ʼಅಪ್ಪುʼ ಮಾಡಿದ ಎಲ್ಲಾ ಕೆಲಸಗಳು ಸುಳ್ಳಂತೆ..! ಟ್ಟಿಟರ್‌ನಲ್ಲಿ ʼಪುನೀತ್‌ ಸ್ಕ್ಯಾಮ್ಸ್‌ʼ ಹ್ಯಾಷ್‌ ಟ್ಯಾಗ್‌ ವೈರಲ್‌

Puneeth rajkumar : ಇಂದು ನಟ ಪುನೀತ್‌ ರಾಜಕುಮಾರ್‌ ಅವರ ಹುಟ್ಟು ಹಬ್ಬ, ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಅವರ ಬಗ್ಗೆ ಕಿಡಗೇಡಿಗಳು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಪುನೀತ್‌ ರಾಜಕುಮಾರ್‌ ಸ್ಕ್ಯಾಮ್ಸ್‌ ಎಂಬ ಹ್ಯಾಷ್‌ ಟ್ಯಾಗ ಬಳಸಿ ದೊಡ್ಮನೆ ಮಗ ಯಾವುದೇ ಸಾಮಾಜಿಕ ಕೆಲಸಗಳನ್ನು ಮಾಡಿಲ್ಲ ಎಂದು ದೂರುತ್ತಿದ್ದಾರೆ. 

Written by - Krishna N K | Last Updated : Mar 19, 2023, 05:20 PM IST
  • ನಟ, ಪುನೀತ್‌ ರಾಜಕುಮಾರ್‌ ಅವರು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಯುವ ಜನತೆಗೆ ಮಾದರಿಯಾಗಿದ್ದಾರೆ.
  • ಅವರ ನಿಧನದ ನಂತರ ನಡೆದ ರಕ್ತದಾನದಂತಹ ಕೆಲಸಗಳು ದಾಖಲೆ ಸೃಷ್ಟಿಸಿವೆ.
  • ಆದ್ರೆ ಇಂದು ʼಪುನೀತ್‌ ರಾಜಕುಮಾರ್‌ ಸ್ಕ್ಯಾಮ್ಸ್‌ʼ ಎಂಬ ಹ್ಯಾಷ್‌ ಟ್ಯಾಗ್‌ ಸದ್ದು ಮಾಡುತ್ತಿದೆ.
ʼಅಪ್ಪುʼ ಮಾಡಿದ ಎಲ್ಲಾ ಕೆಲಸಗಳು ಸುಳ್ಳಂತೆ..! ಟ್ಟಿಟರ್‌ನಲ್ಲಿ ʼಪುನೀತ್‌ ಸ್ಕ್ಯಾಮ್ಸ್‌ʼ ಹ್ಯಾಷ್‌ ಟ್ಯಾಗ್‌ ವೈರಲ್‌ title=

Puneeth Rajkumar scams : ಕರ್ನಾಟಕ ರತ್ನ ನಟ, ಪುನೀತ್‌ ರಾಜಕುಮಾರ್‌ ಅವರು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಯುವ ಜನತೆಗೆ ಮಾದರಿಯಾಗಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಇಂದು ಅಪ್ಪು ಹುಟ್ಟುಹಬ್ಬ ಇದರ ನಡುವೆ ಟ್ಟಿಟರ್‌ನಲ್ಲಿ ʼಪುನೀತ್‌ ರಾಜಕುಮಾರ್‌ ಸ್ಕ್ಯಾಮ್ಸ್‌ʼ ಎಂಬ ಹ್ಯಾಷ್‌ ಟ್ಯಾಗ್‌ ಸದ್ದು ಮಾಡುತ್ತಿದ್ದು, ಪುನೀತ್‌ ಯಾವುದೇ ಸಮಾಜಸೇವೆ ಮಾಡಿಲ್ಲ ಎಂದು ಕೆಲವು ನೆಟ್ಟಿಗರು ಆರೋಪಿಸುತ್ತಿದ್ದಾರೆ.

ಹೌದು.. ಅಪ್ಪು ಅವರು ಅದೆಷ್ಟೋ ಯುವಕರಿಗೆ ದಾರಿ ದೀಪವಾಗಿದ್ದಾರೆ. ಅವರ ನಿಧನದ ನಂತರ ನಡೆದ ರಕ್ತದಾನದಂತಹ ಕೆಲಸಗಳು ದಾಖಲೆ ಸೃಷ್ಟಿಸಿವೆ. ಅಲ್ಲದೆ, ಅನಾಥಾಶ್ರಮ ನಡೆಸುವ ಮೂಲಕ ಅದೇಷ್ಟೋ ಜನರಿಗೆ ಆಸರೆಯಾಗಿರುವ ವಿಚಾರ ಜಗಜ್ಜಾಹಿರಾಗಿದೆ. ಸ್ವತಃ ವೈದ್ಯರು ಸಹ ಅಪ್ಪು ಅವರ ಸ್ಪೂರ್ತಿಯಿಂದ ಹೆಚ್ಚಿನ ರಕ್ತದಾನ ಮತ್ತು ನೇತ್ರದಾನ ನೊಂದಣಿ ಜರುಗುತ್ತಿವೆ ಅಂತ ಹೇಳಿದ್ದರು.

ಇದನ್ನೂ ಓದಿ: SHIVANNA- APPU: ʼನೀನು ಹುಟ್ಟಿದ್ದೇ ಒಂದು ಉತ್ಸವ,ನೀನು ಬೆಳೆದಿದ್ದೆ ಇತಿಹಾಸʼ

ಆದ್ರೆ, ಇದೀಗ ಕೆಲವು ಕಿಡಿಗೇಡಿಗಳು ಅಪ್ಪು ಅವರ ಕುರಿತು ಕೆಟ್ಟದಾಗಿ ಮಾಹಿತಿ ಹಂಚುತ್ತಿದ್ದಾರೆ. ಪುನೀತ್‌ ಯಾವುದೇ ಸಾಮಾಜಿಕ ಸೇವೆ ಮಾಡಿಲ್ಲ, ಶಾಲೆಗಳನ್ನು ತೆರೆದಿಲ್ಲ, ಅನಾಥಾಶ್ರಮ ಇವರದಲ್ಲ ಎಂದು ಉದ್ಧಟತನದಿಂದ ಟ್ರೋಲ್‌ ಮಾಡುತ್ತಿದ್ದಾರೆ. ಈ ಕುರಿತು ಹಲವಾರು ಪೋಸ್ಟರ್‌ಗಳು ಟ್ಟಿಟರ್‌ನಲ್ಲಿ ಹರಿದಾಡುತ್ತಿವೆ. ಒಂದು ಕಡೆ ಯುವರತ್ನನ ಅಭಿಮಾನಿಗಳು ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದರೆ ಕೆಲ ನೆಟ್ಟಿಗರು ಈ ರೀತಿಯಾಗಿ ಅವರ ಹೆಸರು ಕೆಡಿಸುತ್ತಿರುವುದು ಬೆಳಗಿಗೆ ಬಂದಿದೆ.

ಇನ್ನು #Puneethrajkumarscams ಎಂಬ ಹ್ಯಾಷ್‌ ಟ್ಯಾಗ್‌ ಕೂಡ ಟ್ಟಿಟರ್‌ನಲ್ಲಿ ಟ್ರೆಂಡ್‌ ಆಗುತ್ತಿವೆ. ಕೆಲವು ನೆಟ್ಟಿಗರು ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ. ಅದ್ರೆ ಟ್ರೋಲ್‌ ಮಾಡುವುದನ್ನು ಕಿಡಿಗೇಡಿಗಳು ನಿಲ್ಲಿಸಿಲ್ಲ. ಪುನೀತ್‌ ರಾಜ್‌ಕುಮಾರ್‌ ಯಾವುದೇ ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಗೋಶಾಲೆಗಳನ್ನು ನಡೆಸಿಲ್ಲ ಎಂದು ವಾದಿಸುತ್ತಿದ್ದಾರೆ. ಇದು ಎಲ್ಲಿ ವರೆಗೂ ಹೋಗುತ್ತೆ ಅನ್ನೋದನ್ನು ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News