Prashanth Neel: ಪ್ರಶಾಂತ್ ನೀಲ್ ಟ್ವಿಟರ್ ಖಾತೆ ಕ್ಲೋಸ್! ಇದಕ್ಕೆ ಕಾರಣವಾಯ್ತಾ ಉರ್ದು ಟ್ವೀಟ್​?

Prashanth Neel Twitter account closed : ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು. ಟ್ವೀಟ್‌ ಮೂಲಕ ಯಶ್‌ಗೆ ಬರ್ತ್‌ ಡೇ ವಿಶ್‌ ಮಾಡಿದರು. ಅದಾದ ಮೇಲೆ ಅವರ ಟ್ವಿಟರ್ ಖಾತೆಯನ್ನು ನಿಷ್ಕ್ರೀಯಗೊಳಿಸಲಾಗಿದೆ. ಹುಟ್ಟುಹಬ್ಬದ ಶುಭಾಶಯಗಳಿಗೆ ವಿರೋಧ ವ್ಯಕ್ತವಾದ ಕಾರಣ ಕ್ಲೋಸ್‌ ಮಾಡಿರಬಹುದು ಎಂದು ಹೇಳಲಾಗುತ್ತಿದೆ. 

Written by - Chetana Devarmani | Last Updated : Jan 10, 2023, 06:33 PM IST
  • ಪ್ರಶಾಂತ್ ನೀಲ್ ಟ್ವಿಟರ್ ಖಾತೆ ಕ್ಲೋಸ್!
  • ಇದಕ್ಕೆ ಕಾರಣವಾಯ್ತಾ ಉರ್ದು ಟ್ವೀಟ್​?
  • ಯಶ್‌ ಬರ್ತ್‌ ಡೇಗೆ ಉರ್ದುವಿನಲ್ಲಿ ವಿಶ್‌
Prashanth Neel: ಪ್ರಶಾಂತ್ ನೀಲ್ ಟ್ವಿಟರ್ ಖಾತೆ ಕ್ಲೋಸ್! ಇದಕ್ಕೆ ಕಾರಣವಾಯ್ತಾ ಉರ್ದು ಟ್ವೀಟ್​?  title=
ಪ್ರಶಾಂತ್ ನೀಲ್

Prashanth Neel: ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು. ಟ್ವೀಟ್‌ ಮೂಲಕ ಯಶ್‌ಗೆ ಬರ್ತ್‌ ಡೇ ವಿಶ್‌ ಮಾಡಿದರು. ಅದಾದ ಮೇಲೆ ಅವರ ಟ್ವಿಟರ್ ಖಾತೆಯನ್ನು ನಿಷ್ಕ್ರೀಯಗೊಳಿಸಲಾಗಿದೆ. ಹುಟ್ಟುಹಬ್ಬದ ಶುಭಾಶಯಗಳಿಗೆ ವಿರೋಧ ವ್ಯಕ್ತವಾದ ಕಾರಣ ಕ್ಲೋಸ್‌ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳೊಂದಿಗೆ ಅನೇಕ ವಿಷಯಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮವು ತುಂಬಾ ಉಪಯುಕ್ತವಾಗಿದೆ. ಯಾವುದೇ ಸಣ್ಣ ವಿಷಯ ಹಾಕಿದರೆ ಕೋಟಿ ಜನಕ್ಕೆ ಗೊತ್ತಾಗುತ್ತದೆ. ಆದರೆ ಕೆಲವೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಹಾಕುವ ಪೋಸ್ಟ್‌ ವಿವಾದಗಳಿಗೆ ಕಾರಣವಾಗುತ್ತವೆ. ಇತ್ತೀಚೆಗೆ ಪ್ರಶಾಂತ್ ನೀಲ್ ಟ್ವೀಟ್ ಕೂಡ ವಿವಾದ ಸೃಷ್ಟಿಸಿತ್ತು. ಈ ವಿವಾದದಿಂದಾಗಿ ಪ್ರಶಾಂತ್ ನೀಲ್ ಅವರ ಟ್ವಿಟರ್ ಖಾತೆಯನ್ನು ಕ್ಲೋಸ್‌ ಮಾಡಲಾಗಿದೆ.

ಇದನ್ನೂ ಓದಿ : Pathaan Trailer: ಪಠಾಣ್ ಟ್ರೇಲರ್‌ನಲ್ಲಿ ದೀಪಿಕಾ ಪಡುಕೋಣೆಯ 'ಕೇಸರಿ ಬಿಕಿನಿ' ಮಾಯ!!

ಜನವರಿ 8 ರಂದು ರಾಕಿ ಭಾಯ್ ಯಶ್ ಜನ್ಮದಿನ ಇತ್ತು. ಈ ಸಂದರ್ಭದಲ್ಲಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಶುಭ ಹಾರೈಸಿದರು. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ವಿರೋಧದ ಕಾರಣ ಈ ಸ್ಟಾರ್ ನಿರ್ದೇಶಕ ಉರ್ದುವಿನಲ್ಲಿ ವಿಶ್ ಹೇಳಿದ್ದು. ಇದರಿಂದ ಕನ್ನಡಿಗರು ಆಕ್ರೋಶಗೊಂಡಿದ್ದರು. ಪ್ರಶಾಂತ್ ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದರು.

ಪ್ರಶಾಂತ್ ನೀಲ್ ಅವರು ಉರ್ದುವಿನಲ್ಲಿ ಬರೆಯುವ ಮೂಲಕ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಈ ಟ್ವೀಟ್‌ಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಕನ್ನಡದಲ್ಲಿ ಟ್ವೀಟ್ ಮಾಡಬಹುದಿತ್ತು ಎಂದು ಪ್ರಶಾಂತ್ ನೀಲ್ ಟೀಕಿಸಿದ್ದಾರೆ. ಆದರೆ ಪ್ರಶಾಂತ್ ನೀಲ್ ಉರ್ದುವಿನಲ್ಲಿ ಟ್ವೀಟ್‌ ಮಾಡಿದ ಬಳಿಕ ಅವರ ಟ್ವಿಟರ್‌ ಖಾತೆಯನ್ನು ಕ್ಲೋಸ್‌ ಮಾಡಿರಬಹುದು ಎನ್ನಲಾಗುತ್ತಿದೆ. 

ಸದ್ಯ 'ಸಲಾರ್' ಸಿನಿಮಾದಲ್ಲಿ ಬ್ಯುಸಿಯಾಗಿರುವ ಪ್ರಶಾಂತ್ ನೀಲ್ ಅವರ ಟ್ವಿಟರ್‌ ಖಾತೆ ಸದ್ಯ ನಿಷ್ಕ್ರೀಯವಾಗಿದ್ದು, ಯಾರೋ ಹ್ಯಾಕ್ ಮಾಡಿದ್ದಾರೋ ಅಥವಾ ಅಕೌಂಟ್ ಕ್ಲೋಸ್ ಮಾಡಿದ್ದಾರೋ ಗೊತ್ತಿಲ್ಲ. 

ಇದನ್ನೂ ಓದಿ : Shakunthalam trailer: ಈ ಕಾರಣಕ್ಕೆ ವೇದಿಕೆ ಮೇಲೆಯೇ ಬಿಕ್ಕಿ ಬಿಕ್ಕಿ ಅತ್ತ ನಟಿ ಸಮಂತಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News