾರ್ ರೆಡಿಯಾಗಿದೆ. ಇದಲ್ಲದೆ, ಸಲಾರ್ ಚಲನಚಿತ್ರವು ಉತ್ತರ ಅಮೆರಿಕಾದಲ್ಲಿ 1980 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. 

ಇದನ್ನೂ ಓದಿ: ʼರಾಘುʼ ಮಡದಿಯ ಅಗಲಿಕೆಗೆ ಸ್ಯಾಂಡಲ್‌ವುಡ್‌ ಕಂಬನಿ..! ಭಾವುಕ ಕ್ಷಣದ ಫೋಟೋಸ್‌..

ಎರಡು ಭಾಗಗಳಲ್ಲಿ ಬರುತ್ತಿರುವ ಸಲಾರ್ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಮುಂತಾದವರು ಇದರಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಲಾರ್ ಚಿತ್ರದಲ್ಲಿ ಕನ್ನಡದ ಸ್ಟಾರ್ ಹೀರೋ ಯಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಈಗಾಗಲೇ ಈ ಸಿನಿಮಾದಿಂದ ಬಿಡುಗಡೆಯಾಗಿರುವ ಪೋಸ್ಟರ್ ಹಾಗೂ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಜಿಎಫ್ ಮಾದರಿಯಲ್ಲೇ ಸಲಾರ್ ಸಿನಿಮಾ ಬರಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News